ಆಯುಧ ಪೂಜೆ ವಿಜಯದಶಮಿ ಸಂಭ್ರಮ,  ಭಕ್ತಿ ಭಾವದಿಂದ ದೇವಿ ಆರಾಧನೆ

Published on

ಹುಬ್ಬಳ್ಳಿ: ಹತ್ತು ದಿನಗಳ ಕಾಲ ಭಕ್ತಿ ಭಾವ ಹಾಗೂ ವಿಜೃಂಭಣೆಯಿಂದ ನಡೆದ ಮಹಾನವಮಿ ಉತ್ಸವವು ಗುರುವಾರ ವಿಜಯದಶಮಿ ಆಚರಣೆಯೊಂದಿಗೆ ಸಂಪನ್ನಗೊಂಡಿತು.

ಬುಧವಾರ ಹಾಗೂ ಗುರುವಾರ ಎರಡು ದಿನ ಆಯುಧ ಪೂಜೆ, ವಿಜಯದಶಮಿ ಆಚರಿಸಿ ಸಂಭ್ರಮ ಪಟ್ಟರು.
ಮನೆಮನೆಗಳಲ್ಲಿ ಕುಟುಂಬ ಸಮೇತರಾಗಿ ಹಬ್ಬದ ಆಚರಣೆ ಮಾಡಿದರು. ಮನೆಯನ್ನು ಅಂದಗೊಳಿಸಿ ಹೂ, ದೀಪಾಲಂಕರಾಗಳಿಂದ ಶೃಂಗರಿಸಿ ದೇವಿ ಆರಾಧನೆ ಮಾಡಿದರು.

9 ದಿನಗಳ ಕಾಲ ದೇವಿ ದುರ್ಗಾಮಾತೆಯ ವ್ರತ, ಉಪವಾಸ ಆಚರಣೆ ಮಾಡಿದ ಮನೆಯ ಅನೇಕ ಸದಸ್ಯರು 10ನೇ ದಿನ ಆಯುಧ ಪೂಜೆಯನ್ನು ನೆರವೇರಿಸಿದರು.
ಮಕ್ಕಳು, ಮಹಿಳೆಯರು ಹಾಗೂ ಮನೆಯ ಎಲ್ಲ ಸದಸ್ಯರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಸಿಹಿ ಖಾದ್ಯಗಳನ್ನು ಮಾಡಿ ಸವಿದರು.

ದೇವಸ್ಥಾನಗಳಿಗೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿದರು. ಅನೇಕ ದೇವಸ್ಥಾನಗಳಲ್ಲಿಯೂ ದಸರಾ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜೆಗಳನ್ನು ನೆರವೇರಿಸಲಾಯಿತು.
9 ದಿನಗಳ ಕಾಲ ಅನೇಕ ದೇವಸ್ಥಾನಗಳಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಾಮೂಹಿಕವಾಗಿ ಆರಾಧನೆ ಮಾಡಲಾಯಿತು. ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜೆ, ಹೋಮ, ಹವನಗಳು ನಡೆದವು.

ಅನೇಕ ಕಡೆಗಳಲ್ಲಿ ದುರ್ಗಾಮಾತೆಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಡಗರ ಹೆಚ್ಚಿಸಿದರು. ದಾಂಡಿಯಾ, ಕೋಲಾಟ ಮುಂತಾದ ಮನರಂಜನೆಯ ಆಟಗಳನ್ನು ಆಡಿಸಲಾಯಿತು.

ಬನ್ನಿ ಪೂಜೆ:
ವಿಜಯದಶಮಿ ಕೊನೆಯ ದಿನದಂದು ಬೆಳಗ್ಗೆ ಬನ್ನಿ ಗಿಡಕ್ಕೆ ಹೋಗಿ ಪೂಜೆ ಸಲ್ಲಿಸಿದ ನಂತರ ಹಸಿರು ಬಂಗಾರ ಎಂದು ಕರೆಯುವ ಬನ್ನಿಯನ್ನು ಒಂದಿಷ್ಟು ಮನೆಗೆ ತಂದು ಪೂಜೆ ಮಾಡಿ
ಸಂಜೆ ವೇಳೆಗೆ ಪರಸ್ಪರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net