ವಿಜಯವಾಣಿ ಕಚೇರಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭೇಟಿ

21BGV_ Jaggu 4
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಬೆಳಗಾವಿಯ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ಚಿಕ್ಕೋಡಿಯ ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶುಕ್ರವಾರ ಕನ್ನಡದ ನಂ.1 ಪತ್ರಿಕೆ ಬೆಳಗಾವಿ ವಿಜಯವಾಣಿ ಕಚೇರಿ ಹಾಗೂ ಹೊನಗಾ ಕೈಗಾರಿಕಾ ಪ್ರದೇಶದಲ್ಲಿರುವ ವಿಆರ್‌ಎಲ್ ಮೀಡಿಯಾ ಪ್ರಿಂಟಿಂಗ್ ಪ್ರೆಸ್‌ಗೆ ಶೈಕ್ಷಣಿಕ ಭೇಟಿ ನೀಡಿ ಪತ್ರಿಕೆಯ ಕಾರ್ಯ ವಿಧಾನ ತಿಳಿದುಕೊಂಡು ಖುಷಿಪಟ್ಟರು.

ಮೊದಲಿಗೆ ಹಳೇ ಪಿ.ಬಿ. ರಸ್ತೆಯ ದೊಡ್ಡಣ್ಣನವರ ಕಾಂಪೌಂಡ್‌ನಲ್ಲಿರುವ ವಿಜಯವಾಣಿ ಕಚೇರಿಗೆ ಭೇಟಿ ನೀಡಿ, ವರದಿಗಾರಿಕೆ, ಸುದ್ದಿ ಪರಿಷ್ಕರಣೆ, ಪುಟ ವಿನ್ಯಾಸ ಕಾರ್ಯ ವಿಧಾನ ತಿಳಿದುಕೊಂಡರು. ಬಳಿಕ ಹೊನಗಾದಲ್ಲಿರುವ ಪತ್ರಿಕೆಯ ‘ಪ್ರಿಂಟಿಂಗ್ ಪ್ರೆಸ್‌ಗೆ’ ತೆರಳಿ ಪತ್ರಿಕೆ ಮುದ್ರಣ ಕಾರ್ಯ ನೋಡಿ ಸಂತಸಪಟ್ಟರು.

ವಿವಿಧ ಕ್ಷೇತ್ರಗಳ ಸುದ್ದಿಗಳನ್ನು ಹೊತ್ತ ಪತ್ರಿಕೆಯನ್ನು ಜನರಿಗೆ ಚಹಾ ಕುಡಿಯುವ ಮುನ್ನವೇ ತಲುಪಿಸುವ ಪತ್ರಿಕಾಲಯದ ತಂಡದ ಕಾರ್ಯವೈಖರಿ ತಿಳಿದುಕೊಂಡು ಪುಳಕಿತರಾದರು. ‘ಕಾಲೇಜುಗಳಲ್ಲಿ ಇಡುವ ಪತ್ರಿಕೆಯನ್ನು ಸಾಮಾನ್ಯವಾಗಿ ಓದುತ್ತೇವೆ. ಆದರೆ, ಪತ್ರಿಕೆ ಸಿದ್ಧಪಡಿಸುವುದರ ಹಿಂದಿನ ಶ್ರಮ, ಸಿಬ್ಬಂದಿ ಕಾರ್ಯ ವೈಖರಿ ಅಗಾಧ. ಇಂದಿನ ತಂತ್ರಜ್ಞಾನ ಯುಗದಲ್ಲಿ ತಂತ್ರಜ್ಞಾನ ಬಳಸಿಕೊಂಡು ಗುಣಮಟ್ಟದ ಪತ್ರಿಕೆ ಹೊರತರುವಲ್ಲಿ ವಿಜಯವಾಣಿ ಮಾಡುತ್ತಿರುವ ಕಾರ್ಯ ಮಾದರಿಯಾಗಿದೆ. ಜೀವನದಲ್ಲಿ ಸಮಯ ಎಷ್ಟು ಮುಖ್ಯ ಎಂಬುವುದನ್ನೂ ವಿಆರ್‌ಎಲ್ ಮೀಡಿಯಾ ಪ್ರಿಂಟಿಂಗ್ ಪ್ರೆಸ್‌ಗೆ ಭೇಟಿ ನಂತರ ತಿಳಿಯಿತು’ ಎಂದು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.

