ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ಯೋಗ ದಿನಾಚರಣೆ

20230621_111413
Published on

ವಿರಾಜಪೇಟೆ:

ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ವಿರಾಜಪೇಟೆಯ ಸೇಂಟ್ ಆನ್ಸ್ ಪದವಿ ಕಾಲೇಜು ಹಾಗೂ ಎನ್.ಎಸ್. ಎಸ್. ಘಟಕದ ಸಹಭಾಗಿತ್ವದಲ್ಲಿ ಸೇಂಟ್ ಆನ್ಸ್ ಪದವಿ ಕಾಲೇಜು ಸಭಾಂಗಣದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಸಮೂಹ ಯೋಗ ಮತ್ತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಂತಾರಾಷ್ಟ್ರೀಯ ಯೋಗ ಶಿಕ್ಷಕಿ ಹನ್ಸಾ ಜೀವನ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ ಆರೋಗ್ಯ ಎಂದರೆ ಶಾರೀರಿಕ ಆರೋಗ್ಯ ಮಾತ್ರ ಎಂದುಕೊಳ್ಳಲಾಗುತ್ತದೆ. ಆದರೆ ಮಾನಸಿಕ ಆರೋಗ್ಯವು ಮುಖ್ಯವಾಗುತ್ತದೆ. ಈ ಎರಡು ಬಗೆಯ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ತುಂಬಾ ಸಹಕಾರಿಯಾಗಿದೆ. ಯೋಗ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಆರಂಭವಾಯಿತು.

ಯೋಗದಲ್ಲಿ ಉಸಿರಾಟದ ತಂತ್ರಗಳು, ಆಸನಗಳು ಅಡಗಿವೆ. ಇಂದಿನ ಕಾಲಘಟ್ಟದಲ್ಲಿ ತಡರಾತ್ರಿಯವರೆಗೂ ದುಡಿಯುವ ಕೆಲಸಗಳು, ಅದರಿಂದ ಉಂಟಾಗುವ ನಿದ್ರಾಹೀನತೆ, ಊಟದಲ್ಲಿ ಏರುಪೇರುಗಳಿಂದ ಮನುಷ್ಯನ ಶರೀರ ಮತ್ತು ಮನಸಿನ ಮೇಲೆ ಒತ್ತಡ ಉಂಟಾಗುತ್ತದೆ. ಆರೋಗ್ಯ ಹದಗೆಡುತ್ತದೆ. ಯೋಗಾಸನ ಮಾಡಲು ಹೇಗೆ ಬೇಕೋ ಹಾಗೇ ಬಾಗುವ, ಬಳಕುವ ದೇಹವಿದ್ದರೇ ಸಾಲದು. ಯೋಗಾಸನ ಮಾಡುತ್ತಾ ಮಾಡುತ್ತಾ ಎಲ್ಲಾ ಆಸನಗಳನ್ನು ಮಾಡುವಂತೆ ನಮ್ಮ ದೇಹ ಮತ್ತು ಮನಸನ್ನು ಹದಗೊಳಿಸುವುದಲ್ಲದೆ ಮನಸ್ಸು, ಉಸಿರು ಮತ್ತು ದೇಹವನ್ನು ಜೊತೆಯಾಗಿ ತೆಗೆದುಕೊಂಡು ಹೋಗುವುದೇ ನಿಜವಾದ ಯೋಗ ಎಂದರು.

ಮುಖ್ಯ ಅತಿಥಿಗಳಾಗಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆವರೆಂಡ್ ಫಾದರ್ ಐಸಾಕ್ ರತ್ನಾಕರ್ ಮಾತನಾಡಿ ಈ ಬಾರಿಯ ಯೋಗದ ಘೋಷವಾಕ್ಯ ವಸುದೈವ ಕುಟುಂಬಕA ಅಂದರೇ ಇಡೀ ವಿಶ್ವವೇ ಒಂದು ಕುಟುಂಬ ಎನ್ನುವ ಪರಿಕಲ್ಪನೆ. ಎಲ್ಲರೂ ಸೇರಿ ಉತ್ತಮ ಆರೋಗ್ಯವನ್ನು ಯೋಗದ ಮೂಲಕ ಪಡೆದುಕೊಂಡು ಆರೋಗ್ಯವಂತ ಸಮಾಜ ನಿರ್ಮಿಸಬೇಕಿದೆ. ಇಡೀ ವಿಶ್ವಕ್ಕೆ ಯೋಗವನ್ನು ಕೊಟ್ಟಂಥ ನಮ್ಮ ದೇಶದಲ್ಲಿ ಯೋಗ ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧಿಗೆ ಬರುತ್ತಿದೆ. ಈಗಲಾದರೂ ಯೋಗವನ್ನು ಜೀವನಕ್ರಮವಾಗಿ ಎಲ್ಲರೂ ರೂಪಿಸಿಕೊಂಡಿದ್ದೇ ಆದಲ್ಲಿ ಎಲ್ಲರೂ ಆರೋಗ್ಯವಂತರಾಗಬಹುದು ಎಂದು ಹೇಳಿದರು.

ಸೇಂಟ್ ಆನ್ಸ್ ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ ಯೋಗದ ಮೂಲಕ ಶಾರೀರಿಕ ಮತ್ತು ಮಾನಸಿಕ ಸಂತುಲತೆಯನ್ನು ಪಡೆಯಬಹುದು. ಒತ್ತಡ ನಿರ್ವಹಣೆ ಕೂಡಾ ಯೋಗದಿಂದಲೇ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎನ್.ಎಸ್.ಎಸ್. ಯೋಜನಾಧಿಕಾರಿ ಅರ್ಜುನ್, ಯೋಗವೆಂದರೆ ವ್ಯಾಯಾಮ ಎನ್ನುವ ತಪ್ಪು ಕಲ್ಪನೆಯಿದೆ. ಆದರೆ ಯೋಗ ಭಾವನಾತ್ಮಕ ಚಿಂತನೆಯಿAದ ಆರಂಭವಾಗುತ್ತದೆ ಎಂದರು.

ಕಾಲೇಜು ಆಂತರಿಕ ಗುಣಮಟ್ಟ ಭರವಸೆ ಕೋಶ ಮುಖ್ಯಸ್ಥೆ ಹೇಮಾ ಬಿ.ಡಿ., ವಿಜಯವಾಣಿ ಜಿಲ್ಲಾ ವರದಿಗಾರ ಸುನೀಲ್ ಪೊನ್ನೇಟಿ, ವಿರಾಜಪೇಟೆ ವರದಿಗಾರ್ತಿ ಉಷಾ ಪ್ರೀತಂ ವೇದಿಕೆಯಲ್ಲಿದ್ದರು.

ಎನ್. ಎಸ್ . ಎಸ್ ವಿದ್ಯಾರ್ಥಿನಿ ಸ್ನೇಹಾ ಕಾರ್ಯಕ್ರಮ ನಿರೂಪಿಸಿದರೆ ದೀಕ್ಷಿತಾ ಸ್ವಾಗತ ಮಾಡಿದರು. ಆರಂಭದಲ್ಲಿ ಎನ್. ಎಸ್ . ಎಸ್ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net