ವಿಜಯವಾಣಿ- ದಿಗ್ವಿಜಯದಿಂದ ಪದಬಂಧ ಸ್ಪರ್ಧೆ

web (2)
Published on

ಧಾರವಾಡ: ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಭಾಷಾ ಪ್ರೌಢಿಮೆ ವೃದ್ಧಿಯಾಗುತ್ತದೆ ಎಂದು ಎಂ.ಎನ್. ಪಾಟೀಲ ಎಜುಕೇಶನ್ ೌಂಡೇಶನ್‌ನ ಸ್ವಾಮಿ ವಿವೇಕಾನಂದ ಪಿ.ಯು. ಕಾಲೇಜಿನ ಆಡಳಿತಾಧಿಕಾರಿ ಕಾರ್ತಿಕ್ ಪಾಟೀಲ ಹೇಳಿದರು.
ಸ್ವಾತಂತ್ರೊೃೀತ್ಸವ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ಸಹಯೋಗದಲ್ಲಿ ನಗರದ ಎಂ.ಎನ್. ಪಾಟೀಲ ಎಜುಕೇಶನ್ ೌಂಡೇಶನ್‌ನ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಸಹಯೋಗದೊಂದಿಗೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಪದಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಶಿವಶಂಕರ ರಾವ್ ಮಾತನಾಡಿ, ಸೋಲು- ಗೆಲುವಿನ ಲೆಕ್ಕಾಚಾರ ಹಾಕದೆ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ವಿಜಯವಾಣಿಯು ನಿತ್ಯನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಮನೆ ಮಾತಾಗಿದೆ. ವಿದ್ಯಾರ್ಥಿಗಳಲ್ಲಿ ಸ್ವಾತಂತ್ರೊೃೀತ್ಸವದ ಕುರಿತು ಮಾಹಿತಿ ನೀಡುವ ಪದಬಂಧ ಸ್ಪರ್ಧೆ ಆಯೋಜಿಸಿದ್ದು ಶ್ಲಾಘನೀಯ ಎಂದರು.
ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಆರತಿ ಎಂ. ಮಟ್ಯಾಳ, ಕಿರಣ್ಮಯಿ ಎಸ್.ಜಿ., ಸ್ವಾತಿ ಮೆಟ್ಟಿನ, ಓಂಕಾರ ಜಿ. ಪಾಟೀಲ ಹಾಗೂ ಜೆಎಸ್‌ಎಸ್ ಆರ್.ಎಸ್. ಹುಕ್ಕೇರಿಕರ ಕಾಲೇಜಿನ ಅಂಕಿತಾ ವೀರೇಂದ್ರ, ಭಾಗ್ಯಶ್ರೀ ಗಾಮಾ ಬಹುಮಾನ ಪಡೆದರು.
ವಿಜೇತ ವಿದ್ಯಾರ್ಥಿಗಳಿಗೆ ತಲಾ 1,000 ರೂ. ನಗದು ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.
ವಿಜಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರ ಮಂಜುನಾಥ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪ ಪ್ರಾಚಾರ್ಯೆ ನೇತ್ರಾವತಿ ಗಾಳಿಮಠ, ಜಾಹೀರಾತು ವಿಭಾಗದ ಉಪ ವ್ಯವಸ್ಥಾಪಕ ಶಿವಕುಮಾರ ಕೆರೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net