

ಮೈಸೂರು:‘ವಿಜಯವಾಣಿ’ಯಿಂದ ಆಯೋಜಿಸಿರುವ ಎಜುಕೇಷನ್ ಎಕ್ಸ್‌ಪೋ ವಿದ್ಯಾರ್ಥಿಗಳು, ಪಾಲಕರಿಗೆ ಮುಂದಿನ ಶಿಕ್ಷಣದ ಬಗ್ಗೆ ಮಾಹಿತಿ ಪಡೆಯಲು ಉತ್ತಮ ವೇದಿಕೆಯಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಂಜರಾಜ ಬಹದ್ದೂರ್ ಛತ್ರದಲ್ಲಿ ವಿಜಯವಾಣಿಯಿಂದ ಆಯೋಜಿಸಿದ್ದ ಎಜುಕೇಷನ್ ಎಕ್ಸ್‌ಪೋದ ಸಮಾರೋಪದಲ್ಲಿ ಭಾನುವಾರ ಶಿಕ್ಷಣ ಸಂಸ್ಥೆಗಳಿಗೆ ನೆನಪಿನ ಕಾಣಿಕೆ ನೀಡಿದ ಬಳಿಕ ಅವರು ಮಾತನಾಡಿದರು.
ಆರಂಭದಿಂದಲೂ ವಿಜಯವಾಣಿ ಸುದ್ದಿ ನೀಡುವ ಜತೆಗೆ ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಸಿಕೊಂಡು ಬರುತ್ತಿದೆ. ಕಾಲೇಜು, ಕೋರ್ಸ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಆಯೋಜಿಸಿಕೊಂಡು ಬರುತ್ತಿರುವ ಎಜುಕೇಷನ್ ಎಕ್ಸ್‌ಪೋ ವಿದ್ಯಾರ್ಥಿಗಳು, ಪಾಲಕರಿಗೆ ಉಪಯುಕ್ತವಾಗಿದೆ. ಅಲ್ಲದೇ ಶಿಕ್ಷಣ ಸಂಸ್ಥೆಗಳಿಗೂ ಇದೊಂದು ಉತ್ತಮ ಅವಕಾಶ, ವೇದಿಕೆಯಾಗಿದೆ ಎಂದು ಹೇಳಿದರು.
ಹಾಸನದ ರಾಜೀವ್ ಗ್ರೂಫ್ ಆಫ್ ಇನ್ಸಿಟ್ಯೂಟ್‌ನ ಡಾ.ನಿತೀಶ್ ಮಾತನಾಡಿ, ನಮ್ಮ ಸಂಸ್ಥೆ ಆರಂಭದಿಂದ ಹಾಸನ ಜಿಲ್ಲೆ ಬಿಟ್ಟು ಹೊರಗೆ ಹೋಗಿರಲಿಲ್ಲ. ಆದರೆ ಈ ಬಾರಿ ವಿಜಯವಾಣಿ ಆಯೋಜಿಸಿದ್ದ ಎಜುಕೇಷನ್ ಎಕ್ಸೋ ಮೂಲಕ ಮೈಸೂರಿನವರಿಗೆ ನಮ್ಮ ಸಂಸ್ಥೆಯ ಪರಿಚಯವಾಗಿದೆ. ಇಂತಹ ವೇದಿಕೆ ಕಲ್ಪಿಸಿಕೊಟ್ಟ ವಿಜಯವಾಣಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ವಿಜಯವಾಣಿ ಮೈಸೂರು ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ದೀಪಕ್ ಘಾಟ್ಕೆ ಇತರರು ಇದ್ದರು.
ಭಾಗವಹಿಸಿದ್ದ ಸಂಸ್ಥೆಗಳು
ರಾಜೀವ್ ಗ್ರೂಪ್ ಸಂಸ್ಥೆ ಮುಖ್ಯ ಪ್ರಾಯೋಜಕತ್ವ, ಆ್ಯನಿಫ್ರೇಮ್ಸ್, ಗಿತಂ ವಿಶ್ವ ವಿವಿದ್ಯಾಲಯ, ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಎನ್‌ಐಇ, ತುಮಕೂರಿನ ಎಸ್‌ಐಟಿ ಸಹ ಪ್ರಾಯೋಜಕತ್ವ, ಶ್ರೀದೇವಿ ಸಂಸ್ಥೆ, ಮೈಸೂರಿನ ವಿದ್ಯಾವರ್ಧಕ, ಎಂಆರ್‌ಐಟಿ, ಕಾವೇರಿ ಸಂಸ್ಥೆ, ಎಂಐಟಿ, ಎಂಸಿಇ ಪ್ಲಾಟಿನಂ, ಜೆಎಸ್‌ಎಸ್ ಸೈನ್ಸ್ ಅಂಡ್ ಟೆಕ್ನಾಲಾಜಿ, ತುಮಕೂರಿನ ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಭವಿಷ್ಯ ಅಕಾಡೆಮಿ, ಆಕಾಶ್, ಅಮೃತ ಮಹಾಜನ, ಸಿಐಟಿ, ಪಿಇಎಸ್, ಆಚಾರ್ಯ, ನೇತ್ರ ಜ್ಯೋತಿ, ಕರ್ನಾಟಕ ಮುಕ್ತ ವಿವಿ, ಎಸ್‌ಡಿಎಂ, ಅಮಿಟಿ ವಿವಿ, ಸಂಗೀತ ವಿವಿಯ ಗೋಲ್ಡ್ ವಿಭಾಗದಲ್ಲಿ ಭಾಗವಹಿಸಿದ್ದವು.