ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಹಕಾರಿ

Oplus_16777216
ದಡ್ಡಿ ಸುಂದರಬಾಯಿ ಬಾದುರ್ಗೆ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ವಿತರಿಸಲಾಯಿತು. ಶಂಕರ ಕಾಂಬಳೆ, ಮಹಾಂತೇಶ ಪಾಟೀಲ, ಲಕ್ಷ್ಮೀ ನಾಯಕ, ಸೀಮಾ ಗಡಕರಿ, ನಸೀಮಾ ಬುಡ್ಡನ್ನವರ ಇತರರಿದ್ದರು.
Published on

ಚಿಕ್ಕೋಡಿ/ದಡ್ಡಿ: ಶೈಕ್ಷಣಿಕ ಕ್ಷೇತ್ರದಲ್ಲಿ ಇಂದು ತೀವ್ರ ಪೈಪೋಟಿ ಇರುವುದರಿಂದ ಪರೀಕ್ಷೆ ಎದುರಿಸಲು ‘ವಿಜಯವಾಣಿ ವಿದ್ಯಾರ್ಥಿ ಮಿತ್ರ’ ಪತ್ರಿಕೆ ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಕಾರಿ ಶಂಕರ ಕಾಂಬಳೆ ಹೇಳಿದರು.

ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ಶ್ರೀಮತಿ ಸುಂದರಬಾಯಿ ಭಾಂದುರ್ಗೆ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಗುರುವಾರ ‘ವಿಜಯವಾಣಿ ವಿದ್ಯಾರ್ಥಿ ಮಿತ್ರ’ ಪತ್ರಿಕೆ ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳ ಕಲಿಕೆಗೆ ‘ವಿದ್ಯಾರ್ಥಿ ಮಿತ್ರ’ ಅನುಕೂಲವಾಗಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಯ 60 ವಿದ್ಯಾರ್ಥಿಗಳಿಗೆ 60 ಪತ್ರಿಕೆ ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ‘ವಿಜಯವಾಣಿ ವಿದ್ಯಾರ್ಥಿ ಮಿತ್ರ’ದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಮುಖ್ಯ ಶಿಕ್ಷಕ ಮಹಾಂತೇಶ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸಲು ಪಿಡಿಒ ಶಂಕರ ಕಾಂಬಳೆ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ನಾಯಕ ಹಾಗೂ ಸರ್ವ ಸದಸ್ಯರು ಶಾಲೆಗೆ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆಯನ್ನು ಕೊಡುಗೆಯಾಗಿ ನೀಡಿರುವುದು ಉತ್ತಮ ಬೆಳವಣಿಗೆ ಎಂದರು.

ವರದಿಗಾರ ಕಲ್ಲಪ್ಪ ಪಾಮನಾಯಿಕ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ನಾಯಕ, ಉಪಾಧ್ಯಕ್ಷೆ ಸೀಮಾ ಗಡಕರಿ, ಸದಸ್ಯರಾದ ನಸೀಮಾ ಬುಡ್ಡನ್ನವರ, ಸುಜಾತಾ ಕಾಂಬಳೆ, ಮುನಿರುದ್ದೀನ್ ಶೇಖ್, ಮುಖಂಡರಾದ ರಾಜು ೆಸರವಾಡಕರ, ಪಿತಾಂಬರ ಇಂಗವಲೆ, ಪರಶುರಾಮ ಪಾಮನಾಯಿಕ, ಗ್ರಾಪಂ ಕಾರ್ಯದರ್ಶಿ ಯಾಸೀನ್ ಅರಳಿಕಟ್ಟಿ, ಬಸವರಾಜ ಜಾಂಬೋಟಿ, ವಿನೋದ ಪಾಟೋಳಿ, ಭರಮಾ ಮಾಲಾಜಿ, ಈಶ್ವರ ಪಾಳೇಕರ, ವಿಠ್ಠಲ ಪಾಟೀಲ, ಜಿ.ಸಿ.ಕಡೆವಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net