

ಹಿರಿಕರ ರವಿ ಸೋಮವಾರಪೇಟೆ
ಜೇನುಕೃಷಿಗೆ ಸರ್ಕಾರದಿಂದ ಉತ್ತಮ ಸೌಲಭ್ಯ ಮತ್ತು ಮಾರ್ಗದರ್ಶನ ಸಿಕ್ಕರೆ, ರೈತರು ಜೇನು ಕೃಷಿಯತ್ತ ಆಸಕ್ತಿ ವಹಿಸಲಿದ್ದಾರೆಂದು ಪ್ರಗತಿಪರ ಜೇನು ಕೃಷಿಕರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಕನ್ನಡದ ನಂಬರ್ ೧ ದಿನಪತ್ರಿಕೆ ವಿಜಯವಾಣಿ ವತಿಯಿಂದ ಮಂಗಳವಾರ ಇನಕನಹಳ್ಳಿ ಗ್ರಾಮದ ಪ್ರಗತಿಪರ ಜೇನು ಕೃಷಿಕ ಎಸ್.ಟಿ.ಉತ್ತಯ್ಯ ಅವರ ಮನೆಯಲ್ಲಿ ನಡೆದ ಜೇನು ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ರೈತರು ಮುಕ್ತ ಅಭಿಪ್ರಾಯ ವ್ಯಕ್ತ ಪಡಿಸಿದರು.
ಕೊಡಗಿಗ ಪ್ರಕೃತಿ ಜೇನುಕೃಷಿಗೆ ಪೂರಕವಾಗಿದೆ. ಜೇನ್ನೊಣಗಳಿಗೆ ಅವಶ್ಯಕವಿರುವ ಪುಷ್ಪರಸದ ಮರಗಳು ಯಥೇಚ್ಚವಾಗಿವೆ. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಹೂವಿನ ಮರಗಳಿಗೆ, ಅರೇಬಿಕಾ ಮತ್ತು ರೋಬಸ್ಟಾ ಕಾಫಿ ಬ್ಲಾಸಂ ಸಂದರ್ಭ ಜೇನ್ನೊಣಗಳಿಗೆ ಬೇಕಾದಷ್ಟು ಪುಷ್ಪರಸ ಸಿಕ್ಕಿ ಜೇನು ಉತ್ಪಾದನೆ ಹೆಚ್ಚಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಜೇನುಕೃಷಿ ಕೈಡಿಯುತ್ತಿಲ್ಲ. ಮಾರಕ ರೋಗಗಳು ಬಾಧಿಸುತ್ತಿವೆ. ರೋಗ ನಿಯಂತ್ರಣಕ್ಕೆ ಸರ್ಕಾರದಿಂದ ಸಂಶೋಧನೆಗಳು ನಡೆಯುತ್ತಿಲ್ಲ. ಒಮ್ಮೆ ರೋಗಬಾಧೆ ಕಾಣಿಸಿಕೊಂಡರೆ ಜೇನ್ನೊಣಗಳ ಕುಟುಂಬ ನಾಶ ವಾದರೆ, ಮತ್ತೆ ಕುಟುಂಬವನ್ನು ಕಟ್ಟುವುದು ಬಹಳ ಕಷ್ಟಕರವಾಗಿದೆ. ಆದರೆ, ಸರ್ಕಾರದಿಂದ ನಷ್ಟ ಪರಿಹಾರ ಸಿಗುತ್ತಿಲ್ಲ ಎಂದು ಕೃಷಿಕರು ನೊಂದುಕೊಂಡರು.
