ಜ್ಞಾನವಿಕಾಸಕ್ಕೆ ವಿದ್ಯಾರ್ಥಿ ಉದ್ಯೋಗ ಮಿತ್ರ ಪೂರಕ, ಇಸ್ಟ್‌ವೆಸ್ಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕಿ ಮಂಜುಳಾ ಪುರುಷೋತ್ತಮ್ ಹೇಳಿಕೆ

05 Nela 01 Vijayavani vidyatree mitra
Published on


ವಿಜಯವಾಣಿಸುದ್ದಿಜಾಲ ನೆಲಮಂಗಲ
ಪ್ರಚಲಿತ ಸುದ್ದಿ ಜತೆಗೆ ವಿದ್ಯಾರ್ಥಿಗಳ ಜ್ಞಾನವಿಕಾಸಕ್ಕೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಹಕಾರಿ ಎಂದು ಇಸ್ಟ್‌ವೆಸ್ಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕಿ ಮಂಜುಳಾ ಪುರುಷೋತ್ತಮ್ ಹೇಳಿದರು.


ನಗರಸಭೆ ವ್ಯಾಪ್ತಿಯ ದಾನೋಜಿಪಾಳ್ಯದ ಇಸ್ಟ್‌ವೆಸ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಕಣ್ವ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಾರಿಗೆ ಹಾಗೂ ಮಾಧ್ಯಮ ಕ್ಷೇತ್ರದಲ್ಲೂ ಜನಮನ್ನಣೆ ಗಳಿಸಿರುವ ಡಾ.ವಿಜಯಸಂಕೇಶ್ವರ ಅವರ ಒಡೆತನದ ವಿಆರ್‌ಎಲ್ ಸಮೂಹ ಸಂಸ್ಥೆಯು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಜನತೆಯನ್ನು ಪ್ರಮುಖವಾಗಿಟ್ಟುಕೊಂಡು ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ಹೊರ ತರುತ್ತಿರುವುದು ಸಂತಸದ ಸಂಗತಿ ಎಂದರು.


ಕಡಿಮೆ ದರದಲ್ಲಿ ಗುಣಮಟ್ಟದ ಪತ್ರಿಕೆ ಪೂರೈಕೆಯಾಗುತ್ತಿದ್ದು, ಇದನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು. ಸಂಚಿಕೆ ಪ್ರಚಲಿತ ಸುದ್ದಿ, ಶಿಕ್ಷಣ, ಉದ್ಯೋಗ, ಕ್ರೀಡೆ ಸೇರಿ ಅನೇಕ ಮಾಹಿತಿ ಕಣಜವಾಗಿದ್ದು, ನಿರುದ್ಯೋಗ ಯುವ ಸಮುದಾಯಕ್ಕೂ ಸಹಕಾರಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net