

ಚನ್ನಮ್ಮನ ಕಿತ್ತೂರು: ಇಲ್ಲಿನ ತಾಪಂನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಸರ್ಕಾರಿ ಜಾಗದ ಭೂ ಬಾಡಿಗೆ ಪಡೆದು ದುರ್ಬಳಕೆ ಮಾಡುತ್ತಿರುವವರ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿ ಅಕ್ರಮ ಸಾಬೀತಾದ್ರೂ ಕ್ರಮ ಏಕಿಲ್ಲ? ಶೀರ್ಷಿಕೆಯಡಿ ಇತ್ತೀಚೆಗೆ ಕನ್ನಡದ ನಂ. ದಿನಪತ್ರಿಕೆ ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ಸುದ್ದಿ ಪ್ರತಿಧ್ವನಿಸಿತು.
ಶಾಸಕ ಬಾಬಾಸಾಹೇಬ ಪಾಟೀಲ ಅವರು ವಿಜಯವಾಣಿ ಪ್ರಕಟಿಸಿದ್ದ ಭೂ ಬಾಡಿಗೆ ಅಕ್ರಮಗಳ ವಿರುದ್ಧ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಮಧ್ಯೆ ತಾಪಂ ಇಒ ಹಾಗೂ ಪಪಂ ಮುಖ್ಯಾಧಿಕಾರಿ ನಡುವೆ ಕೆಸರೆರಚಾಟ ಆರಂಭಗೊಂಡಾಗ ಶಾಸಕರು ಅ-ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಿಜಯವಾಣಿ ಜತೆಗೆ ಮಾತನಾಡಿದ ಅವರು, ಈ ಪ್ರಕರಣದ ಕುರಿತು ಈಗಾಗಲೇ ತಾಪಂನಿಂದ ದಾಖಲೆಗಳನ್ನು ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. ಮುಂಬರುವ ಪಪಂ ಸಭೆಯಲ್ಲಿ ದಾಖಲೆ ಪರಿಶೀಲಿಸಿ ಕ್ರಮ ಕೆಗೊಳ್ಳಲು ತಿಳಿಸಲಾಗುವುದು. ಅಕ್ರಮ ಸಾಬೀತಾದರೆ ಮುಲಾಜಿಲ್ಲದೆ ಕ್ರಮ ಕೆಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ವಿಜಯವಾಣಿ ಪತ್ರಿಕೆ ಕಾರ್ಯವನ್ನೂ ಶ್ಲಾಘಿಸಿದರು.
ಜ.29ರಂದು ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ಡಿಪೋ ಕಾಮಗಾರಿ ಪೂರ್ಣ ಯಾವಾಗ? ಸುದ್ದಿಯೂ ಗಮನ ಸೆಳೆಯಿತು. ಸಾರಿಗೆ ಡಿಪೋ ಶ್ರೀದಲ್ಲಿಯೇ ಪ್ರಾರಂಭಿಸಲು ಹಾಗೂ ಸಣ್ಣ ಪುಟ್ಟ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು. ಕೆಲ ಅಂಗನವಾಡಿ ಕಾಮಗಾರಿಗಳು ಮುಗಿಯದೆ ಸ್ಥಗಿತಗೊಂಡಿದ್ದು, ಶ್ರೀ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಎಸ್ಎಸ್ಎಲ್ಸಿ ಮಕ್ಕಳ ಲಿತಾಂಶ ಸುಧಾರಣೆಗೆ ಶಿಣ ಇಲಾಖೆ ಸಜ್ಜಾಗಬೇಕು. ರಣಗಟ್ಟಿ ಕೆರೆ ಅಭಿವದ್ಧಿ ಕಾಮಗಾರಿ ಬೇಗ ಆರಂಭಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಂಗವಿಕಲರಿಗೆ ದ್ವಿಚಕ್ರವಾಹನ ವಿತರಿಸಲಾಯಿತು. ಡಿಜಿಟಲ್ ಗ್ರಂಥಾಲಯಗಳಿಗೆ ಕಂಪ್ಯೂಟರ್ ವಿತರಿಸಲಾಯಿತು. ತಾಪಂ ಓದುವ ಮನೆ ಕೊಠಡಿ ಉದ್ಘಾಟಿಸಲಾಯಿತು. ರಾಷ್ಟ್ರಮಟ್ಟದಲ್ಲಿ ತಾಲೂಕಿನ ವಿದ್ಯಾರ್ಥಿನಿಯರಾದ ನಾಗರತ್ನ ಕೊಳ್ಳಿ ಇನ್ಸ್ಪಾಯರ್ ಅವಾರ್ಡ್, ವರ್ಷಿಣಿ ಅಂಗಡಿ ಸ್ಕಿಪ್ಪಿಂಗ್ನಲ್ಲಿ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.
ತಹಸೀಲ್ದಾರ್ ರವೀಂದ್ರ ಹಾದಿಮನಿ, ತಾಪಂ ಇಒ ಕಿರಣ ೂರ್ಪಡೆ, ರಾಜೀವ ಕೂಲೇರ, ಎಡಿ ಸುರೇಶ ನಾಗೋಜಿ, ಪಪಂ ಮುಖ್ಯಾಧಿಕಾರಿ ಎಂ.ವಿ. ಹಿರೇಮಠ, ಪಿಡಬ್ಲೂಡಿ ಎಇಇ ಸಂಜೀವ ಮಿರಜಕರ, ೇತ್ರ ಶಿಣಾಧಿಕಾರಿ ಸಿ.ವೆ. ತುಬಾಕದ ಇತರರಿದ್ದರು.