

ವಿಜಯವಾಣಿ ಸುದ್ದಿಜಾಲ ಉಡುಪಿ
ಎಲ್ಲ ಸಾಧಕರಿಗೂ ಮೂಲ ಶಕ್ತಿಯೇ ಭಗವಂತನಾದ ಶ್ರೀಕೃಷ್ಣ. ಯಾವುದೇ ದೊಡ್ಡ ಸಾಧಕರಿದ್ದರೂ ಅವರೆಲ್ಲರೂ ದೇವರ ಅನುಗ್ರಹದಿಂದ ಮಾತ್ರ ಸಾಧಕರಾಗಿದ್ದಾರೆ. ದೇವರ ಅನುಗ್ರಹವಿಲ್ಲದೆ ಏನೂ ಸಾಧಿಸಲಾಗದು. ದೇವರು ಎಲ್ಲರಿಗೂ ಅವಕಾಶ ಕೊಟ್ಟರೂ ಸಾಧಿಸಲಾಗುವುದಿಲ್ಲ. ಅವಕಾಶವನ್ನು ಯಾರು ಸರಿಯಾಗಿ ಅರ್ಥೈಸಿಕೊಂಡು ಬಳಸಿಕೊಳ್ಳುತ್ತಾರೋ ಅವರು ಸಾಧಕರಾಗುತ್ತಾರೆ ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ನಂದನಾ ಎ. ಪ್ರಾರ್ಥಿಸಿದರು. ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಪರಿಚಯಿಸಿದರು. ಜ್ಞಾನೇಶ್ವರ ಜವಳಿ ಸ್ವಾಗತಿಸಿದರು. ವಿ.ಧನಂಜಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸೃಷ್ಟಿ ಕಲಾ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಸಾಧನೆ ಮಾಡುವುದು ಸುಲಭವಲ್ಲ. ಎಲ್ಲರಿಂದಲೂ ಸಾಧನೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಯೋಗ್ಯತೆ ಬೇಕು. ಅನೇಕರಿಗೆ ಯೋಗ್ಯತೆ ಇರುತ್ತದೆ. ಆದರೆ, ಪ್ರಯತ್ನವನ್ನೇ ಮಾಡುವುದಿಲ್ಲ. ಯೋಗ್ಯತೆಯೊಂದಿಗೆ ಪ್ರಯತ್ನಶೀಲತೆಯೂ ಬೇಕು. ಇವೆರಡರಿಂದ ಸಾಧನೆ ಮಾಡಲಾಗದು. ಅದಕ್ಕೆ ಮುಖ್ಯವಾಗಿ ಭಗವಂತನ ಅನುಗ್ರಹ ಬೇಕಾಗುತ್ತದೆ. | ವಿದ್ಯಾಶ್ರೀಶ ತೀರ್ಥ ಶ್ರೀಪಾದರು. ಸೋಸಲೆ ವ್ಯಾಸರಾಜ ಮಠ