ಪತ್ರಿಕೆಗಳಿಂದಲೇ ಸಾಮಾಜಿಕ ಸ್ವಾಸ್ಥ್ಯ ; ಪ್ರಾಚಾರ್ಯ ಡಾ.ಶಂಕರ ತೇರದಾಳ ಅಭಿಮತ

73A8376.JPG
Published on

ಬೆಳಗಾವಿ : ವೈದ್ಯರು ಔಷಧೋಪಚಾರದಿಂದ ರೋಗಿಯನ್ನು ಸುಧಾರಿಸಿದಂತೆ, ಶಿಕ್ಷಕರು ವಿದ್ಯಾರ್ಥಿಗಳಿಗೆ ತಪ್ಪು ತಿದ್ದಿ ಸರಿಯಾದ ಮಾರ್ಗ ತೋರುವಂತೆಯೇ ಸಮಾಜದಲ್ಲಿ ಆಗುಹೋಗುಗಳ ಮೇಲೆ ನಿಗಾ ಇಟ್ಟು, ಸಮುದಾಯದ ಅಂಕು-ಡೊಂಕುಗಳನ್ನು ತಿದ್ದಿ ಸಾಮಾಜಿಕ ಸ್ವಾಸ್ಥೃ ಕಾಪಾಡುವಲ್ಲಿ ಮಾರ್ಗಸೂಚಿಯಾಗಿ ಪತ್ರಿಕೆಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎಂದು ಪ್ರಾಚಾರ್ಯ ಡಾ.ಸಂಕರ ತೇರದಾಳ ಹೇಳಿದರು.

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವಾಹಿನಿ ಸಹಯೋಗದಲ್ಲಿ ಬೆಳಗಾವಿಯ ಮಹಾಂತೇಶ ನಗರದಲ್ಲಿನ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ‘ಸ್ವಾತಂತ್ರೊೃೀತ್ಸವ ಪದಬಂಧ’ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯವನ್ನು ಶಿಕ್ಷಕರು ರೂಪಿಸಿದರೇ, ಇಡೀ ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸುವಲ್ಲಿ ಪತ್ರಿಕೆಗಳ ಕೊಡುಗೆ ಅಪಾರವಾಗಿದೆ ಎಂದರು.

ಸಾಮಾಜಿಕ, ಆರ್ಥಿಕ, ರಾಜಕೀಯ, ಕ್ರೀಡೆ ಹಾಗೂ ವಿಜ್ಞಾನ-ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳ ಸಂಪೂರ್ಣ ಮಾಹಿತಿಯನ್ನು ಓದುಗರಿಗೆ ದಿನವೂ ಒದಗಿಸುತ್ತದೆ. ಪತ್ರಿಕೆಗಳನ್ನು ಪ್ರತಿದಿನವೂ ಕನಿಷ್ಠ ಹತ್ತು ನಿಮಿಷ ಓದುವುದರಿಂದ ಸ್ಪರ್ಧಾತ್ಮಕ ಮನೋಭಾವಕ್ಕೆ ಅಡಿಪಾಯ ಹಾಕುತ್ತವೆ. ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ  ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರ ಸೇವಕ ಹಣಮಂತ ಕೊಂಗಾಲಿ ಮಾತನಾಡಿ, ಕನ್ನಡ ಪತ್ರಿಕೆಗಳನ್ನು ಓದುವುದರಿಂದ ಕನ್ನಡ ಭಾಷಾ ಸಾಮಾರ್ಥ್ಯ ವೃದ್ಧಿಸುತ್ತದೆ. ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ಪತ್ರಿಕಾ ರಂಗದ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ವಿವಿಧ ಕ್ಷೇತ್ರಗಳಲ್ಲಿನ ದೈನಂದಿನ ಬೆಳವಣಿಗೆಯನ್ನು ಪತ್ರಕರ್ತರು ಹೆಕ್ಕಿ ತೆಗೆದು, ಆಕರ್ಷಕ ಹಾಗೂ ಕುತೂಹಲಭರಿತವಾಗಿ ಓದುಗರಿಗೆ ಮುಟ್ಟಿಸುವಲ್ಲಿ ಪತ್ರಕರ್ತರ ಶ್ರಮ ಹೆಚ್ಚಿದೆ. ದೈನಂದಿನ ಸುದ್ದಿಯ ಧಾವಂತದ ನಡುವೆಯೂ ವಿಜಯವಾಣಿ ಪತ್ರಿಕೆಯು ವಿದ್ಯಾರ್ಥಿಗಳಲ್ಲಿನ ಇತಿಹಾಸ ಪ್ರಜ್ಞೆ ಹಾಗೂ ಭಾಷಾ ಕೌಶಲ್ಯವನ್ನು ಪೋಷಿಸುವ ನಿಟ್ಟಿನಲ್ಲಿ ಪದಬಂಧ ಸ್ಪರ್ಧೆ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ವಿಜಯವಾಣಿ ಆಯೋಜಿಸಿದ್ದ ‘ಸ್ವಾತಂತ್ರ್ಯೋತ್ಸವ ಪದಬಂಧ ಸ್ಪರ್ಧೆ’ಯಲ್ಲಿ ಸ್ಪರ್ಧಾಗಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 
ವಿಜಯವಾಣಿ ಆಯೋಜಿಸಿದ್ದ ‘ಸ್ವಾತಂತ್ರ್ಯೋತ್ಸವ ಪದಬಂಧ ಸ್ಪರ್ಧೆ’ಯಲ್ಲಿ ಸ್ಪರ್ಧಾಗಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 

ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಬಹುಮಾನ ನೀಡಿ ಪ್ರೋತ್ಸಾಹಿಸುವಲ್ಲಿ ಪತ್ರಿಕೆಯು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮ ಕಮನೋಭಾವ ಮೂಡಿಸುವುದಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ವಿಜಯವಾಣಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲಿ ಎಂದು ಆಶಿಸಿದರು. ಇಷ್ಟು ವಿದ್ಯಾರ್ಥಿಗಳಲ್ಲಿ ಭವಿಷ್ಯದಲ್ಲಿ ಯಾರು ಪ್ರಧಾನಿಮಂತ್ರಿಯಾಗಿ ನರೇಂದ್ರ ಮೋದಿ ಹಾಗೂ ಕ್ರಿಡಾಪಟುವಾಗಿ ಸಚಿನ್ ತೆಂಡೂಲ್ಕರ್ ಅವರಂತೆ ಪ್ರಖ್ಯಾತರಾಗುತ್ತೀರೋ ಏನೋ? ಇಂಥಹ ಹತ್ತಾರು ಪ್ರಶ್ನೆಗಳಿಗೆ ಶಿಕ್ಷಕರಲ್ಲಿ ಉತ್ತರವಿದೆ. ಆಯಾ ವಿದ್ಯಾರ್ಥಿಗಳಿಂದ ಶಿಕ್ಷಕರು ಅಂಥಹ ಪರಿಶ್ರಮ ಕಂಡು, ಅವರ ಗುರಿ ಇಡೇರಿಕೆಗೆ ಪ್ರೋತ್ಸಾಹಿಸರುತ್ತಾರೆ. ಪತ್ರಿಕೆಗಳೂ ಹೀಗೆಯೇ ಪ್ರತಿಭಾವಂತರಿಗೆ ಬೆಂಬಲ ನೀಡಿದರೆ ಮುಂದಿನ ವಿದ್ಯಾರ್ಥಿಗಳು ಮುಂದಿನ ಸಾಧಕರಾಗಬಲ್ಲರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರೊ.ಡಾ.ಅರ್ಜುನ್ ಜಂಬಗಿ  ಮಾತನಾಡಿ, ಯಾವುದಾರೂ ಒಂದು ವಿಷಯವನ್ನು ಪರಿಪೂರ್ಣವಾಗಿ ವಿವಿಧ ಆಯಾಮಗಳಲ್ಲಿ ಅರಿತುಕೊಳ್ಳಲು ಪತ್ರಿಕೆಗಳನ್ನು ಓದಲೇಬೇಕು. ಪತ್ರಿಕೆ ಓದಿನಿಂದ ಮಾತನಾಡಲು ಆತ್ಮವಿಶ್ವಾಸ ಬರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳನ್ನು ಓದದೇ ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ಮನ್ನಣೆ ಲಭಿಸುವುದು ಕಷ್ಟಸಾಧ್ಯ ಎಂದು ತಿಳಿಸಿದರು.
ಜಾಹೀರಾತು ವಿಭಾಗದ ಅಭಿಜಿತ್ ನಂದಿ ಸೇರಿದಂತೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಿಬ್ಬಂದಿ ಮತ್ತು ಕಾಲೇಜು ಉಪನ್ಯಾಸಕರು ಇದ್ದರು. ಮುಖ್ಯ ಉಪ ಸಂಪಾದಕ ಮಲ್ಲಿಕಾರ್ಜುನ ತಳವಾರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಅಶ್ವಿನಿ ಕಡಬಿ ನಿರೂಪಿಸಿದರು. ಶಿಕ್ಷಕಿ ಜಯಶ್ರೀ ಗುರುವ ವಂದಿಸಿದರು.
-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net