

ಹುಬ್ಬಳ್ಳಿ: ಸ್ವಂತದ್ದೊಂದು ಸೂರು ಮಾಡಿಕೊಳ್ಳಬೇಕು, ರಿಯಲ್ ಎಸ್ಟೇಟ್‌ನಲ್ಲಿ ಒಂದಿಷ್ಟು ಹೂಡಿಕೆ ಮಾಡಬೇಕು ಎನ್ನುವವರು ಬಹು ದಿನದಿಂದ ಕಾತರದಿಂದ ಕಾಯುತ್ತಿದ್ದ ‘ವಿಜಯವಾಣಿ ಪ್ರಾಪರ್ಟಿ ಎಕ್ಸ್‌ಪೋ’ ಬಂದೇ ಬಿಟ್ಟಿದೆ.
ಇಲ್ಲಿಯ ಹೊಸೂರ ರಾಯ್ಕರ ಮೈದಾನದಲ್ಲಿ ಭವ್ಯ ಹಾಗೂ ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆಯಲ್ಲಿ ರಿಯಲ್ ಎಸ್ಟೇಟ್ ಮತ್ತು ಇಂಟೀರಿಯರ್ಸ್ ಎಕ್ಸ್‌ಪೋವನ್ನು ಮೇ 3ರಿಂದ ಮೂರು ದಿನಗಳವರೆಗೆ ಆಯೋಜಿಸಲಾಗಿದೆ.
ಬಿಸಿಲು, ಮಳೆ ಯಾವುದರಿಂದಲೂ ಪ್ರಾಪರ್ಟಿ ಎಕ್ಸ್‌ಪೋ ವೀಕ್ಷಣೆಗೆ ತೊಂದರೆಯಾಗದಂತೆ ವೇದಿಕೆ ಸಿದ್ಧಪಡಿಸಲಾಗಿದೆ. ಒಂದೇ ಸೂರಿನಡಿ ಸುಮಾರು 40ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, 200ಕ್ಕೂ ಹೆಚ್ಚು ವಸತಿ ಯೋಜನೆಗಳು, ಅಪಾರ್ಟಮೆಂಟ್, ಾರ್ಮ್‌ಲ್ಯಾಂಡ್, ವಿಲ್ಲಾ ಮುಂತಾದ ಪ್ರಾಜೆಕ್ಟ್‌ಗಳು ಡಿಸ್‌ಪ್ಲೇ ಆಗಲಿವೆ. ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಅನುಮೋದಿತ ವಸತಿ ಯೋಜನೆಗಳು ಇಲ್ಲಿ ಪ್ರದರ್ಶನ ಕಾಣಲಿದ್ದು, ಗ್ರಾಹಕರಿಗೆ ಅತ್ಯಂತ ವಿಶ್ವಾಸಾರ್ಹ ವೇದಿಕೆ ಎನಿಸಲಿದೆ.
ಸ್ಕೈಟೌನ್ ಗ್ರುಪ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿರುವ ವಿಜಯವಾಣಿ ಪ್ರಾಪರ್ಟಿ ಎಕ್ಸ್‌ಪೋಕ್ಕೆ ಶ್ರೀಯಾ ಪ್ರಾಪರ್ಟಿಸ್, ಶ್ರೀ ದುರ್ಗಾ ಡೆವಲಪರ್ಸ್ ಆೃಂಡ್ ಪ್ರಮೋಟರ್ಸ್ ಅಸೋಸಿಯೇಟ್ ಸ್ಪಾನ್ಸರ್ ಆಗಿ, ಶಾಂಭವಿ, ರಾಟ್ಸನ್ ಗ್ರುಪ್, ಉಜ್ವಲ ಡೆವಲಪರ್ಸ್ ಆೃಂಡ್ ಬಿಲ್ಡರ್ಸ್ ಹಾಗೂ ಶ್ರೀದತ್ತ ಇನ್‌ರ್ಾಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯವರು ಕೋ-ಸ್ಪಾನ್ಸರ್ ಆಗಿ ಸಹಯೋಗ ನೀಡಿದ್ದಾರೆ. ಇದಲ್ಲದೆ ಅನೇಕ ಬಿಲ್ಡರ್ ಹಾಗೂ ಡೆವಲಪರ್ಸ್‌ಗಳು, ಸಿಮೆಂಟ್, ಕಬ್ಬಿಣ ಉತ್ಪಾದಕರು, ಡೀಲರ್‌ಗಳು, ಮನೆಗಳ ಇಂಟೀರಿಯರ್ಸ್ ಅಲಂಕಾರಿಕ ವಸ್ತುಗಳ ತಯಾರಕರು, ಬ್ಯಾಂಕ್, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಮಳಿಗೆಗಳು ಇಲ್ಲಿರಲಿವೆ.
