

ಮೈಸೂರು: ವಿಶ್ವಋಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ನಟ ದಿ.ಪುನೀತ್ ರಾಜ್ ಕುಮಾರ್ ನೆನಪು ಮತ್ತು ವಿಕ್ರಾಂತ್ ರೋಣ ಸಿನಿಮಾದ ಯಶಸ್ವಿಗಾಗಿ ನೃತ್ಯ ಮತ್ತು ಏಕಪಾತ್ರ ಅಭಿನಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ರೀತಿಯ ಕಲೆ ಇರುತ್ತದೆ. ಕಲೆಯನ್ನು ಅಭಿವ್ಯಕ್ತಗೊಳಿಸಲು ವಿಶ್ವಋಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್ ವೇದಿಕೆ ಒದಗಿಸಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಕೆಎಎಸ್ ಅಧಿಕಾರಿ ಕೆ.ಜೆ. ಶ್ರೀಧರ್, ಕೆಎಸ್‌ಆರ್‌ಟಿಸಿ ಮಾಜಿ ನಿರ್ದೇಶಕ ಬನ್ನೂರು ಕುಮಾರ್, ಶಿಕ್ಷಕ ಸುತ್ತೂರು ಜಯರಾಮ್, ಕಲಾವಿದ ಡ್ರಾಮ ರಂಗಸ್ವಾಮಿ, ಟ್ರಸ್ಟ್ ಅಧ್ಯಕ್ಷ ವಾಲ್ಮೀಕಿ ನಿಂಗರಾಜು, ಪದಾಧಿಕಾರಿಗಳಾದ ಎಂ.ಡಿ. ನಾಗೇಂದ ಯಡಕೊಳ, ಕೃಷ್ಣ, ಮರಿಸ್ವಾಮಿ ಹಾಗೂ ಇತರರು ಇದ್ದರು.