

ಮಂಗಳೂರು: ದಸರಾ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ವಿಜಯವಾಣಿ ಆಯೋಜಿಸಿದ 10ನೇ ವರ್ಷದ ‘ವಿಜಯೋತ್ಸವ’ ಶಾಪಿಂಗ್ ಉತ್ಸವದ ಲಕ್ಕಿ ಡ್ರಾ ವಿಜೇತರಾದ ಬಜ್ಪೆ ನಿವಾಸಿ ಲಕ್ಷ್ಮಣ್ ಬಿ. ಅವರಿಗೆ ಶುಕ್ರವಾರ ಯೆಯ್ಯಡಿ ವಿಕೆ ಫರ್ನಿಚರ್‌ನಲ್ಲಿ ಬಂಪರ್ ಬಹುಮಾನ ಕಾರು ಹಸ್ತಾಂತರ ನಡೆಯಿತು.
ಈ ಹಿಂದೆ ನಗರದ ಕೂಳೂರಿನಲ್ಲಿರುವ ’ವಿಜಯವಾಣಿ’ ಕಚೇರಿಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಚಿತ್ತರಂಜನ್ ಬೋಳಾರ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದರು. ವಿಜಯವಾಣಿ ವಿಜಯೋತ್ಸವದಲ್ಲಿ ರಾಜ್ಯಾದ್ಯಂತ ಅದೃಷ್ಟಶಾಲಿಗಳಿಗೆ 8 ಕಾರು, 10 ಬೈಕ್, 10 ಮಷಿಂಗ್‌ಮಷಿನ್, 10 ಫ್ರಿಜ್, ಚಿನ್ನ ಮತ್ತು ಬೆಳ್ಳಿ ನಾಣ್ಯ ಸೇರಿ 2,800ಕ್ಕಿಂತ ಹೆಚ್ಚು ಬಹುಮಾನ ನೀಡಲಾಗಿತ್ತು. ಮಂಗಳೂರು ವಿಭಾಗ ವ್ಯಾಪ್ತಿಯ 210 ವಿಜೇತರಿದ್ದರು.
ಯೆಯ್ಯಡಿಯ ವಿಕೆ ಫರ್ನಿಚರ್‌ನಲ್ಲಿ ಸೋಫಾ ಸೆಟ್ಟ್ ಖರೀದಿಸಿದ್ದಕ್ಕಾಗಿ ಬಜ್ಪೆ ನಿವಾಸಿ ಲಕ್ಷ್ಮಣ್ ಬಿ. ಅವರಿಗೆ ‘ವಿಜಯೋತ್ಸವ’ ಶಾಪಿಂಗ್ ಉತ್ಸವದ ಬಂಪರ್ ಬಹುಮಾನ ನೀಡಲಾಗಿತ್ತು.
ಬಂಪರ್ ಬಹುಮಾನ ಕಾರು ಹಸ್ತಾಂತರ ಸಂದರ್ಭ ವಿಕೆ ಫರ್ನಿಚರ್‌ನ ಮಾರ್ಕೆಟಿಂಗ್ ಮ್ಯಾನೆಜರ್ ನಿಶಾಂತ್ ರಾಜ್, ಎಚ್‌ಆರ್ ಮ್ಯಾನೆಜರ್ ಸಂತೋಶ್ ಕುಮಾರ್, ಸೀನಿಯರ್ ಮ್ಯಾನೆಜರ್ ಯಶವಂತ್ ಕೆ., ಅಡ್ಮಿನ್ ಮ್ಯಾನೆಜರ್ ಪುಷ್ಪರಾಜ್, ಪರ್ಚೆಸಿಂಗ್ ಮ್ಯಾನೆಜರ್ ಭವ್ಯ ಕದ್ರಿ, ವಿಜಯೋತ್ಸವ’ ಶಾಪಿಂಗ್ ಉತ್ಸವದ ಲಕ್ಕಿ ಡ್ರಾ ವಿಜೇತರಾದ ಮಲ್ಲಿಕಾ ಲಕ್ಷ್ಮಣ್ ಇದ್ದರು.