ಈ ಕಾರಣ ಬಹುತೇಕ ಜನರ ಜೇನುಕೃಷಿ ಕೈಬಿಟ್ಟಿದ್ದಾರೆ. ಪ್ರಸಕ್ತ ವರ್ಷ ಮುಂಗಾರು ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ತಾಲೂಕಿನ ಜೇನು ಕೃಷಿಕರು ನಷ್ಟ ಅನುಭವಿಸಿದ್ದಾರೆ. ಜೇನ್ನೊಣಗಳ ಸಂತನೋತ್ಪತಿ ಕಡಿಮೆಯಾಗಿ, ಜೇನು ಪೆಟ್ಟಿಗೆಯಲ್ಲಿ ಹುಳು ಕಡಿಮೆ ಯಾಗಿ ಜೇನುತುಪ್ಪ ಉತ್ಪಾದನೆ ಅತ್ಯಂತ ಕಡಿಮೆಯಾಗಿದೆ ಎಂದು ಹೇಳಿದರು.
ಮಳೆಗಾಲದ ಮಳೆ ಮೂರು ತಿಂಗಳಿಗೆ ಸೀಮಿತವಾಗಿತ್ತು. ಆದರೆ, ಪ್ರಸಕ್ತ ವರ್ಷ ಅಕಾಲಿಕ ಮಳೆ ಹೆಚ್ಚುವರಿಯಾಗಿ ಬೀಳುತ್ತಿರುವುದರಿಂದ ಜೇನ್ನೊಣಗಳು ಹೊರ ಹೋಗಿ ಪರಾಗವನ್ನು ತರಲು ಸಾಧ್ಯವಾಗಿಲ್ಲ. ಶಾಂತಳ್ಳಿ, ಸುಂಠಿಕೊಪ್ಪ, ಸೋಮವಾರಪೇಟೆ ಕಸಬ ಹೋಬಳಿಯಲ್ಲಿ ಅತಿ ಹೆಚ್ಚಾಗಿ ಬೆಳೆದಿರುವ ಅಣಗಲು ಮರದಲ್ಲಿ ಮಧ್ಯಾಹ್ನದ ಸಮಯದಲ್ಲಿ ಉತ್ಪತಿಯಾಗುವ ಪುಷ್ಪರಸ ಮಳೆುಂದ ಜೆನ್ನೋಣಗಳಿಗೆ ದೊರೆಯದ ನ್ನೆಲೆಯಲ್ಲಿ ಜೇನು ತುಪ್ಪ ಉತ್ಪಾದನೆ ಕಡಿಮೆಯಾಗಿದೆ.
ತಾಲೂಕಿನ ಶಾಂತಳ್ಳಿ ಹೋಬಳಿಯ ಇನಕನಹಳ್ಳಿ, ಕುಂದಳ್ಳಿ, ಕುಮಾರಳ್ಳಿ, ಬಾಚಳ್ಳಿ, ಜಕ್ಕನಹಳ್ಳಿ, ಕೊತ್ನಳ್ಳಿ, ಹೆಗ್ಗಡಮನೆ, ಮಲ್ಲಳ್ಳಿ, ಬೀದಳ್ಳಿ, ನಾಡ್ನಳ್ಳಿ, ಹರಗ ಹಾಗು ಸುಂಠಿಕೊಪ್ಪ ಹೋಬಳಿಯ ಸೂರ್ಲಬ್ಬಿ, ಗರ್ವಾಲೆ, ಕಿಕ್ಕರಳ್ಳಿ, ಮೂವತ್ತೊಕ್ಕಲು, ಕುಂಬಾರಗಡಿಗೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಿನ ಜನರು ಜೇನು ಕೃಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದಲ್ಲೇ ಜೇನುಕೃಕರಿಗೆ ಪ್ರೋತ್ಸಾಹ ಧನ ನೀಡುವಂತಾಗಬೇಕು ಎಂದು ಹೇಳಿದರು.
