ಎಲ್ಲ ವರ್ಗದವರಿಗೂ ಆದ್ಯತೆ ನೀಡುವ ವಿಜಯವಾಣಿ

kdr1
Published on

ಕಡೂರು: ಮಹಿಳೆಯರಿಗೆ ಉತ್ತೇಜನ ನೀಡುವ ಸದುದ್ದೇಶದ ಜತೆಗೆ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಿಜಯವಾಣಿ ದಿನಪತ್ರಿಕೆ ಕಾರ್ಯ ಶ್ಲಾಘನೀಯ ಎಂದು ಸ್ವರ್ಣಶ್ರೀ ಜೇಸಿಐ ಕಡೂರು ಸಂಸ್ಥೆ ಅಧ್ಯಕ್ಷೆ ಆಶಾ ಶ್ರೀನಿವಾಸ್ ಹೇಳಿದರು.

ಪಟ್ಟಣದ ಜೆಸಿಐ ಭವನದಲ್ಲಿ ವಿಜಯವಾಣಿ ದಿನಪತ್ರಿಕೆ ಮಹಿಳೆಯರಿಗಾಗಿ ಆಯೋಜಿಸಿದ್ದ ನ್ಯಾರಿ ನಿನಗೊಂದು ಸ್ಯಾರಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸೀರೆಗಳನ್ನು ವಿತರಿಸಿ ಮಾತನಾಡಿ, ಪತ್ರಿಕೆ ಕೇವಲ ಸುದ್ದಿಗಾಗಿ ಸೀಮಿತವಾಗದೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಎಲ್ಲ ವರ್ಗದವರಿಗೂ ಆದ್ಯತೆ ನೀಡುವ ಮೂಲಕ ಓದುಗರ ನಡುವಿನ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಲಕ್ಕಿ ಡ್ರಾ ಕೂಪನ್‌ಗಳ ಆಯ್ಕೆಯಲ್ಲೂ ಪಾರದರ್ಶಕತೆ ಕಾಪಾಡಿಕೊಂಡು ವಿಜೇತರನ್ನು ಆಯ್ಕೆಗೊಳಿಸಲಾಗಿದೆ ಎಂದರು.

ಜೆಸಿಐ ಸ್ವರ್ಣಶ್ರೀ ಸಂಸ್ಥೆಯ ವಲಯ ನಿರ್ದೇಶಕಿ ರೂಪ ಗೋಪಾಲಕೃಷ್ಣ ಮಾತನಾಡಿ, ಮಹಿಳೆಯರಲ್ಲಿ ಸ್ಪರ್ಧಾತ್ಮಕ ಭಾವನೆ ಹೆಚ್ಚಿಸಿಕೊಳ್ಳಲು ಹಾಗೂ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.

ವಿಜೇತರಾದ ಸುನೀತಾಬಾಯಿ, ಚಂದ್ರಮ್ಮ, ವಿ. ಸಹನಾ ಸೇರಿದಂತೆ ಐವರು ವಿಜೇತರಿಗೆ ಸೀರೆಗಳನ್ನು ವಿತರಿಸಲಾಯಿತು. ನಂತರ ಜೆಸಿ ಸ್ವರ್ಣಶ್ರೀ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಜೆಸಿ ಸ್ವರ್ಣಶ್ರೀ ಘಟಕದ ಸದಸ್ಯರಿಗೆ ಬಹುಮಾನಗಳನ್ನು ವಿತರಿಸಿದರು. ಜೆಸಿ ಸ್ವರ್ಣಶ್ರೀ ಘಟಕದ ಖಜಾಂಚಿ ಶೋಭಾ ನಾಗೇಂದ್ರ, ವಿಜಯವಾಣಿ ತಾಲೂಕು ವರದಿಗಾರ ಎಚ್.ಆರ್. ದೇವರಾಜ್, ಪ್ರಸರಾಂಗ ವಿಭಾಗದ ಕುಂದೂರು ಹರೀಶ್ ಸೇರಿದಂತೆ ಜೆಸಿ ಸ್ವರ್ಣಶ್ರೀ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net