

ಬೆಂಗಳೂರು: ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಿಜಯವಾಣಿ ಆಯೋಜಿಸಿದ್ದ ‘ವಿಜಯೋತ್ಸವ ಶಾಪಿಂಗ್ ಉತ್ಸವ 2024’ ಹಾಗೂ ‘ವಿಜಯವಾಣಿ ಓದಿ ಬಹುಮಾನ ಗೆಲ್ಲಿ’ ಸ್ಕೀಂನ ಬೆಂಗಳೂರು ಆವೃತ್ತಿಯ ಅದೃಷ್ಟಶಾಲಿಗಳನ್ನು ಬುಧವಾರ ಆಯ್ಕೆ ಮಾಡಲಾಯಿತು. ವಿಜಯವಾಣಿ ಕೇಂದ್ರ ಕಚೇರಿಯಲ್ಲಿ ನಡೆದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಕೆಎಂಎಫ್ ಎಂಡಿ ಬಿ.ಶಿವಸ್ವಾಮಿ ಹಾಗೂ ನಾಯಕನಟ ಪ್ರಮೋದ್ ಪಂಜು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದರು. ಅ.3 ರಿಂದ ನ.16ರವರೆಗೆ ಒಟ್ಟು 45 ದಿನಗಳ ಕಾಲ ನಡೆದ ಶಾಪಿಂಗ್ ಉತ್ಸವವು ವಿಜಯವಾಣಿಯ 10 ಆವೃತ್ತಿಯ ಓದುಗರು ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ರಾಜ್ಯಾದ್ಯಂತ 535 ಪ್ರಸಿದ್ಧ ಮಳಿಗೆಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು. ಕನಿಷ್ಟ 2 ಸಾವಿರ ರೂಪಾಯಿ ಮೌಲ್ಯದ ಖರೀದಿಗೆ ಒಂದರಂತೆ ಗ್ರಾಹಕರಿಗೆ ಕೂಪನ್ ನೀಡಲಾಗಿತ್ತು. ಬೆಂಗಳೂರು ಆವೃತ್ತಿಯ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಮಳಿಗೆಗಳು ಪಾಲ್ಗೊಂಡಿದ್ದು ಒಟ್ಟು 2 ಲಕ್ಷಕ್ಕಿಂತ ಹೆಚ್ಚಿನ ಕೂಪನ್ಗಳು ಸಂಗ್ರಹವಾಗಿದ್ದವು. ಈ ಪೈಕಿ 750 ಬಹುಮಾನಗಳನ್ನು ನೀಡಲಾಗಿದೆ.
ವಿಜಯವಾಣಿ ವಿಜಯೋತ್ಸವ ಶಾಪಿಂಗ್ ಉತ್ಸವ 2024ರಲ್ಲಿ ರಾಜ್ಯಾದ್ಯಂತ ಒಟ್ಟು 2500 ಬಹುಮಾನಗಳು ಓದುಗರಿಗೆ ನೀಡಲಾಗಿದೆ. ಒಟ್ಟು 7 ಕಾರು, 10 ಬೈಕು, 10 ರೆಫ್ರಿಜಿರೇಟರ್, 10 ವಾಷಿಂಗ್ ಮೆಷಿನ್, 10 ಎಲ್ಇಡಿ ಟಿವಿ, 10 ಸ್ೇ ಲಾಕರ್ ಮತ್ತಿತರ ಗೃಹೋಪಯೋಗಿ ವಸ್ತುಗಳು ಸೇರಿವೆ. ಬೆಂಗಳೂರು ಆವೃತ್ತಿಯ ಓದುಗರಿಗೆ ಬಂಪರ್ ಬಹುಮಾನವಾಗಿ ಒಂದು ಕಾರು, ಒಂದು ಬೈಕು , ಒಂದು 32 ಇಂಚು ಎಲ್ಇಡಿ ಟಿವಿ, ಒಂದು ರೆಫ್ರಿಜಿರೇಟರ್, ಒಂದು ವಾಷಿಂಗ್ ಮೆಷಿನ್, ಒಂದು ಸೇಫ್ ಲಾಕರ್, ಎರಡು ವೆಟ್ ಗ್ರೈಂಡರ್, ಎರಡು ಟ್ರಾಲಿ ಬ್ಯಾಗ್ ಇನ್ನಿತರೆ 700ಕ್ಕೂ ಹೆಚ್ಚಿನ ಗೃಹಪಯೋಗಿ ವಸ್ತುಗಳು ಬಹುಮಾನವಾಗಿ ಓದುಗರಿಗೆ ದೊರಕಿವೆ.