ವಿಜೃಂಭಣೆಯ ಮಾರಮ್ಮನ ಜಾತ್ರಾ ಮಹೋತ್ಸವ

02-GPT-2-BARAGI JATRE
ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ಕಸಕಲಪುರ ಮಾರಮ್ಮನ ಉತ್ಸವಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.
Published on

ಗುಂಡ್ಲುಪೇಟೆ: ತಾಲೂಕಿನ ಬರಗಿ ಗ್ರಾಮದಲ್ಲಿ ಸೋಮವಾರ ಕಸಕಲಪುರ ಮಾರಮ್ಮನ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಮಂಗಳವಾದ್ಯ, ಸತ್ತಿಗೆ, ಸುರಿಪಾನಿ, ಬಿರುದು, ಬಾವಲಿಗಳೊಡನೆ ಗ್ರಾಮದ ಆಯ್ದ ಭಕ್ತರು ಬಂಡೀಪುರ ಅರಣ್ಯದೊಳಗಿರುವ ಮೂಲ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರ ಪೆಟ್ಟಿಗೆ ಹಾಗೂ ಪ್ರಸಾದವನ್ನು ಗ್ರಾಮದ ಬಸವೇಶ್ವರ ದೇವಾಲಯಕ್ಕೆ ತೆಗೆದುಕೊಂಡು ವಾಪಸಾದರು.

ಮಂಗಳವಾರ ಗ್ರಾಮದಲ್ಲಿ ಉತ್ಸವ ಮೂರ್ತಿ ಹಾಗೂ ಗ್ರಾಮದೇವತೆಗಳನ್ನು ದೇವರ ಬಿಜ್ಜು ಮಾಡಿ ಹೂವಿನ ಹೊದಿಕೆಯಿಂದ ಮುಚ್ಚಿದ ಪಲ್ಲಕ್ಕಿ ಹಾಗೂ ಕುದುರೆ ಮೇಲೆ ಇಟ್ಟು ಊರಿನೊಳಗೆ ಮೆರವಣಿಗೆ ಮಾಡಲಾಯಿತು.

ಹರಕೆ ಹೊತ್ತವರು ಬಾಯಿಬೀಗ ಸೇರಿದಂತೆ ನಾನಾ ಸೇವೆ ಸಲ್ಲಿಸಿದರು. ದನಗಳನ್ನು ರೋಗರುಜಿನಗಳಿಂದ ಪಾರು ಮಾಡುವಂತೆ ಪ್ರಾರ್ಥಿಸಿ ಜಾನುವಾರುಗಳ ಕೊಂಬಿಗೆ ಪಂಜುಕಟ್ಟಿ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಅಕ್ಕಪಕ್ಕ ಗ್ರಾಮಗಳ ಜನರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಡಿದ್ದರು. ಮಧ್ಯಾಹ್ನ ಭಕ್ತರಿಗೆ ಬೇಯಿಸಿದ ಸಪ್ಪೆ ಅವರೆ ಪ್ರಸಾದ ವಿನಿಯೋಗ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net