ಮೈಸೂರು: ಎಫ್‌ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ಮರಗಳ ಹನನ ಪ್ರಕರಣದಲ್ಲಿ ಸಂಸದ ಪ್ರತಾಪಸಿಂಹ ಅವರ ಸಹೋದರ ವಿಕ್ರಂ ಸಿಂಹ ಹೆಸರು ಹೇಳಿ ತೇಜೋವಧೆ ಮಾಡಲಾಗುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂ.ಜೆ.ಕಿರಣ್‌ಗೌಡ ಬೇಸರ ವ್ಯಕ್ತಪಡಿಸಿದರು.
ಶುಂಠಿ ಬೆಳೆಯಲೆಂದು ವಿಕ್ರಂ ಸಿಂಹ ಅವರು ಮಾಲೀಕರೊಡನೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಅವರು ಜಮೀನು ಸ್ವಾಧೀನಪಡಿಸಿಕೊಳ್ಳುವ ಮೊದಲೇ ಮರಗಳ ಹನನ ನಡೆದಿದೆ. ಎಫ್‌ಐಆರ್‌ನಲ್ಲಿ ಸಹ ಅವರ ಹೆಸರಿಲ್ಲ. ಆದರೂ ಅವರ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸೇರಿದಂತೆ ಇತರರು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮರಗಳ ಹನನ ಪ್ರಕರಣಕ್ಕೂ, ವಿಕ್ರಂ ಸಿಂಹ ಅವರಿಗೂ ಯಾವುದೇ ಸಂಬಂಧವಿಲ್ಲ. ಸುಖಾಸುಮ್ಮನೆ ಅವರ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೋರ್ಚಾದ ವಿವಿಧ ಪದಾಧಿಕಾರಿಗಳಾದ ಹರ್ಷಿತ್‌ಕುಮಾರ್, ಪುನೀತ್, ಕೆಂಚ, ಮಧು, ಭರತ್‌ಕುಮಾರ್, ಸಂತೋಷ್‌ಕುಮಾರ್, ಗಿರೀಶ್‌ಗೌಡ ಇದ್ದರು.