ವಿಜಯಪುರ : ದಸರಾ ಕ್ರೀಡಾಕೂಟ ಡಿ.ಎನ್.ದರಬಾರ ಪ್ರೌಢಶಾಲೆ ವಿದ್ಯಾರ್ಥಿನಿಯರು ಜಿಲ್ಲಾಮಟ್ಟಕ್ಕೆ ಆಯ್ಕೆ

IMG-20220831-WA0027
ವಿಜಯಪುರ ನಗರದ ಡಿ.ಎನ್.ದರಬಾರ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುವುದು.
Published on

ವಿಜಯಪುರ : ನಗರದ ಡಿ.ಎನ್.ದರಬಾರ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.
ಈಚೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ವಿಜಯಪುರ ತಾಲೂಕುಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಾಲಿಬಾಲ್ ಪ್ರಥಮ ಸ್ಥಾನ, ಥ್ರೊಬಾಲ್ ದ್ವಿತೀಯ ಸ್ಥಾನ, ೪೧೦೦ ಮೀ ರೀಲೆ ನಲ್ಲಿ ಪ್ರಥಮ, ೪೪೦೦ ಮೀ ರೀಲೆ ನಲ್ಲಿ ದ್ವಿತೀಯ ಸ್ಥಾನ ಮತು ವೈಯಕ್ತಿಕ ಸ್ಪರ್ಧೆಯಲ್ಲಿ ರಮ್ಯಾ ಕದಂ ೮೦೦ ಮೀ. ಓಟದಲ್ಲಿ ಪ್ರಥಮ , ೧೫೦೦ ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಅಧ್ಯಕ್ಷ ರಾಜೇಶ ಡಿ. ದರಬಾರ, ಕಾರ್ಯದರ್ಶಿ ಪ್ರಕಾಶ ಉಡಪಿಕರ, ಸಮನ್ವಯ ಅಽಕಾರಿ ಡಾ.ಜಿ. ಗ್ರಾಮಪುರೋಹಿತ, ಮುಖ್ಯ ಶಿಕ್ಷಕಿ ಸುವರ್ಣಾ ಎಸ್.ಲಂಬು, ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಲಮಾಣಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net