ವಿಕಾಸ ಶರ್ಮಾ ಬಂಧನ

crime
Published on

ಹುಬ್ಬಳ್ಳಿ: ಇಲ್ಲಿಯ ಹಳೇ ಕೋರ್ಟ್ ವೃತ್ತದಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್ ಕಾಮಗಾರಿ ವೇಳೆ ಕಬ್ಬಿಣದ ಪೈಪ್ ಬಿದ್ದು ಮೃತಪಟ್ಟ ಎಎಸ್‌ಐ ಪ್ರಕರಣಕ್ಕೆ ಸಂಬಂಧಿಸಿದಂತೆ ಝಂಡು ಕನ್ಸಟ್ರಕ್ಷನ್‌ನ ಪ್ರಾಜೆಕ್ಟ್ ಕೋಆರ್ಡಿನೇಟರ್ ವಿಕಾಸ ಶರ್ಮಾ ಅವರನ್ನು ಶುಕ್ರವಾರ ಬಂಧಿಸಲಾಗಿದೆ.
ಕಾಮಗಾರಿ ವೇಳೆ ಯಾವುದೇ ಸುರಕ್ಷತಾ ಕ್ರಮ ಪಾಲಿಸದೆ ನೌಕರರ ನಿರ್ಲಕ್ಷೃದಿಂದ ಕಬ್ಬಿಣ ಪೈಪ್ ಎಎಸ್‌ಐ ನಾಭಿರಾಜ ದಯಣ್ಣವರ ತಲೆ ಮೇಲೆ ಬಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದರ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿತ್ತು. ಈಗಾಗಲೇ ಮೂವರು ಇಂಜಿನಿಯರ್ ಸೇರಿ 11ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈಗ ವಿಕಾಶ ಅವರನ್ನೂ ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net