ನಾಳೆ ಬೃಹತ್ ಆರೋಗ್ಯಕ್ಕಾಗಿ ನಡಿಗೆ- ವಾಕಥಾನ್

Health day
Published on

ದಾವಣಗೆರೆ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಹಾಗೂ ಎಸ್‌ಎಸ್ ಕೇರ್ ಟ್ರಸ್ಟ್ ಸಹಯೋಗದಲ್ಲಿ ಏ.7ರಂದು ಬೆಳಗ್ಗೆ 6.30ಕ್ಕೆ ಆರೋಗ್ಯಕ್ಕಾಗಿ ನಡಿಗೆ-ವಾಕಥಾನ್ ಆಯೋಜಿಸಲಾಗಿದೆ.

ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಲಿರುವ ವಾಕಥಾನ್‌ಗೆ ಎಸ್‌ಎಸ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡುವರು. ನಂತರ ಜಾಥಾ ಬಾಪೂಜಿ ಆಸ್ಪತ್ರೆ, ಗುಂಡಿ ಮಹದೇವಪ್ಪ ವೃತ್ತ, ಚಿಗಟೇರಿ ಜಿಲ್ಲಾಸ್ಪತ್ರೆ, ವಿದ್ಯಾರ್ಥಿ ಭವನ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಜಯದೇವ ವೃತ್ತದಲ್ಲಿ ಅಂತ್ಯಗೊಳ್ಳಲಿದೆ. ನಂತರ ಶಿವಯೋಗ ಮಂದಿರದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ನಡೆಯಲಿದೆ. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಸಿ.ಬಿ.ರಿಷ್ಯಂತ್, ಜಿಪಂ ಸಿಇಒ ಚನ್ನಪ್ಪ, ಡಿಎಚ್‌ಒ ಡಾ.ನಾಗರಾಜ್ ಇತರರು ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net