ಸಂಕೇಶ್ವರ ಕುಟುಂಬದ ಕಾರ್ಯ ಸಮಾಜಕ್ಕೆ ಮಾದರಿ

ಕನ್ನಡ ಪತ್ರಿಕೋದ್ಯಮದಲ್ಲಿ ವಿಜಯವಾಣಿ ಮುಂಚೂಣಿಯಲ್ಲಿದೆ ಎನ್ನುವುದನ್ನು ಕೇಳಿದ್ದೇವು. ಆದರೆ, ಪತ್ರಿಕೆ ಕಾರ್ಯಾಲಯ, ಪ್ರಿಂಟಿಂಗ್ ಯೂನಿಟ್‌ಗೆ ಭೇಟಿ ನೀಡಿ ಅಲ್ಲಿಯ ಕಾರ್ಯ ವೈಖರಿ, ಶ್ರದ್ಧೆ, ಗುಣಮಟ್ಟದ ಕಾರ್ಯಗಳಿಗೆ ಪ್ರತಿಫಲವೆಂಬಂತೆ ವಿಜಯವಾಣಿ ಅಗ್ರಸ್ತಾನದಲ್ಲಿದೆ ಎಂದು ಗೊತ್ತಾಯಿತು. ವಿಆರ್‌ಎಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ.ವಿಜಯ ಸಂಕೇಶ್ವರ, ಡಾ.ಆನಂದ ಸಂಕೇಶ್ವರ ಅವರದ್ದು ಸಮಾಜಕ್ಕೆ ಮಾದರಿ ವ್ಯಕ್ತಿತ್ವ. ಅವರು ಕಟ್ಟಿ ಬೆಳೆಸಿರುವ ವಿಆರ್‌ಎಲ್ ಲಾಜಿಸ್ಟಿಕ್, ಸುರಕ್ಷತೆಗೆ ಹೆಸರಾದ ಬಸ್ ಸೇವೆ ಮತ್ತು ನಂಬರ್ 1 ದಿನಪತ್ರಿಕೆ ವಿಜಯವಾಣಿಯನ್ನು ನೋಡಿದಾಗಲೆಲ್ಲ ಅಭಿಮಾನ ಹೆಚ್ಚುತ್ತದೆ. ಕಾಲೇಜಿನ ಪರವಾಗಿ ಧನ್ಯವಾದಗಳು’ ಎಂದು ಶಿಕ್ಷಕರು ವಿದ್ಯಾರ್ಥಿಗಳು ತಿಳಿಸಿದರು.