ಕೊಡಗಿನಲ್ಲಿ ನಕಲಿ ಜೇನು ಮಾರಾಟದ ಜಾಲದೆ. ಹೊರಜಿಲ್ಲೆುಂದ ಕೆಲವರು ಬೆಲ್ಲದ ಪಾನಕವನ್ನು ತಂದು ಜೇನು ಅಂತ ಮಾರಾಟ ಮಾಡುತ್ತಿದ್ದಾರೆ. ಪ್ರವಾಸಿಗರ ನಕಲಿ ಜೇನನ್ನು ಕೊಡಗಿನ ಜೇನು ತುಪ್ಪ ಎಂದು ಖರೀದಿಸುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಕೊಡಗಿನ ಜೇನು ಕೃಷಿಕರು ಉತ್ಪಾದಿಸಿದ ಜೇನಿಗೆ ೮೦೦ ರಿಂದ ೧ ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ಜೇನು ಕೃಷಿಕರ ಸಹಕಾರ ಸಂಘ ಕೃಕರಿಂದ ಒಂದು ಕೆ.ಜಿ.ಜೇನಿನ ಬೆಲೆ ೨೭೫ ರೂ.ಗಳ ನಿಗದಿ ಪಡಿಸಿದೆ. ಈ ಕಾರಣದಿಂದ ಕೃಷಿಕರು ಸಂಘಕ್ಕೆ ಜೇನು ಕೊಡುತ್ತಿಲ್ಲ. ಕೊಡಗಿನಲ್ಲಿ ಉತ್ಪತಿಯಾಗುವ ಜೇನಿಗೆ ಕೆ.ಜಿ. ೮೦೦ ರೂ.ಗಳನ್ನು ನಿಗದಿ ಪಡಿಸಿ, ಮಾರಾಟಕ್ಕೆ ೧ ಸಾವಿರ ಸಾವಿರ ರೂ.ಗಳನ್ನು ನಿಗದಿ ಮಾಡಿ, ಕೊಡಗಿನ ಜೇನು ಎಂಬ ಬ್ರಾಂಡ್ ನೇಮ್ ಕೊಟ್ಟರೆ, ಪ್ರವಾಸಿಗರು ಖರೀದಿಸುತ್ತಾರೆ. ಡೆನ್ಮಾರ್ಕಿನಿಂದ ತರುವ ಜೇನನ್ನ ಆ ದೇಶದ ಹೆಸರು ಹಾಕಿ ೪೦೦ ರೂ.ಗಳಿಗೆ ಮಾರಾಟ ಮಾಡಲಿ ಎಂದು ಪ್ರಗತಿಪರ ಕೃಕ ಇನಕನಹಳ್ಳಿ ಉತ್ತಯ್ಯ ಸಲಹೆ ನೀಡಿದರು.
**
ಜೇನು ಕೃಷಿಯನ್ನು ಪ್ರಕೃತಿ ರಕ್ಷಣೆ ಮಾಡಬೇಕು. ಪ್ರತಿ ವರ್ಷ ಅಕಾಲಿಕ ಮಳೆಯಿಂದ ಜೇನ್ನೊಣಗಳಿಗೆ ಪುಷ್ಪರಸದ ಕೊರತೆಯಾಗುತ್ತಿದೆ. ಪ್ರಸಕ್ತ ಅಬ್ಲು ಜಾತಿಯ ಹೂ ಹಾಳಾಗಿದೆ. ಹೆಮ್ಮಡ್ಡೆ ಮರ ಹೂ ಮೋಡದಿಂದ ಉದುರಿಹೋಗಿದೆ. ಜೇನ್ನೊಣಗಳಿಗೆ ಮಕರಂದ ಸಿಕ್ಕಿಲ್ಲ. ಡಿಸೆಂಬರ್‌ನಲ್ಲಿ ಸಿಗುವ ಜೇನು ತುಪ್ಪ ಅತ್ಯಂತ ಗುಣಮಟ್ಟದ್ದು, ಕೆ.ಜಿ.ಗೆ ಒಂದು ಸಾವಿರಕ್ಕೆ ಜನರು ಖರೀದಿ ಮಾಡುತ್ತಾರೆ. ಈ ವರ್ಷ ಜೇನು ಇಳುವರಿ ತುಂಬ ಕಡಿಮೆುದೆ. ಸರ್ಕಾರ ಕೃಕರಿಗೆ ಸಹಾಯಧನ ನೀಡಬೇಕು. ಎಸ್.ಟಿ. ಉತ್ತಯ್ಯ, ಜೇನು ಕೃಷಿಕರು, ಇನಕನಹಳ್ಳಿ ಗ್ರಾಮ.
