

ಹುಬ್ಬಳ್ಳಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಇಸ್ರೋ ಸಂಸ್ಥಾಪಕ ವಿಕ್ರಮ್ ಸಾರಾಭಾಯಿ ಜನ್ಮದಿನ ಹಾಗೂ ಚಂದ್ರಯಾನ-3ರ ಸಂಭ್ರಮಾಚರಣೆ ಆಯೋಜಿಸಲಾಗಿತ್ತು.
ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್. ಕೆ. ಆದಪ್ಪನವರ ಮಾತನಾಡಿ, ವಿಕ್ರಮ ಸಾರಾಭಾಯಿ ಅವರು ಜಗತ್ತಿನ ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿಗಳಾಗಿದ್ದರು. ಇಸ್ರೋ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅವರ ಕನಸಿನಂತೆ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು 1975 ರಲ್ಲಿ ಆರ್ಯಭಟ ಬಾಹ್ಯಾಕಾಶ ನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಶಾಲೆ ಅಧ್ಯಕ್ಷ ಜಯಪ್ರಕಾಶ ಟೆಂಗಿನಕಾಯಿ ಮಾತನಾಡಿ, ವಿದ್ಯಾರ್ಥಿಗಳು ಮೆಡಿಕಲ್, ಇಂಜಿನಿಯರಿಂಗ್ ಕೋರ್ಸ್ಗಳತ್ತ ಆಕರ್ಷಿತರಾಗದೆ ಬಾಹ್ಯಾಕಾಶ ವಿಜ್ಞಾನ, ಅಣು ವಿಜ್ಞಾನ ಕೊರ್ಸ್ಗಳನ್ನು ಅಭ್ಯಸಿಸಲು ಮುಂದಾಗಬೇಕು ಎಂದರು. ಪ್ರಾಚಾರ್ಯು ನೇಹಾ ಗಾಡಗೋಳಿ ವಂದಿಸಿದರು.