ಕಲಾದಗಿಯಲ್ಲಿ ವಿಜಯೇಂದ್ರಗೆ ಸನ್ಮಾನ

Vijayendra honored at Kaladagi
Vijayendra honored at Kaladagi
Published on

ಕಲಾದಗಿ: ಗ್ರಾಮದ ಹೊರವಲಯದ ಸಾಯಿಮಂದಿರದ ಹತ್ತಿರ ಕಲಾದಗಿ ಗ್ರಾಮ ಘಟಕದ ಕಾರ್ಯಕರ್ತರು ಬುಧವಾರ ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿ ಸನ್ಮಾನಿಸಿದರು.

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ನಡೆಯುತ್ತಿರುವ ಜನಾಕ್ರೋಶ ಯಾತ್ರೆಗೆ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಗ್ರಾಮದ ಸಾಯಿಮಂದಿರದ ಹತ್ತಿರ ಬಿಜೆಪಿ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ವೈ.ವಿಜಯೇಂದ್ರ ಅವರು ಬಾಗಲಕೋಟೆಯಲ್ಲಿ ನಡೆಯುತ್ತಿರುವ ಜನಾಕ್ರೋಷ ಯಾತ್ರೆಗೆ ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.

ಗ್ರಾಮದ ಬಿಜೆಪಿ ಮುಖಂಡರಾದ ಬಶೆಟ್ಟೆಪ್ಪ ಅಂಗಡಿ, ಶ್ರೀಧರ ವಾಘ, ಸದಾಶಿವ ಸಣ್ಣಕ್ಕಿ, ಯಲ್ಲಪ್ಪ ಹೊಸಕೋಟಿ, ಭೀಮಶಿ ಕರಡಿಗುಡ್ಡ, ಯಮನಪ್ಪ ಬೂದಿಹಾಳ, ಹವಳೆಪ್ಪ ಮಾದರ, ಪ್ರಶಾಂತ ದೇಶಮುಖ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net