ಸಚಿವ ಮಧು ಕಟ್ಟಿಂಗ್ ಗೆ ಬಿಜೆಪಿಯಿಂದ ದೇಣಿಗೆ: ವಿಜಯೇಂದ್ರ

B Y Vijayendra
Published on

ಕಲಬುರಗಿ: ಮಧು ಬಂಗಾರಪ್ಪ ಓರ್ವ ಶಿಕ್ಷಣ ಸಚಿವನಾಗಿ ಎಲ್ಲರಿಗೂ ಮಾದರಿಯಾಗಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಕಲಬುರಗಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಬಂಗಾರಪ್ಪ ಹೆರ್‌ಸ್ಟೈಲ್‌ ಬಗ್ಗೆ ಶಿಕ್ಷಕರು ದಾವಣಗೇರೆಯಲ್ಲಿ ಹೇಳಿದ್ದನ್ನು, ನಾನು ಹೇಳಿದ್ದೇನೆ. ಶಿಕ್ಷಕರು ಹೇಳಿರೋ ಮಾತನ್ನ ನಾನು ಮಧು ಬಂಗಾರಪ್ಪಗೆ ಹೇಳಿದ್ದೇನೆ ಎಂದು ಹೇಳಿದರು.

ಮಧು ಬಂಗಾರಪ್ಪಗೆ ಹಣದ ಸಮಸ್ಯೆ ಇದ್ರೆ ನಮ್ಮ ಕಾರ್ಯಕರ್ತರಿಗೆ ಹೇಳ್ತೆನೆ. ನಮ್ಮ ಯುವ ಮೋರ್ಚಾದವರಿಗೆ ತಿಂಗಳಿಗೆ ಇಂತಿಷ್ಟು ಹಣ ಕೊಡಲು ಹೇಳುತ್ತೇನೆ ಎಂದರು.

ಮಧು ಬಂಗಾರಪ್ಪ ಕಟ್ಟಿಂಗ್‌ಗಾಗಿ ತಿಂಗಳಿಗೆ ಇಂತಿಷ್ಟು ಹಣ ಕೊಡ್ತೆವೆ. ಕಟ್ಟಿಂಗ್ ಮಾಡಿ ಶಿಸ್ತಿನಿಂದ ಇರಲಿ ಎಂದು ಹೇಳಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net