ವಿಜಯವಾಣಿ ವರದಿಗಾರ ಶರಣು ಪಾಟೀಲ್​ ನಿಧನ

Nagalingappa Badiger
Published on

ವಿಜಯಪುರ: ವಿಜಯವಾಣಿ ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರರಾದ ಶರಣು ಪಾಟೀಲ (ಯಂಕಂಚಿ) ಭಾನುವಾರ ನಿಧನರಾಗಿದ್ದಾರೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್‌ ಅವರು ಟ್ವೀಟ್​ ಮಾಡುವ ಮೂಲಕವಾಗಿ ಕಂಬನಿ ಮೀಡಿದಿದ್ದಾರೆ.ವಿಜಯವಾಣಿ ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರರಾದ ಶರಣು ಪಾಟೀಲ (ಯಂಕಂಚಿ) ಭಾನುವಾರ ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​​ ಮಾಡಿದ್ದಾರೆ.

ಕ್ರೈಂ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪು ಒತ್ತಿದ್ದ, ಅತ್ಯದ್ಭುತವಾದ ಬರವಣಿಗೆ-ನಿರೂಪಣಾ ಶೈಲಿ ಹೊಂದಿದ್ದ ಶರಣು ಪಾಟೀಲ್ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೂಲತಃ ವಿಜಯಪುರದವರಾಗಿದ್ದ ಶರಣು ಪಾಟೀಲ್ ಈ ಹಿಂದಿನ ಈ ಟಿವಿಯಲ್ಲಿ ಕೆಲಸ ಮಾಡಿದ್ದರು. ನಂತರ ಪತ್ರಿಕೆಗಳಲ್ಲಿ ಕೆಲಸ ಮಾಡಿ ಮತ್ತೆ ಈಟಿವಿ-ಭಾರತ್​​ನಲ್ಲಿ ಕ್ರೈಂ ರಿಪೋರ್ಟರ್ ಆಗಿದ್ದರು. ಝೀ ಟಿವಿಯಲ್ಲು ಅವರು ಕೆಲಸ ಮಾಡಿದ್ದರು.

ಕ್ರೈಂ ಪತ್ರಿಕೋದ್ಯಮದಲ್ಲಿ ಶರಣು ಪಾಟೀಲ್ ಒಳ್ಳೆ ಹೆಸರು ಮಾಡಿದ್ರು, ಅನೇಕ ಸ್ಫೋಟಕ ಎನ್ನುವಂತ ಸುದ್ದಿಗಳು ಅವರ ಕಾರ್ಯಾವಧಿ ವೇಳೆ ಮಾದ್ಯಮಗಳಲ್ಲಿ ಪ್ರಕಟವಾಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರನ್ನು ಕಾಡಲಾರಂಭಿಸಿದ್ದ ಅನಾರೋಗ್ಯದಿಂದಾಗಿ ತುಂಬಾ ಮಂಕಾಗಿದ್ದರು.

ಶರಣುಪಾಟೀಲ್ ನಿಧನಕ್ಕೆ ವಿಜಯಪುರದ ಪತ್ರಕರ್ತರ ಬಳಗ ಶೋಕ-ಸಂತಾಪ ಸೂಚಿಸಿದೆ. ಬೆಂಗಳೂರಿನಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿದ್ದ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net