ಈ ಎಲ್ಲ ಹಿನ್ನೆಲೆಯಲ್ಲಿ ಒಂದೇ ಸೂರಿನಡಿ ನಿಮ್ಮ ಕನಸಿನ ಮನೆ, ಸೈಟ್, ಅಪಾರ್ಟಮೆಂಟ್ ಹಾಗೂ ವಾಣಿಜ್ಯ ಮಳಿಗೆಗಳನ್ನು ಖರೀದಿಸುವ ಸುವರ್ಣಾವಕಾಶ ನಿಮ್ಮದಾಗಲಿದೆ. ಅಲ್ಲದೆ, ಆಸ್ತಿ ಖರೀದಿಗೆ ಸಂಬಂಧಿಸಿ ಸಮಗ್ರ ಮಾಹಿತಿಯೂ ಸಿಗಲಿದೆ. ಧಾರವಾಡ ಜಿಲ್ಲೆ ಮಾತ್ರವಲ್ಲ, ಅಕ್ಕಪಕ್ಕದ ಜಿಲ್ಲೆಗಳ ಅನೇಕ ಜನರು ಹುಬ್ಬಳ್ಳಿ- ಧಾರವಾಡದಲ್ಲಿ ಆಸ್ತಿ ಹೊಂದಬೇಕೆನ್ನುವ ಆಶಯದೊಂದಿಗೆ ಇಲ್ಲಿಗೆ ಬರಲು ಉತ್ಸಾಹ ತೋರುತ್ತಿದ್ದಾರೆ.
ಇನ್ನೊಂದು ವಾರದಲ್ಲಿ ಅಕ್ಷಯ ತೃತೀಯ ಸಂಭ್ರಮ ಎಲ್ಲೆಡೆ ಮನೆ ಮಾಡಲಿದೆ. ಈ ಸಂದರ್ಭದಲ್ಲಿ ಮನೆ, ಸೈಟ್ ಕೊಳ್ಳಬೇಕೆಂಬ ಇಚ್ಛೆ ಇರುವವರು ಇಲ್ಲಿಗೆ ಭೇಟಿ ನೀಡಿ ಈಗಲೇ ಬುಕ್ ಮಾಡಬಹುದು. ಪ್ರತಿಯೊಬ್ಬರಿಗೂ ಅವರದೇ ಆದ ಬಜೆಟ್‌ಗೆ ಹೊಂದುವಂತಹ ವಸತಿ ಯೋಜನೆಗಳು ನಿಮ್ಮ ಮುಂದೆ ಪ್ರದರ್ಶನಗೊಳ್ಳಲಿವೆ. ಹಾಗಾಗಿ ಬಡ, ಮಧ್ಯಮ ವರ್ಗದವರು ಮಾತ್ರವಲ್ಲ ಎಲ್ಲರೂ ಆಸ್ತಿ ಖರೀದಿ ಮಾಡಬಹುದು. ಆರ್ಥಿಕ ಸಹಕಾರ ನೀಡಲು ಬ್ಯಾಂಕ್‌ಗಳು ಮುಂದೆ ಬಂದಿವೆ. ಅಲ್ಲದೆ ಬಿಲ್ಡರ್, ಡೆವಲಪರ್‌ಗಳು ಕೂಡ ತಮ್ಮದೇ ಆದ ಕಂತಿನ ಅವಕಾಶಗಳನ್ನು ನೀಡಿ ಗ್ರಾಹಕ ಸ್ನೇಹಿ ವಾತಾವರಣ ನಿರ್ಮಿಸಿದ್ದಾರೆ. ಒಟ್ಟಾರೆ, ಆಸ್ತಿ ಖರೀದಿಸಬೇಕೆನ್ನುವವರಿಗೆ ಸಕಲ ಸೌಲಭ್ಯಗಳೊಂದಿಗೆ ಪ್ರಾಪರ್ಟಿ ಎಕ್ಸ್‌ಪೋ ಬಂದಿದ್ದು, ಒಂದೊಮ್ಮೆ ಭೇಟಿ ನೀಡಿ ವಸತಿ ಯೋಜನೆಗಳ ಮಾಹಿತಿ ಪಡೆಯಬಹುದಾಗಿದೆ.
