ವಿಜಯವಾಣಿ ಆಯೋಜಿತ ಅಂತರ ಜಿಲ್ಲಾ ಪ್ರಬಂಧ ಸ್ಪರ್ಧೆ

8mdka2 - Copy
Published on

ಕುಶಾಲನಗರ: ಸ್ವಾರ್ಥವೇ ಇಂದು ದೇಶಭಕ್ತಿ ಆಗಿರುವುದು ವಿಪರ‌್ಯಾಸ. ನಿಜವಾದ ದೇಶಭಕ್ತಿ ನಿಸ್ವಾರ್ಥತೆಯಿಂದ ಕೂಡಿರಬೇಕೆಂದು ಹಿರಿಯ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಹೇಳಿದರು.

ವಿಜಯವಾಣಿ ಹಾಗೂ ದಿಗ್ವಿಜಯ ಚಾನಲ್ ಆಶ್ರಯದಲ್ಲಿ ಸೋಮವಾರ ಅನುಗ್ರಹ ಪದವಿ ಕಾಲೇಜಿನಲ್ಲಿ ಸ್ವಾತಂತ್ರೃದ ಅಮೃತ ಮಹೋತ್ಸವ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಂತರ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಸಭಾ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದರು.

ಸ್ವಾತಂತ್ರೃದ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ ಸ್ವಾತಂತ್ರೃದ ಶತಮಾನೋತ್ಸವ, ಅಂದರೆ ಮುಂದಿನ ೨೫ ವರ್ಷಗಳಲ್ಲಿ ಸಾಧಿಸಬೇಕಿರುವು ದೇನು? ಇದರಲ್ಲಿ ಯುವಜನರ ಪಾತ್ರ ಏನು? ವಿಷಯ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.

ಪಾಕಿಸ್ತಾನ, ಬಾಂಗ್ಲಾದೇಶ ವಿಭಜನೆ ಆಗುವ ಮುನ್ನ ಭಾರತ ದೊಡ್ಡ ದೇಶವಾಗಿತ್ತು. ಮುಂದಿನ ದಿನಗಳಲ್ಲಿ ಭಾರತ ಇನ್ನೂ ಚಿಕ್ಕದಾಗಬಹುದ ಅಥವಾ ದೊಡ್ಡದಾಗಬಹುದು. ಪ್ರಪಂಚವೇ ನನ್ನ ಮನೆ ಎಂಬ ಭಾವನೆ ಇರಬೇಕು. ಸ್ವಾತಂತ್ರೃದ ಅಮೃತ ಮಹೋತ್ಸವ ಪ್ರಯುಕ್ತ ಆಯೋಜಿಸಿರುವ ಅಂತರ ಜಿಲ್ಲಾ ಪ್ರಬಂಧ ಸ್ಪರ್ಧೆಯಲ್ಲಿ ಕೊಡಗಿನ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿರು ವುದು ಶ್ಲಾಘನೀಯ. ವಿದ್ಯಾರ್ಥಿಗಳು ತಮ್ಮ ಮನಸ್ಸಿಗೆ ಬಂದಿದ್ದನ್ನು ಮುಕ್ತವಾಗಿ ಪ್ರಬಂಧದಲ್ಲಿ ದಾಖಲಿಸಬೇಕೆಂದು ಭಾರದ್ವಾಜ್ ಕೆ. ಆನಂದತೀರ್ಥ ಕರೆ ನೀಡಿದರು.

ನನ್ನ ದೇಶ, ನನ್ನ ನಾಡು ಎಂಬ ಅಭಿಮಾನ ಇಲ್ಲದಿದ್ದಲ್ಲಿ ಬದುಕಿದ್ದರೂ ಸತ್ತಂತೆ ಎಂದು ಅನುಗ್ರಹ ಪದವಿ ಕಾಲೇಜು ಪ್ರಾಂಶುಪಾಲರಾದ ಪಂಡರಿನಾಥ್ ನಾಯ್ಡು ಹೇಳಿದರು. ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸಾಮಾಜಿಕ ಜಾಲತಾಣ ದೊಡ್ಡ ವೇದಿಕೆಯಾಗಿದ್ದು, ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಕೆ.ಎನ್. ದೇವರಾಜು ಹೇಳಿದರು.

ವಿಜಯವಾಣಿ ಸಮಾಜಮುಖಿ ಚಿಂತನೆಯ ಪತ್ರಿಕೆ. ರೈತರು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿ ನೀಡುವ ಕೆಲಸವನ್ನು ವಿಜಯವಾಣಿ ಮಾಡುತ್ತಾ ಬಂದಿದೆ. ಸ್ವಾತಂತ್ರೃದ ಅಮೃತ ಮಹೋತ್ಸವ ಪ್ರಯುಕ್ತ ಅಂತರ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿ ರುವುದು ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಕಲಾವಿದ ನಂಜುಂಡಸ್ವಾಮಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ಅನುಗ್ರಹ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು, ಕಲಾಶಿಕ್ಷಕ ಉ.ರಾ. ನಾಗೇಶ್, ಡಾ.ಬಿ.ಆರ್. ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಜಯಪ್ರಕಾಶ್, ಸ್ಥಳೀಯ ಪ್ರಮುಖರಾದ ಚಿತ್ರಾ ರಮೇಶ್, ಅನುಷಾ ಅರ್ಜುನ್ ಮತ್ತಿತರರು ಇದ್ದರು. ಕೆ.ಎಸ್. ನಾಗೇಶ್ ನಿರೂಪಿಸಿದರು.

೫೪ ಸ್ಪರ್ಧಿಗಳು
ಜಿಲ್ಲೆಯ ವಿವಿಧೆಡೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದಂತೆ ಅಂತರ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕೊಡಗಿನ ವಿವಿಧ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ೫೪ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net