**
ಕೊಡಗಿನ ಜೇನಿಗೆ ತುಂಬಾ ಬೇಡಿಕೆಯಿದೆ. ನಕಲಿ ಜೇನು ಕೊಡಗಿನಲ್ಲಿ ಅವ್ಯಾಹತವಾಗಿ ಮಾರಾಟವಾಗುತ್ತಿದೆ. ದಂಧೆಕೋರರನ್ನು ಹಿಡಿದು ಕಟ್ಟುನಿಟ್ಟಿನ ಕಾನೂನು ಕ್ರಮ ಸಾಧ್ಯವಾಗುತ್ತಿಲ್ಲ. ಪ್ರವಾಸಿಗರಿಗೆ ನಕಲಿ ಜೇನಿನ ಬಗ್ಗೆ ಅರಿಲ್ಲ. ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಳ್ಳಬೇಕು. ಜಿಲ್ಲಾಡಳಿತ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಗುಣಮಟ್ಟದ ಜೇನಿಗೆ ಅಧಿಕ ಬೆಲೆ ನಿಗದಿ ಪಡಿಸಿದರೂ ಅಡ್ಡಿಯಲ್ಲ. ರೋಗ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಚಂದ್ರಾಜು, ಪ್ರಗತಿಪರ ಕೃಷಿಕರು, ಇನಕನಹಳ್ಳಿ.
**
ವೈಜ್ಞಾನಿಕ ಜೇನು ಕೃಷಿ ಲಾಭದಾಯಕವಾಗಿದೆ. ಜೇನು ಕೃಷಿ ಬಗ್ಗೆ ರೈತರಿಗೆ ಆಸಕ್ತಿ ಮೂಡುವಂತೆ ಮಾಡಬೇಕಾಗಿದೆ. ಸರ್ಕಾರ ಹೆಚ್ಚಿನ ಸೌಲಭ್ಯ ಒದಗಿಸಬೇಕು. ರೋಗಬಾಧೆಯಿಂದ ನಷ್ಟವಾದರೆ ಹೆಚ್ಚಿನ ಧನ ಸಹಾಯ ಮಾಡಬೇಕು. ಕಾಫಿ ಬೆಳೆಗಾರರು ಜೇನು ಕೃಷಿಗೆ ಅದ್ಯತೆ ನೀಡಬೇಕು. ಜಿ.ಜೆ. ಮಂಜುನಾಥ್, ಜೇನುಕೃ ತರಬೇತುದಾರ, ಪ್ರಗತಿಪರ ಕೃಷಿಕರು, ತಾಕೇರಿ ಗ್ರಾಮ.
**
ಶಾಂತಳ್ಳಿ ಹೋಬಳಿಯಲ್ಲಿ ಹೆಚ್ಚಿನ ರೈತರು ಜೇನುಕೃಷಿ ಮಾಡುತ್ತಿದ್ದಾರೆ. ರೋಗಬಾಧೆಯಿಂದ ಪೆಟ್ಟಿಗೆಯಿಂದ ಜೇನ್ನೋಣ ಖಾಲಿಯಾಗಿದೆ. ಜೇನು ಬೆಕ್ಕು ಕಾಟವಿದೆ. ಸರ್ಕಾರ ಉಚಿತವಾಗಿ ಜೇನುಪೆಟ್ಟಿಗೆ ಹಾಗೂ ಕುಟುಂಬ ನೀಡಬೇಕು. ಕೃಷಿಕರಿಗೆ ಬಡ್ಡಿ ರಹಿತ ಸಾಲ ಹಾಗೂ ಸಹಾಯಧನ ಒದಗಿಸಬೇಕು. ಜೇನು ಲಾಭದಾಯಕವಾದರೆ, ಉತ್ಪಾದನೆ ಹೆಚ್ಚಾಗುತ್ತದೆ. ಹರೀಶ್‌ಕುಮಾರ್, ಜೇನು ಕೃಷಿಕರು, ಹೆಗ್ಗಡಮನೆ ಗ್ರಾಮ.