ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರದಿಂದ ಕಪಾಳ ಮೋಕ್ಷ ಆಗುತ್ತಿದೆ : ಬಿ.ವೈ. ವಿಜಯೇಂದ್ರ

yediyurappa-son-vijayendra-1699622083
Published on

ಮೈಸೂರು: ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರದಿಂದ ಕಪಾಳ ಮೋಕ್ಷ ಆಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಲೆ ಏರಿಕೆ ಮಾಡಲು ತಜ್ಞರ ಸಮಿತಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನರಿಗೆ ಬರೆ ಎಳೆಯುವಂತಹ ಕೆಲಸ ದೇಶದಲ್ಲಿ ಎಲ್ಲೂ ಆಗುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ಮಾತ್ರ ಬೆಲೆ ಏರಿಕೆ ಮಾಡುತ್ತಿದೆ. ಹಾಲು, ಪೆಟ್ರೋಲ್, ಡೀಸೆಲ್, ಎಲ್ಲದರ ಬೆಲೆ ಹೆಚ್ಚು ಮಾಡಿದ್ದಾರೆ. ಒಟ್ಟು 48 ವಸ್ತುಗಳ ಬೆಲೆ ಏರಿಕೆ ಆಗಿದೆ ಎಂದರು.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 2 ರೂ. ಮಾತ್ರ ಏರಿಕೆಯಾಗಿದೆ. ಈ ಬೆಲೆ ಏರಿಕೆಯನ್ನು ಪೆಟ್ರೋಲಿಯಂ ಕಂಪನಿಗಳು ಮಾಡುತ್ತವೆ. ಆದರೆ, ಇದರಿಂದ ಜನರಿಗೆ ಹೆಚ್ಚಿನ ಹೊರೆ ಆಗುವುದಿಲ್ಲ. ನಮ್ಮ ದೇಶದಲ್ಲಿ ಗುಡಿಸಲಿನಲ್ಲಿ ವಾಸ ಮಾಡುವ ಜನರೂ ಗ್ಯಾಸ್ ಉಪಯೋಗಿಸುತ್ತಿದ್ದಾರೆ. 2023ರ ಮಾರ್ಚ್ ತಿಂಗಳಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1107 ರೂ.ಇತ್ತು. ಇದೀಗ 850 ರೂ.ಗೆ ಇಳಿಕೆಯಾಗಿದೆ. ಕಚ್ಚಾತೈಲ ಬೆಲೆ ಏರಿಕೆಯಿಂದ ಗ್ಯಾಸ್ ಬೆಲೆಯಲ್ಲಿ 50 ರೂ. ಏರಿಕೆಯಾಗಿದೆ ಅಷ್ಟೆ. ದೇಶದಲ್ಲಿ ರಾಹುಲ್ ಗಾಂಧಿ ಅಧಿಕಾರ ನಡೆಸುತಿದ್ದರೆ ಗ್ಯಾಸ್‌ಸಿಲಿಂಡರ್ ಬೆಲೆ 2 ಸಾವಿರ ರೂ.ಗೆ ಏರಿಕೆಯಾಗುತಿತ್ತು ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರ ಹಾಲಿನ ಬೆಲೆ, ನೀರಿನ ಬಿಲ್ ಏರಿಕೆ. ಮಾಡಿದೆ. ಕಸದ ಮೇಲೂ ತೆರಿಗೆ ವಿಧಿಸಿದೆ. ಕಾಂಗ್ರೆಸ್ ಪಕ್ಷ ಸುಳ್ಳು ಹೇಳಿಕೊ ಂಡು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಜನರಿಗೆ ಬೆಲೆ ಏರಿಕೆಯ ಶಾಕ್ ನೀಡುತ್ತಿದೆ. ಕಡು ಬಡವರು ಬಳಸುವ ಉಜ್ವಲ ಯೋಜನೆ ಗ್ಯಾಸ್ 550 ರೂ. ಆಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆ ಆಗಿದೆ.

ಪೊಲೀಸ್ ಇಲಾಖೆಗೆ ಈ ತಿಂಗಳ ಸಂಬಳ ಇನ್ನೂ ಬಂದಿಲ್ಲ, ಶಿಕ್ಷಕರಿಗೂ ಸಂಬಳ ಆಗಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ ಹೈಕಮಾಂಡಗೆ ಎಟಿಎಂ ಆಗಿದೆ. ಅನುದಾನ ಇಲ್ಲದೆ ಆಡಳಿತ ಪಕ್ಷದ ಶಾಸಕರೇ ಸಿಎಂಗೆ ಮಂಗಳಾರತಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ಕಚ್ಚಾಟ ಮಾಡುತ್ತಿರಲಿ, ನಮಗೂ ಸಂತೋಷ. ಆದರೆ ಜನರ ಮೇಲೆ ತೆರಿಗೆ ಹಾಕಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net