ವಿಜಯವಾಣಿ ಫೋನ್ ಇನ್ ಕಾರ್ಯಕ್ರಮ

vijayavani-logo
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಐವಿಎಫ್ ದಿನಾಚರಣೆ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿಯಿಂದ ನಗರದ ಸರ್ವೋದಯ ಸಂತಾನ ಸಾಫಲ್ಯ ಕೇಂದ್ರದ ತಜ್ಞ ವೈದ್ಯರೊಂದಿಗೆ ಜು. 25ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸರ್ವೋದಯ ಸಂತಾನ ಸಾಫಲ್ಯ ಕೇಂದ್ರದ ಪ್ರಸೂತಿ, ಸ್ತಿçÃರೋಗ ಮತ್ತು ಐವಿಎಫ್ ತಜ್ಞರಾದ ಡಾ. ಗೀತಾ ಭರತ್ (ಉತ್ತೂರ) ಹಾಗೂ ಪರಿಣಿತ ಭ್ರೂಣಶಾಸ್ತçಜ್ಞರಾದ ಡಾ. ಗಾಯತ್ರಿ ಅ. ಉದಗಟ್ಟಿ (ಉತ್ತೂರ) ಫೋನ್ ಇನ್‌ನಲ್ಲಿ ಪಾಲ್ಗೊಂಡು ಕೇಳುಗರ ಪ್ರಶ್ನೆಗಳಿಗೆ ಮಾರ್ಗದರ್ಶನ ನೀಡುವರು.
ಪ್ರಣಾಳಶಿಶು (ಐವಿಎಫ್) ಚಿಕಿತ್ಸೆ ಯಾರಿಗೆ ಮತ್ತು ಏಕೆ? ಐವಿಎಫ್ ಚಿಕಿತ್ಸೆಯ ಬಗೆಗಿನ ತಪ್ಪು ಕಲ್ಪನೆಗಳು ಮತ್ತು ಸತ್ಯಾಂಶ, ಐವಿಎಫ್ ಯಶಸ್ಸಿನ ಪ್ರಮಾಣ ಹೆಚ್ಚಿಸುವುದು, ಬಾಡಿಗೆ ತಾಯ್ತನ ಯಾರಿಗೆ ಮತ್ತು ಹೇಗೆ? ಫಲವತ್ತತೆ (ಫರ್ಟಿಲಿಟಿ) ಸಂರಕ್ಷಣೆಯ ಅಗತ್ಯತೆಯ ಕುರಿತು ತಜ್ಞ ವೈದ್ಯರು ಸಲಹೆ ಮತ್ತು ಮಾರ್ಗದರ್ಶನ ನೀಡುವರು.
ಸಂತಾನಕ್ಕೆ ಹಂಬಲಿಸುತ್ತಿರುವ ದಂಪತಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳಲು ಮೊ: 6361351318, 6362086349, 9972074131ಗೆ ಕರೆ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net