

ವಿದ್ಯಾರ್ಥಿಗಳ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಎರಡು ಪ್ರಮುಖ ಘಟ್ಟಗಳು. ಇವೇ ಅವರ ಭವಿಷ್ಯದ ಬದುಕನ್ನು ನಿರ್ಧರಿಸುವ ತಿರುವುಗಳು. ಹಾಗಾಗಿ ಈ ಹಂತದಲ್ಲಿ ಮಕ್ಕಳು ಸಹಜವಾಗಿಯೇ ಗೊಂದಲ, ಕಳವಳ, ಒತ್ತಡ ಅನುಭವಿಸುತ್ತಾರೆ. ಪಾಲಕರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳು ಮತ್ತು ಪಾಲಕರ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಸಚಿವರಿಂದಲೇ ಸಮಾಧಾನಕರ ಉತ್ತರ ಕೊಡಿಸಲು ವಿಜಯವಾಣಿ-ದಿಗ್ವಿಜಯ 247 ನ್ಯೂಸ್ ‘ಫೋನ್-ಇನ್’ ಕಾರ್ಯಕ್ರಮ ಆಯೋಜಿಸಿದ್ದವು. ನೂರಾರು ಮಕ್ಕಳು, ಪಾಲಕರು, ಶಿಕ್ಷಕರು ಕರೆ ಮಾಡಿ ತಮ್ಮಮನಸ್ಸಿನಲ್ಲಿದ್ದ ಸಂಶಯಗಳನ್ನು ನಿವಾರಿಸಿ ಕೊಂಡರು.
ನಮ್ಮ ಊರಿನಲ್ಲಿ ಶಿಕ್ಷಕರು ಶಾಲೆಗಳಿಗೆ ಸರಿಯಾಗಿ ಬರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
| ನಾಗರಾಜ್ ಕೋಲಾರ
8, 9 ಮತ್ತು 10ನೇ ತರಗತಿಗೆ ಪ್ರತ್ಯೇಕವಾಗಿ ಆಂತರಿಕ ಮೌಲ್ಯಾಂಕ ನಿಗದಿ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ
| ಶಾಲಿನಿ ಬೆಂಗಳೂರು
8ನೇ ತರಗತಿಯಲ್ಲಿ ಮೊದಲ ಮತ್ತು 2ನೇ ಸೆಮಿಸ್ಟರ್ನಲ್ಲಿ ಪ್ರಶ್ನೆಗಳನ್ನು ಬೇರೆ ಬೇರೆಯಾಗಿ ಕೇಳಲಾಗುತ್ತದೆ. ಆದರೆ, 9 ಮತ್ತು 10ನೇ
| ಕೀರ್ತನಾ ಬೆಂಗಳೂರು
ನನ್ನ ಮಗ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಮ್ಮ ಊರಿನಲ್ಲಿರುವ ಶಾಲೆಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಬಹುದೇ?
| ರಘುನಾಥ್ ಮೈಸೂರು
ನನ್ನ ಮಗ ದ್ವಿತೀಯ ಪಿಯುಸಿಯಲ್ಲಿ ಮತ್ತು ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದಾರೆ. ಮಗ ವೈದ್ಯನಾಗಬೇಕು ಎಂಬ ಆಸೆ ಹೊಂದಿದ್ದಾನೆ. ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತಿಲ್ಲ.
| ಓರ್ವ ಪಾಲಕರು ಕೊಪ್ಪಳ
ಕೆಲ ಪರೀಕ್ಷಾ ಕೊಠಡಿಗಳಲ್ಲಿ ಗಾಳಿ, ಬೆಳಕು ಸರಿಯಾಗಿ ಬಾರದೇ ಇರುವುದರಿಂದ ಮಕ್ಕಳಿಗೆ ಸಮಸ್ಯೆ ಯಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಪರೀಕ್ಷೆ ಎದುರಿಸುವುದು ಹೇಗೆ ?
| ರವಿಶಂಕರ್ ಉಡುಪಿ
ಕೆಲವೇ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆ ಬರುತ್ತಿದ್ದು, ಓದಿನ ಕಡೆ ಗಮನ ಕೇಂದ್ರೀಕರಿಸಲು ಏನು ಮಾಡಬೇಕೆಂದು ಸಲಹೆ ನೀಡಬಹುದೇ?
| ಪ್ರಜ್ವಲ್ ಪಟೇಲ್ ಚಂದರಗಿ
ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಮಾತ್ರ ಉತ್ತಮ ಕಾಲೇಜುಗಳಲ್ಲಿ ಪ್ರವೇಶ ಸಿಗುತ್ತದೆ. ಸಾಧಾರಣ ಅಂಕ ಗಳಿಸಿದ
| ವರ್ಷಾ ಬೆಂಗಳೂರು
ಪರೀಕ್ಷಾ ವೇಳಾಪಟ್ಟಿಯಲ್ಲಿ ಕೆಲವು ವಿಷಯಗಳ ಪರೀಕ್ಷೆ ಬಳಿಕ ಇನ್ನೊಂದು ಪರೀಕ್ಷೆಗೆ ಸಾಕಷ್ಟು ಸಮಯ ಇರುವುದರಿಂದ ಓದಲು ಸಮಯ
| ಅರ್ಪಿತಾ ಬೆಂಗಳೂರು
ಎಸ್ಸೆಸ್ಸೆಲ್ಸಿಯಲ್ಲಿ ಶೇ. 65 ಅಂಕಗಳನ್ನು ಪಡೆದಿದ್ದೇನೆ. ದ್ವಿತೀಯ ಪಿಯುಸಿಯಲ್ಲಿ ಶೇ. 95 ಅಂಕ ಗಳಿಸಬೇಕು ಎಂಬ ಗುರಿ ಹೊಂದಿದ್ದೇನೆ. ಇದಕ್ಕೆ ನಿಮ್ಮ ಸಲಹೆಗಳೇನು?
