ಜನಹಿತ ಮರೆತ ಕಾಂಗ್ರೆಸ್ ಸರ್ಕಾರ

Published on

ಕಲಬುರಗಿ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಬಂದಾಗಿನಿAದ ಬರ ಆವರಿಸಿದ್ದು, ಒಂಬತ್ತು ತಿಂಗಳಿAದ ೮೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್ಸಿ, ಎಸ್ಟಿಯವರ ೨೫ ಸಾವಿರ ಕೋಟಿ ರೂ. ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಬರದಿಂದ ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರದ್ದು ಕರ್ನಾಟಕಕ್ಕೆ ಏನು ಕೊಡುಗೆ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ರಾಜ್ಯದ ಜನ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ. ಬಡವರು, ರೈತರು, ಮಹಿಳೆಯರು, ಯುವಕರೇ ದೇಶದ ಆಸ್ತಿ ಎಂದು ಆದ್ಯತೆ ಮೇಲೆ ಅವರಿಗಾಗಿ ಹಲವು ಯೋಜನೆ ರೂಪಿಸಲಾಗಿದೆ. ಇಡೀ ಜಗತ್ತು ಕೋವಿಡ್ ವೇಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅದನ್ನು ಮೀರಿ ಭಾರತ ಬೆಳೆದಿದೆ. ಅದಕ್ಕೆ ಮೋದಿ ಅವರ ಕರ್ತೃತ್ವ ಶಕ್ತಿ ಕಾರಣ ಎಂದು ಹೇಳಿದರು.

ಅಂಬೇಡ್ಕರ್ ಅವರನ್ನು ಸೋಲಿಸಿದ, ಭಾರತ ರತ್ನ ನೀಡದ, ಅಂತ್ಯಕ್ರಿಯೆಗೆ ಜಾಗ ಕೊಡದೆ ಮೋಸ ಮಾಡಿದವರು ಕಾಂಗ್ರೆಸ್ಸಿಗರು. ಆದರೆ ಮೋದಿ ಅಂಬೇಡ್ಕರ್ ಘನತೆ ದುಪ್ಪಟ್ಟು ಮಾಡಿದರು. ಪ್ರಧಾನಿಯವರು ಕರ್ನಾಟಕ, ರಾಜ್ಯದ ಸಂಸ್ಕೃತಿ, ಭಾವನೆಗಳಿಗೆ ಸದಾ ಸ್ಪಂದಿಸುತ್ತಿದ್ದು, ಎಐ ತಂತ್ರಜ್ಞಾನದ ಮೂಲಕ ಮೋದಿ ಅವರ ಆಡಳಿತದಲ್ಲಿನ ಅಂಶಗಳನ್ನು ಕನ್ನಡದಲ್ಲಿ ತಿಳಿಸಲು ಪ್ರಯತ್ನಿಸಿದ್ದಾರೆ. ನಮೋ ಇನ್ ಕನ್ನಡ್ ಎಕ್ಸ್ (ಟ್ವಿಟರ್)ನಲ್ಲಿ ಕನ್ನಡದ ಭಾಷೆ ಮೂಲಕ ಜನರನ್ನು ತಲುಪುತ್ತಿದ್ದು, ಎಲ್ಲರೂ ಅದನ್ನು ಅನುಸರಿಸಬೇಕು. ಮತ್ತೊಮ್ಮೆ ಮೋದಿ ಸಂಕಲ್ಪಕ್ಕೆ ಕೈ ಜೋಡಿಸಿ, ೨೮ ಸ್ಥಾನಗಳನ್ನು ಗೆಲ್ಲಿಸಲು ಸಹಕರಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net