ಬ್ಯಾಂಕ್ ಮಳಿಗೆ: ಯಾವುದೇ ಆಸ್ತಿ ಖರೀದಿಸಬೇಕಾದರೆ ದೊಡ್ಡ ಮೊತ್ತ ಬೇಕಾಗುತ್ತದೆ. ಅನೇಕ ಜನರಿಗೆ ಹಣ ಹೊಂದಿಸಲು ಕಷ್ಟವಾಗುತ್ತದೆ. ಗ್ರಾಹಕರ ಹಣಕಾಸಿನ ತೊಂದರೆ ನೀಗಿಸಲು ಬ್ಯಾಂಕ್‌ಗಳು ಸಹ ಪ್ರಾಪರ್ಟಿ ಎಕ್ಸ್‌ಪೋದಲ್ಲಿ ಮಳಿಗೆಗಳನ್ನು ತೆರೆಯುತ್ತಿವೆ. ಗ್ರಾಹಕರು ಬ್ಯಾಂಕ್‌ಗಳ ಮಳಿಗೆಗೆ ಭೇಟಿ ನೀಡಿದರೆ ಆಯಾ ಬ್ಯಾಂಕ್‌ಗಳಲ್ಲಿ ಲಭ್ಯವಿರುವ ಗೃಹಸಾಲ, ನಿವೇಶನ ಸಾಲ ಹೀಗೆ ಆರ್ಥಿಕ ನೆರವಿನ ಬಗ್ಗೆ ಮಾಹಿತಿ ನೀಡುತ್ತಾರೆ. ಇಂದಿನ ದಿನಗಳಲ್ಲಿ ಬ್ಯಾಂಕ್‌ಗಳು ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವುದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಿದೆ. ಇದರಿಂದ ತಮಗಿಷ್ಟವಾದ ಕಡೆ, ಉತ್ತಮ ಮನೆ ಅಥವಾ ನಿವೇಶನ ಖರೀದಿ ಮಾಡಬಹುದು.
ಸರ್ಕಾರಿ ಸಂಸ್ಥೆಗಳು: ಪ್ರಾಪರ್ಟಿ ಎಕ್ಸ್‌ಪೋದ ಇನ್ನೊಂದು ವಿಶೇಷ ಎಂದರೆ, ಸರ್ಕಾರಿ ಸಂಸ್ಥೆಗಳಾದ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಗಳು ಮಳಿಗೆ ತೆರೆಯುತ್ತಿವೆ. ಇದು ಎಕ್ಸ್‌ಪೋದ ಬಗೆಗಿನ ವಿಶ್ವಾಸ, ನಂಬಿಕೆ ಇಮ್ಮಡಿಗೊಳಿಸಿದೆ. ನಿವೇಶನ, ಮನೆ ಇತ್ಯಾದಿ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಕಾನೂನಾತ್ಮಕ ಮಾಹಿತಿ ಬೇಕಿದ್ದರೂ ಅಧಿಕಾರಿಗಳನ್ನು ಕೇಳಿ ತಿಳಿದುಕೊಳ್ಳಬಹುದು. ಸ್ಮಾರ್ಟ್ ಸಿಟಿ ಕಂಪನಿ ಅಧಿಕಾರಿಗಳು ಹುಬ್ಬಳ್ಳಿ ಧಾರವಾಡ ಸುಧಾರಣೆ ಹೇಗೆಲ್ಲ ಆಗುತ್ತಿದೆ ಎಂಬುದರ ನಕ್ಷೆಯನ್ನು ಪ್ರದರ್ಶಿಸಿ ಮಾಹಿತಿ ನೀಡಲಿದ್ದಾರೆ. ಹಾಗಾಗಿ, ಭವಿಷ್ಯದಲ್ಲಿ ಅವಳಿನಗರ ಹೇಗಿರಲಿದೆ, ಯಾವ ಭಾಗದಲ್ಲಿ ವಸತಿಗೆ ಉತ್ತಮ, ವಾಣಿಜ್ಯ ಮಳಿಗೆ ಎಲ್ಲಿ ಕೊಳ್ಳಬಹುದು ಎಂಬಿತ್ಯಾದಿ ವಿಷಯಗಳನ್ನು ತಿಳಿದುಕೊಳ್ಳಬಹುದು. ಜತೆಗೆ ಾರ್ಮ್‌ಲ್ಯಾಂಡ್, ವಿಲ್ಲಾ, ಅಪಾರ್ಟಮೆಂಟ್‌ನಲ್ಲಿ ಮನೆ ಕೊಳ್ಳುವವರು ಇಲ್ಲಿ ಸಮರ್ಪಕ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗಲಿದೆ.
