ಮಡಿಕೇರಿಯಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿದ ವಿಜಯೇಂದ್ರ

Vijayendra encouraged the activists in Madikeri
Published on

ಮಡಿಕೇರಿ:

ಕಾಂಗ್ರೆಸ್, ಇತರ ಪ್ರತಿಪಕ್ಷಗಳು ಆದಿಯಾಗಿ ದೇಶದ ಯಾವ ಶಕ್ತಿಗಳಿಗೂ ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗುವುದು ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಮಡಿಕೇರಿಯಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ರಾಜಕಾರಣಿಗಳು ಚುನಾವಣೆ ಬಗ್ಗೆ ಯೋಚನೆ ಮಾಡಿದರೆ, ಮೋದಿ ದೇಶದ ಅಭಿವೃದ್ಧಿ ಚಿಂತನೆ ಮಾಡುತ್ತಾರೆ. ದೇಶದಲ್ಲಿ ಮೋದಿ ಮತ್ತು ಬಿಜೆಪಿ ಪರ ಅಲೆ ಇದೆ. ಯುಪಿಎ ಸರ್ಕಾರ ಭ್ರಷ್ಟಾಚಾರದಿಂದ ಕೂಡಿತ್ತು. ದೇಶಕ್ಕೆ ಭವಿಷ್ಯವೇ ಇಲ್ಲ ಎನ್ನುವ ವಾತಾವರಣ ನಿರ್ಮಾಣ ಆಗಿತ್ತು. ಇಂಥ ಸಂದರ್ಭದಲ್ಲಿ ದೇಶಕ್ಕೆ ಭವಿಷ್ಯ ಇದೆ ಎಂದು ತೋರಿಸಿದವರು ಪ್ರಧಾನಿ ನರೇಂದ್ರ ಮೋದಿ. ಒಂದೂ ಭ್ರಷ್ಟಾಚಾರ ಆರೋಪ ಇಲ್ಲದೆ ಸರ್ಕಾರ ನಡೆಯುತ್ತಿದೆ.

ಕಾಂಗ್ರೆಸ್‌ನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರಿದ್ದಾರೆ. ಹಾಗಾಗಿ ಬಿಜೆಪಿ ಕಾರ್ಯಕರ್ತರು ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ ಕಾಂಗ್ರೆಸ್‌ನಿಂದಲೂ ಅಹ್ವಾನ ಇತ್ತು. ಆದರೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿದರು. ನರೇಂದ್ರ ಮೋದಿ, ಜೆ.ಪಿ. ನಡ್ಡಾ ಹಾಗೂ ಅಮಿತ್ ಷಾ ಇಚ್ಛೆಯಂತೆ ಯದುವೀರ್ ಅಭ್ಯರ್ಥಿ ಆಗಿದ್ದಾರೆ. ಕ್ಷೇತ್ರದ ಜನತೆ ಯದುವೀರ್ ಅವರನ್ನು ಜಾತಿಗೆ ಸೀಮಿತವಾಗಿ ನೋಡುತ್ತಿಲ್ಲ. ಇವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸ ಇದೆ. ಯದುವೀರ್ ಪರ ಮತ ಯಾಚಿಸಲು ಪ್ರಧಾನಿ ಮೋದಿ ಮೈಸೂರಿಗೆ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೊಡಗಿಗೆ ಬರುತ್ತಾರೆ ಎಂದು ತಿಳಿಸಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಅಂತರದ ಗೆಲುವು ಈ ಚುನಾವಣೆಯಲ್ಲಿ ಸಿಗಬೇಕು. ಅಭಿವೃದ್ಧಿ ಕಾರ್ಯದಲ್ಲಿ ಯದುವಂಶ ದೇಶಕ್ಕೆ ಮಾದರಿ ಹಾಕಿ ಕೊಟ್ಟಿದೆ. ಈ ಪರಂಪರೆಯನ್ನು ನರೇಂದ್ರ ಮೋದಿ ಮುಂದುವರಿಸುತ್ತಿದ್ದಾರೆ. ಕೊಡಗಿನ ಮತದಾರರು ಮೈ ಮರೆಯುವುದು ಬೇಡ. ಸೃಷ್ಟಿಯಾಗಿರುವ ಒಳ್ಳೆಯ ವಾತಾವರಣ ಮತಗಳಾಗಿ ಪರಿವರ್ತನೆ ಆಗಬೇಕು. ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿ ಶುರುವಾಗಿದ್ದು, ಯದುವೀರ್ ನೇತೃತ್ವದಲ್ಲಿ ಹೆದ್ದಾರಿ ಉದ್ಘಾಟಿಸಲಾಗುವುದು. ಸುಂಟಿಕೊಪ್ಪ, ಮಡಿಕೇರಿಗೆ ಬೈಪಾಸ್ ಮಂಜೂರು ಆಗಿದೆ. ಈ ಎಲ್ಲಾ ಕೆಲಸಗಳನ್ನು ಸಂಸದರಾಗಿ ಯದುವೀರ್ ಮುಂದುವರಿಸುತ್ತಾರೆ. ಮೋದಿ ಅವರಿಗೆ ಜಾಗತಿಕ ನಾಯಕತ್ವ ಕೊಡಲಾಗಿದ್ದು, ಇದು ಮುಂದುವರಿಯಬೇಕಾದರೆ ಮತದಾರರು ಬೆಂಬಲಿಸಬೇಕು ಎಂದರು.

ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ನರೇಂದ್ರ ಮೋದಿ ಅಪೇಕ್ಷೆ ಮತ್ತು ಆಶೀರ್ವಾದದಿಂದ ಸ್ಪರ್ಧೆ ಮಾಡಲಾಗುತ್ತಿದೆ. ನಿರೀಕ್ಷೆ ಮೀರಿ ಸ್ವಾಗತ ಸಿಗುತ್ತಿದೆ. ಮೈಸೂರು ಭಾಗದಲ್ಲಿ ತಾಯಿ ಕಾವೇರಿ ಅವಲಂಭಿಸಿ ಬದುಕು ನಡೆಯುತ್ತಿದೆ. ಒಬ್ಬ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಕೆಲಸ ಮಾಡಲಾಗುವುದು. ಇದು ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆ. ಮೈಸೂರು ಸಂಸ್ಥಾನ ಅಭಿವೃದ್ಧಿ ಕೆಲಸಗಳಿಗೆ ಹೆಸರಾಗಿತ್ತು. ಪ್ರಧಾನಿ ಮೋದಿಯೂ ಈಗ ಭಾರತವನ್ನು ಸುವರ್ಣ ಯುಗಕ್ಕೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ದಿ ಕೆಲಸದಲ್ಲಿ ಪ್ರತಾಪ್ ಸಿಂಹ ಹೆಸರು ಶಾಶ್ವತವಾಗಿರುತ್ತದೆ. ಏ.೩ಕ್ಕೆ ತಾನು ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ ಒಂದು ಗ್ರಾಮದ ಕಟ್ಟಕಡೆಯ ಸಾಮಾನ್ಯ ವ್ಯಕ್ತಿಗೂ ಕೇಂದ್ರ ಸರ್ಕಾರದ ಯೋಜನೆಗಳು ತಲುಪಿದೆ. ಇದನ್ನು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು. ಕೇಂದ್ರ ಸರ್ಕಾರದ ಅಕ್ಕಿ ಅನ್ನಭಾಗ್ಯ ಮೂಲಕ ಕೊಡಲಾಗುತ್ತಿದೆ. ಎಲ್ಲೆಡೆಗೆ ವಿದ್ಯುತ್ ತಲುಪವುವಂತೆ ಮಾಡಿದ್ದು ಕೇಂದ್ರ ಸರ್ಕಾರ. ಜಿಲ್ಲೆಯ ಅಭಿವೃದ್ಧಿಗೆ ಏನೂ ಉಳಿಯದ ರೀತಿಯಲ್ಲಿ ಬಿಜೆಪಿ ಶಾಸಕರು ಈ ಹಿಂದೆ ಕೆಲಸ ಮಾಡಿದ್ದಾರೆ. ಸಾಮಾನ್ಯರೊಂದಿಗೆ ಸಾಮಾನ್ಯರಾಗಿ ಕೆಲಸ ಮಾಡುವ ಗುಣ ಯದುವೀರ್ ಅವರಲ್ಲಿದೆ. ೧ ಲಕ್ಷಕ್ಕೂ ಹೆಚ್ಚು ಮತಗಳ ಅಂತರ ಕೊಡಗಿನಲ್ಲಿ ಕೊಡಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.

ಕ್ಲಸ್ಟರ್ ಪ್ರಮುಖ ರಾಮದಾಸ್ ಮಾತನಾಡಿದರು.
ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಸಚಿವ ಅಪ್ಪಚ್ಚು ರಂಜನ್, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಪಕ್ಷದ ಜಿಲ್ಲಾ ಉಸ್ತುವಾರಿ ಉದಯ ಕುಮಾರ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಶರಣ್, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ, ಎಸ್.ಜಿ. ಮೇದಪ್ಪ, ಚುನಾವಣಾ ಸಂಚಾಲಕ ರಾಬಿನ್ ದೇವಯ್ಯ, ಕೃಷಿ ಮೋರ್ಚಾ ಕಾರ್ಯದರ್ಶಿ ಡಾ. ನವೀನ್, ಶಿಸ್ತು ಸಮಿತಿ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net