ವಿಜಯವಾಣಿ ವಿದ್ಯಾರ್ಥಿ- ಉದ್ಯೋಗ ಮಿತ್ರ ಕಲಿಕೆಗೆ ಪೂರಕ : ಶಿಕ್ಷಕ ಜಯಕರ ಶೆಟ್ಟಿ ಕಿವಿಮಾತು ಗುರುಪುರ, ಪೆರ್ಮಂಕಿ ಶಾಲೆಯಲ್ಲಿ ವಿತರಣೆ

New Project (5)
Published on

ವಿಜಯವಾಣಿ ಸುದ್ದಿಜಾಲ ಗುರುಪುರ ಕಳೆದ ವರ್ಷವೂ ನಮ್ಮ ಶಾಲೆಗೆ ವಿಜಯವಾಣಿ ವಿದ್ಯಾರ್ಥಿ- ಉದ್ಯೋಗ ಮಿತ್ರ ಲಭ್ಯವಾಗಿತ್ತು. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಸಾಕಷ್ಟು ಪ್ರಯೋಜನವಾಗಿದೆ. ಮುಂದಿನ ನಾಲ್ಕು ತಿಂಗಳು ನಿರಂತರ ಉಚಿತವಾಗಿ ಸಿಗಲಿರುವ ಈ ಕಿರು ಪತ್ರಿಕೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಳಾಯಿಬೆಟ್ಟು ಶಾಲಾ ಶಿಕ್ಷಕ ಜಯಕರ ಶೆಟ್ಟಿ ಹೇಳಿದರು. ಗುರುಪುರ ಸರ್ಕಾರಿ ಪಿ.ಯು. ಕಾಲೇಜಿನ ಪ್ರೌಢಶಾಲೆ ಮತ್ತು ಉಳಾಯಿಬೆಟ್ಟು ಪಂಚಾಯಿತಿ ವ್ಯಾಪ್ತಿಯ ಪೆರ್ಮಂಕಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ವಿಜಯವಾಣಿ’ ಸಂಸ್ಥೆಯು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಸಿದ್ಧಪಡಿಸಿರುವ ‘ವಿಜಯವಾಣಿ ವಿದ್ಯಾರ್ಥಿ- ಉದ್ಯೋಗ ಮಿತ್ರ’ ಪುರವಣಿ ವಿತರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಗುರುಪುರ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಸಂಧ್ಯಾರಾಣಿ ವಾತನಾಡಿ, ವಿಜಯವಾಣಿ ಪತ್ರಿಕಾ ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿಜಯವಾಣಿ ವಿದ್ಯಾರ್ಥಿ- ಉದ್ಯೋಗ ಮಿತ್ರ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದೆ. ಇದರಲ್ಲಿ ಸಾವಾನ್ಯ ಜ್ಞಾನ, ಪ್ರಸಕ್ತ ವಿದ್ಯವಾನ, ತರಗತಿಗೆ ಪೂರಕವಾದ ಪ್ರಶ್ನೋತ್ತರದಂತಹ ಹಲವು ಮಹತ್ವದ ವಿಷಯಗಳಿವೆ. ಇದು ಸಂಗ್ರಹ ಯೋಗ್ಯವಾಗಿದ್ದು, 10ನೇ ತರಗತಿ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಭಗಳಲ್ಲಿ ಇದರ ಮಹತ್ವ ತಿಳಿಯಲಿದೆ ಎಂದರು. ಗುರುಪುರ ಸರ್ಕಾರಿ ಪ್ರೌಢಶಾಲಾ ಕಾರ್ಯಕ್ರಮದಲ್ಲಿ ಪತ್ರಕರ್ತ ಧನಂಜಯ ಗುರುಪುರ, ಗುರುಪುರ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕಿ ವೀಣಾ, ಶಿಕ್ಷಕಿ ಸಂಧ್ಯಾರಾಣಿ ಹಾಗೂ ಪೆರ್ಮಂಕಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲಾ ಕಾರ್ಯಕ್ರಮದಲ್ಲಿ ಉಳಾಯಿಬೆಟ್ಟು ಪಿಡಿಒ ಅನಿತಾ ಕ್ಯಾಥರಿನ್, ಪಂಚಾಯಿತಿ ಸಿಬ್ಬಂದಿ ಹರೀಶ್ ಉಳಾಯಿಬೆಟ್ಟು, ಮುಖ್ಯ ಶಿಕ್ಷಕಿ ಸುಮಂಗಲಾ ಎಸ್., ಶಿಕ್ಷಕರು ಉಪಸ್ಥಿತರಿದ್ದರು. ವಿಜಯವಾಣಿ ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ಸೂರಜ್ ಪೈ ಕಾರ್ಯಕ್ರಮ ನಿರ್ವಹಿಸಿದರು. ಉದಯ ಭಟ್, ಹರಿಕೇಶ್ ಶೆಟ್ಟಿ ಪ್ರಾಯೋಜಕತ್ವ ಗುರುಪುರ ವ್ಯವಸಾಯ ಸಹಕಾರಿ ಸಂದ ನಿರ್ದೇಶಕ ಜಿ.ಎಂ.ಉದಯ ಭಟ್ ಪ್ರಾಯೋಜಕತ್ವದಲ್ಲಿ ಗುರುಪುರ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಪ್ರಾಯೋಜಕತ್ವದಲ್ಲಿ ಪೆರ್ಮಂಕಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ವಿಜಯವಾಣಿ ಉದ್ಯೋಗ ಮಿತ್ರ’ ವಿತರಿಸಲಾಯಿತು.

ನಮ್ಮ ಕಾಲದಲ್ಲಿ ಇಂತಹ ಯೋಜನೆ ಅಥವಾ ಯೋಚನೆಗಳಿರಲಿಲ್ಲ. 8 ಪುಟದ ಕಿರು ಪತ್ರಿಕೆಯಲ್ಲಿರುವ ವಿಷಯಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿವೆ. ಪಠ್ಯಕ್ಕೆ ಪೂರಕವಾಗಿರುವ ಈ ಕಿರು ಪತ್ರಿಕೆಯ ಪ್ರಯೋಜನ ಪಡೆದು ಕಲಿಕೆಯಲ್ಲಿ ಉತ್ತಮ ಸಾಧನೆಗೈದಾಗ ಪ್ರಾಯೋಜಕರು ಖುಷಿಪಡಲಿದ್ದಾರೆ. ಧನಂಜಯ ಗುರುಪುರ, ಪತ್ರಕರ್ತ https://www.vijayavani.net/divider-grass-weed-cleaning https://www.vijayavani.net/bhakta-kanakadasa-jayanthi

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net