ಸಂಪೂರ್ಣ ಹವಾನಿಯಂತ್ರಿತ ಟೆಂಟ್: ಸುಮಾರು 40 ಮಳಿಗೆಗಳಿರುವ ಬೃಹತ್ ಟೆಂಟ್ ನಿರ್ಮಿಸಲಾಗಿದ್ದು, ಇದಕ್ಕೆ ಸೆಂಟ್ರಲೈಜ್ಡ್ ಎಸಿ ವ್ಯವಸ್ಥೆ ನೀಡಲಾಗಿದೆ. ಹಾಗಾಗಿ ಹೊರಗಡೆ ಎಷ್ಟೇ ಬಿಸಿಲು, ಝಳ ಇದ್ದರೂ ಒಳಗಡೆ ಅದರ ಅನುಭವ ಆಗುವುದಿಲ್ಲ. ತಂಪು ವಾತಾವರಣದಲ್ಲಿ ಸಂಚರಿಸಿ ಮಳಿಗೆಗಳಲ್ಲಿ ವಸತಿ ಯೋಜನೆಗಳ ಪ್ರೊಜೆಕ್ಟ್ ವೀಕ್ಷಣೆ ಮಾಡಬಹುದು. ಕೆಲಹೊತ್ತು ಇಲ್ಲೇ ಕಳೆದು ಕನಸಿನ ಮನೆಯನ್ನು ನನಸಾಗಿಸಿಕೊಳ್ಳುವ ಯೋಜನೆ ರೂಪಿಸಬಹುದು. ಒಂದು ವೇಳೆ ಮಳೆ ಬಂದರೂ ಯಾವುದೇ ತೊಂದರೆ ಆಗುವುದಿಲ್ಲ. ನೆಲದ ಮೇಲೆ ಒಂದು ಅಡಿಯಷ್ಟು ಎತ್ತರದ ಕಟ್ಟೆ ನಿರ್ಮಿಸಿ ಅದರ ಮೇಲೆ ನೆಲಹಾಸು ಹಾಕಲಾಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗುವುದರಿಂದ ಮಳೆಯಿಂದಲೂ ಸಮಸ್ಯೆ ಆಗುವುದಿಲ್ಲ.
ಆರಾಮವಾಗಿ ಕುಳಿತು ಚರ್ಚಿಸಿ: ಪ್ರತಿಯೊಂದು ಮಳಿಗೆಯಲ್ಲಿ ಆಸನ, ಕುಡಿಯುವ ನೀರು ಸೇರಿ ಸಕಲ ವ್ಯವಸ್ಥೆ ಮಾಡಲಾಗಿರುತ್ತದೆ. ಹಾಗಾಗಿ ಗ್ರಾಹಕರು ಆರಾಮವಾಗಿ ಕುಳಿತು ಬಿಲ್ಡರ್, ಡೆವಲಪರ್‌ಗಳ ಪ್ರಾಜೆಕ್ಟ್ ನೋಡಿಕೊಂಡು ಅವರೊಂದಿಗೆ ಚರ್ಚಿಸಿ ಆಸ್ತಿ ಖರೀದಿಯ ತೀರ್ಮಾನ ಮಾಡಬಹುದಾಗಿದೆ.