| ಉಷಾ ಕಾಕಂಬಿ
ನನ್ನ ಮಗಳು ಪ್ರಥಮ ಪಿಯುಸಿ ಕಾಮರ್ಸ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಅವಳಿಗೆ ವಿಜ್ಞಾನ ವಿಷಯದಲ್ಲಿ ಕಲಿಯಬೇಕೆಂದು ಆಸಕ್ತಿ ಉಂಟಾಗಿದೆ. ದ್ವಿತೀಯ ಪಿಯುಸಿಗೆ ವಿಜ್ಞಾನ ವಿಷಯ ತೆಗೆದುಕೊಳ್ಳಲು ಅವಕಾಶವಿದೆಯೇ?
| ಪಲ್ಲವಿ ದೇವನಹಳ್ಳಿ
ನಮ್ಮ ಶಾಲೆಗೆ ವರ್ಷದಲ್ಲಿ ಮೂರ್ನಾಲ್ಕು ಹೊಸ ಶಿಕ್ಷಕರು ವರ್ಗಾವಣೆಯಾಗಿ ಬರುತ್ತಾರೆ. ಒಬ್ಬ ಶಿಕ್ಷಕರು ಕಲಿಸುವ ರೀತಿಯ ಹಾಗೆ ಇನ್ನೊಬ್ಬ
| ಪವಿತ್ರಾ ಬೆಂಗಳೂರು
10ನೇ ತರಗತಿ ಪ್ರಶ್ನೆ ಪತ್ರಿಕೆಯ ಪ್ಯಾಟರ್ನ್ ಬದಲಾಗಿದೆ. ಅದರಿಂದ ವಿದ್ಯಾರ್ಥಿಗಳಿಗೆ ಗೊಂದಲವುಂಟಾಗು ವುದಿಲ್ಲವೆ?
| ಮಂದಾರ ಬೆಂಗಳೂರು
ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ನೇರವಾಗಿ ಕೇಳದೆ ಟ್ವಿಸ್ಟ್ ಮಾಡಿ ವಿಭಿನ್ನ ರೀತಿಯಲ್ಲಿ ಕೇಳುತ್ತಾರೆ. ಅದರಿಂದ ಪ್ರಶ್ನೆಗಳೇ ಅರ್ಥವಾಗದಂತಾಗಿ
| ಅರ್ಪಿತಾ ಬೆಂಗಳೂರು
ಪದವಿ ಪೂರ್ವದ ಬೇರೆ ವಿಷಯಗಳ ಪ್ರಶ್ನೆಪತ್ರಿಕೆಯಲ್ಲಿರುವಂತೆ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಅಂಕದ ಪ್ರಶ್ನೆಗಳನ್ನು ಯಾಕೆ ಕೇಳುತ್ತಿಲ್ಲ?
ಶಿಕ್ಷಕರು ಪಠ್ಯದಲ್ಲಿನ ಕೆಲವೊಂದು ವಿಷಯ ಮಾತ್ರ ಪ್ರಮುಖ ಎಂದು ಹೇಳುತ್ತಿದ್ದಾರೆ. ಬೇರೆಯದನ್ನು ಓದುವುದು ಅನಗತ್ಯ ಎನ್ನುತ್ತಿದ್ದಾರೆ.
| ದೇವಿಕಾ ಬೆಂಗಳೂರು
ನಾನು ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದು, ಶಿಕ್ಷಕರು ಕೊಡುವ ನೋಟ್ಸ್ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ... ಏನು ಮಾಡಲಿ?
| ನಟರಾಜ್ ರಾಯಚೂರು
ಪರೀಕ್ಷೆ ಎನ್ನುವುದು ಶಿಕ್ಷೆ ರೀತಿ ಆಗ್ತಿದೆ. ಹಿಂದೆಲ್ಲ ಪರೀಕ್ಷೆಯಲ್ಲಿ ಯಾವ ಪಠ್ಯದಲ್ಲಿನ ಪ್ರಶ್ನೆಗಳು ಬರುತ್ತವೆ ಎಂಬುದನ್ನು ತಿಳಿಸಲು ನೀಲಿನಕ್ಷೆ
| ಐಶ್ವರ್ಯಾ ಬೆಂಗಳೂರು
ನನ್ನ ಮಗಳಿಗೆ ಕಲಿಕೆಯಲ್ಲಿ ಆಸಕ್ತಿ ಇಲ್ಲ. ಸರಿಯಾಗಿ ವ್ಯಾಸಂಗ ಮಾಡುತ್ತಿಲ್ಲ. ನಾನು ಶಿಕ್ಷಕಿಯಾದರೂ ನನ್ನ ಮಗಳಿಗೆ ಸೂಕ್ತ ರೀತಿಯಲ್ಲಿ ಕಲಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವೇನಾದರೂ ತಿಳಿಸಬಹುದೇ ?
| ಅನ್ನಪೂರ್ಣ ಅಂಗಡಿ ಶಿಕ್ಷಕಿ
ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬುದು ತಿಳಿಯುತ್ತಿಲ್ಲ. ಪರೀಕ್ಷಾ ಭಯ ಹೋಗಲಾಡಿಸಲು ನಿಮ್ಮ ಸಲಹೆಗಳೇನು ?
| ವಿನೋದ್ ರೆಡ್ಡಿ ಬೆಳಗಾವಿ
ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದೆ ?
| ಕವಿತಾ ಹಿರೇಮಠ್ ಧಾರವಾಡ