

ವಿಜಯಪುರ: ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರಕ್ಕೆ "ವಿಜಯವಾಣಿ' ಹಾಗೂ ವಿದ್ಯಾರ್ಥಿ ಉದ್ಯೋಗಮಿತ್ರ ಸಹಕಾರಿಯಾಗಿದೆ ಎಂದು ವಿಜಯಪುರದ ಎಸ್ಬಿಜೆ ಪದವಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಗುರು ಹತ್ತಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯವಾಣಿ ಪತ್ರಿಕೆ ಕಚೇರಿಗೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪತ್ರಿಕೆ, ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಓದಿನಿಂದ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಅಂಕಗಳ ಜತೆ ಜ್ಞಾನ ಸಂಪಾದನೆ ಕೂಡ ಅಷ್ಟೇ ಮಹತ್ವದ್ದಾಗಿದೆ. ವ್ಯವಹಾರಿಕ ಜ್ಞಾನ ಪಡೆಯಬೇಕಾದರೆ ಪ್ರತಿದಿನ ಪತ್ರಿಕೆಯ ಜೊತೆಗೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಇದರಿಂದ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ವಿದ್ಯಾರ್ಥಿಗಳ ಬಗ್ಗೆ ಕಳಕಳಿ ಹೊಂದಿರುವ "ವಿಜಯವಾಣಿ' ಪತ್ರಿಕೆಯು ಪ್ರತಿ ವಾರಕ್ಕೊಮ್ಮೆ ಒಂದೊಂದು ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳನ್ನು ತಮ್ಮಕಚೇರಿಗೆ ಕರೆಯಿಸಿಕೊಂಡು ಸುದ್ದಿಮನೆಯ ಸಮಗ್ರ ಮಾಹಿತಿ ನೀಡುವ ಜೊತೆಗೆ ಅವರಲ್ಲಿ ಓದಿನ ಬಗ್ಗೆ ಅಭಿರುಚಿ ಮೂಡಿಸುತ್ತಿರುವ ಕಾರ್ಯ ಅತ್ಯಂತ ಶ್ಲಾನೀಯ ಎಂದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ ಅತೀಮುಖ್ಯ. ಸರಸ್ವತಿ ಇದ್ದಲ್ಲಿ ಲಕ್ಷಿ$್ಮ ತಾನಾಗಿಯೇ ಬರುತ್ತಾಳೆ. ಲಕ್ಷಿ$್ಮಯನ್ನು ಪಡೆಯಬೇಕು ಎಂದು ಬಯಸುವ ಎಲ್ಲರೂ ಸರಸ್ವತಿಯನ್ನು ಒಲಿಸಿಕೊಳ್ಳಬೇಕು. ಸಮಯವನ್ನು ವ್ಯರ್ಥ ಮಾಡದೆ ರ್ನಿದಿಷ್ಟ ಗುರಿಯನ್ನು ಹಾಕಿಕೊಂಡು ಎಷ್ಟೇ ಕಷ್ಟವಾದರೂ ಇಟ್ಟ ಹೆಜ್ಜೆ ಹಿಂದಿಡದೆ ಗುರಿ ಮುಟ್ಟಿ, ನಿಮ್ಮ ಬದುಕನ್ನು ಬಂಗಾರಮಾಡಿಕೊಳ್ಳಿ ಎಂದರು.
ನಂತರ "ವಿಜಯವಾಣಿ ದರ್ಶನ'ದಲ್ಲಿ ಸುದ್ದಿವಿಭಾಗದ ಪ್ರತಿಯೊಂದು ಮಾಹಿತಿಯನ್ನು ವಿವರಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಎಲ್ಲ ಪ್ರಶ್ನೆಗಳಿಗೂ ಸಮರ್ಥ ಉತ್ತರ ನೀಡಿದರು.
ನಂತರ ವಿದ್ಯಾರ್ಥಿಗಳು ಸುದ್ದಿಮನೆಯ ಸಂಪಾದಕೀಯ, ಪುಟ ವಿನ್ಯಾಸ, ಜಾಹಿರಾತು ಸಂಗ್ರಹಣೆ, ವಿನ್ಯಾಸ, ಪ್ರಸರಣ ವಿಭಾಗಗಳ ಸಂಪೂರ್ಣ ಕಾರ್ಯವಿಧಾನವನ್ನು ಅರಿತುಕೊಂಡರು. ಅವರನ್ನು ವಿಜಯವಾಣಿ ಮುದ್ರಣ ವಿಭಾಗಕ್ಕೆ ಕರೆದುಕೊಂಡು ಹೋಗಿ ಮುದ್ರಣದ ಹಿಂದಿರುವ ತಾಂತ್ರಿಕ ಟಕದ ದರ್ಶನ ಮಾಡಿಸಲಾಯಿತು.
ವಿದ್ಯಾರ್ಥಿಗಳು ಸಿಟಿಪಿ ವಿಭಾಗದಲ್ಲಿ ಕಲರ್ ಕಾಂಬಿನೇಷನ್ನ ವಿಧಾನವನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು. ಮುದ್ರಣ ವಿಭಾಗದಲ್ಲಿ ಪೂರ್ಣ ಮಾಹಿತಿ ಅರಿತು, ವಿದ್ಯಾರ್ಥಿಮಿತ್ರ ಮುದ್ರಣವನ್ನು ಸಂಭ್ರಮಿಸಿದರು.
ಉಪನ್ಯಾಸಕರಾದ ವಿಜಯಲಕ್ಷಿ$್ಮ ಕೆಂಗನಾಳ, ಸವಿತಾ ಬಬಲಾದಿ, ಡಿ.ಎಸ್. ಪೂಜಾರಿ, ಎಸ್.ಬಿ. ಪಾಟೀಲ್, ಗೀತಾ ಧನ್ಯಾಳ, ವಿಶ್ವನಾಥ ನಾಯಕ, ಪೂಜಾ ಶಿಂಗೆ, ಮಾಳಪ್ಪ ಸಿದ್ದನಾಥ, ಎಸ್.ಬಿ. ಅವಟಿ ಹಾಗೂ 80ಕ್ಕೂ ಅಧಿಕ ವಿದ್ಯಾರ್ಥಿಗಳು ಆಗಮಿಸಿದ್ದರು. ಜಾಹೀರಾತು ವಿಭಾಗದ ನಿಖಿಲ್ ಹೊದ್ಲೂರ, ಪ್ರಸರಣ ವಿಭಾಗದ ಈರಣ್ಣ ಅವಟಿ, ಸಂತೋಷ ಗೋಡಿಕಟ್ಟಿ, ಮುದ್ರಣ ವಿಭಾಗದ ಮುಖ್ಯಸ್ಥ ರವಿ ಗುಡಗೇರಿ, ಸಿಬ್ಬಂದಿ ಇತರರಿದ್ದರು.