ವಿದ್ಯಾರ್ಥಿ ದೆಸೆಯಲ್ಲೇ ವಿದ್ಯಾರ್ಥಿಗಳಿಗೆ ಪತ್ರಿಕಾಲಯದ ಕಾರ್ಯ ವೈಖರಿ ತಿಳಿಸಿಕೊಡುತ್ತಿರುವ ವಿಜಯವಾಣಿ ಪತ್ರಿಕೆಯ ಸಂಸ್ಥಾಪಕರಿಗೆ ಧನ್ಯವಾದ. ಒಂದು ಪತ್ರಿಕೆ ಸಿದ್ಧಪಡಿಸುವುದು ಸಾಮಾನ್ಯ ಸಂಗತಿ ಅಲ್ಲ ಎನ್ನುವುದು ವಿಜಯವಾಣಿ ಕಚೇರಿ ಹಾಗೂ ಪ್ರಿಂಟಿಂಗ್ ಯೂನಿಟ್‌ಗೆ ನಾವು ಭೇಟಿ ನೀಡಿದಾಗ ನಮ್ಮ ಅರಿವಿಗೆ ಬಂದಿದೆ. ಸುದ್ದಿ ಸಂಗ್ರಹ, ಸುದ್ದಿ ಸಂಪಾದನೆ, ಪುಟ ವಿನ್ಯಾಸ, ಪತ್ರಿಕೆಗಳ ಪ್ರಿಂಟಿಂಗ್ ತಂತ್ರಜ್ಞಾನ ನೋಡಿ ನಮಗೆ ಹೊಸ ಅನುಭವವಾಯಿತು. ಶಿವದೇವ ಹಿರೇಮಠ, ಉಪನ್ಯಾಸಕ, ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು, ಮೆಕ್ಯಾನಿಕಲ್ ವಿಭಾಗ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನಾನು ಪಾಠ ಮಾಡುತ್ತಿದ್ದೇನೆ. ಪ್ರಥಮ ಬಾರಿಗೆ ವಿಜಯವಾಣಿ ಪತ್ರಿಕೆ ಕಚೇರಿ ಹಾಗೂ ಮುದ್ರಣ ಮಾಧ್ಯಮ ವಿಭಾಗಕ್ಕೆ ವಿದ್ಯಾರ್ಥಿಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಿರುವ ವಿಆರ್‌ಎಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಅಭಿನಂದನೆ. ಸಿಎಂಡಿ ಡಾ. ವಿಜಯ ಸಂಕೇಶ್ವರ ಹಾಗೂ ಎಂಡಿ ಡಾ.ಅನಂದ ಸಂಕೇಶ್ವರ ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪರಿಕಲ್ಪನೆ ಅನುಸರಿಸುತ್ತಿರುವುದು ಸ್ತುತ್ಯಾರ್ಹ. ಸದಾಶಿವ ಹಾದಿಮನಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಬಸವಪ್ರಭು ಕೋರೆ ಕಾಲೇಜು ದಿನಪತ್ರಿಕೆಯ ಕಚೇರಿಯಲ್ಲಿ ಪತ್ರಿಕೆ ಸಿದ್ಧಗೊಳ್ಳುವ ಬಗೆ, ವಿವಿಧ ಆಯಾಮಗಳ ಕಾರ್ಯ ವಿಧಾನ, ಪತ್ರಿಕೆಯ ಮುದ್ರಣ ಕಾರ್ಯ ಹೇಗಿರುತ್ತದೆ ಎನ್ನುವುದನ್ನು ತಿಳಿಸಿಕೊಟ್ಟ ವಿಜಯವಾಣಿ ತಂಡಕ್ಕೆ ಅಭಿನಂದನೆ. ವಿಜಯವಾಣಿ ಕಚೇರಿಗೆ ಭೇಟಿ ನೀಡಿದ್ದು ಹೊಸ ಅನುಭವ ಸಿಕ್ಕಂತಾಗಿದೆ. ಸಿಬ್ಬಂದಿಯ ಶ್ರಮವೂ ಅವಿರತವಾಗಿದೆ. ಅನುಜಾ ಮೇತ್ರಿ, 6ನೇ ಸಮಿಸ್ಟರ್ ವಿದ್ಯಾರ್ಥಿ, ಬಸವಪ್ರಭು ಕೋರೆ ಕಾಲೇಜು ಚಿಕ್ಕೋಡಿ ವಿಜಯವಾಣಿ ದಿನಪತ್ರಿಕೆ ಕಚೇರಿ, ಪ್ರಿಂಟಿಂಗ್ ಪ್ರೆಸ್‌ಗೆ ಭೇಟಿ ನೀಡುವ ಮೂಲಕ ಹೊಸ ಕ್ಷೇತ್ರದ ಪರಿಚಯ ಮಾಡಿಕೊಂಡಂತಾಯಿತು. ಸಂಪಾದಕೀಯ, ಪ್ರಸಾರಾಂಗ, ಜಾಹೀರಾತು ಹೀಗೆ ವಿವಿಧ ವಿಭಾಗಗಳು ಸಮನ್ವತೆಯಿಂದ ಹೇಗೆ ಕೆಲಸ ಮಾಡುತ್ತೇವೆ ಎಂಬುವುದನ್ನು ತಿಳಿಸಿಕೊಟ್ಟಿರುವುದಕ್ಕೆ ಧನ್ಯವಾದಗಳು. ನಾಗರಾಜ ಸಾಕ್ರಿ, ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net