

ದೇವದುರ್ಗ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಮಂಗಳವಾರ ಪತ್ರಿಕಾ ದಿನಾಚರಣೆ ಪೂರ್ವಭಾವಿ ಸಭೆ ನಡೆಯಿತು.
ತಾಲೂಕು ಅಧ್ಯಕ್ಷ ಬಾಬುಅಲಿ ಕರಿಗುಡ್ಡ ಮಾತನಾಡಿ, ಜು.20ರೊಳಗೆ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಅತ್ಯುತ್ತಮ ವರದಿಗಾರಿಕೆಗೆ ಕೊಡಮಾಡುವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ವಿಜಯವಾಣಿ ತಾಲೂಕು ವರದಿಗಾರ ಅಮರೇಶ ಚಿಲ್ಕರಾಗಿ ಅವರನ್ನು ಆಯ್ಕೆ ಮಾಡಲಾಗಿದೆ.
ನಾಲ್ವರು ಪತ್ರಕರ್ತರಿಗೆ ತಾಲೂಕು ಮಟ್ಟದ ದುರ್ಗದ ಸಿರಿ ಪ್ರಶಸ್ತಿ ನೀಡಲಾಗುವುದು. ವಿಜಯವಾಣಿ ಅರಕೇರಾ ವರದಿಗಾರ ಮಹಾಂತೇಶ ಹಿರೇಮಠ, ಪತ್ರಕರ್ತರಾದ ನಾಗರಾಜ ಮನ್ನಾಪುರ, ಸಚ್ಚಿದಾನಂದ ನಾಯಕ, ನಿರಂಜನ್ ಮಸರಕಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕಿ ಕರೆಮ್ಮ ನಾಯಕ ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ಜಿಲ್ಲಾ ಕಾರ್ಯದರ್ಶಿ ಪಾಷಾ ಹಟ್ಟಿ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ ಇತರರು ಭಾಗವಹಿಸುವರು ಎಂದರು.
ಕಾರ್ಯದರ್ಶಿ ನಾಗರಾಜ ಸುಟ್ಟಿ, ಜಿಲ್ಲಾ ಸಮಿತಿ ಸದಸ್ಯ ಸೂಗೂರೇಶ್ವರ ಗುಡಿ, ಪತ್ರಕರ್ತರಾದ ನರಸಿಂಗ್‌ರಾವ್ ಸರ್ಕೀಲ್, ಬಸನಗೌಡ ದೇಸಾಯಿ, ಮಲ್ಲೇಶ ಮಾಶೆಟ್ಟಿ, ಬೆಳ್ಳೆಪ್ಪ ಬಲ್ಲಿದವ್, ಬೂದಯ್ಯಸ್ವಾಮಿ, ನಾಗರಾಜ ತೇಲ್ಕರ್, ಮಾರ್ಕಂಡಯ್ಯ ನಾಡದಾಳ, ಸುರೇಶಗೌಡ ವಟಗಲ್, ಗುರುನಾಥ ಇಂಗಳದಾಳ, ಆನಂದ ಗುಡಿ, ಶಿವರಾಜ ಜಗ್ಲಿ, ರಂಗನಾಥ ಜಗ್ಲಿ ಇತರರಿದ್ದರು.