PHOTOS| ರಾಜ್ಯಮಟ್ಟದ ಕೃಷಿಮೇಳದಲ್ಲಿ ಮೆರವಣಿಗೆ ಆರಂಭ: ಮಹಾರಾಜ ಕಾಲೇಜು ಮೈದಾನದವರೆಗೆ ಜನಪದ ತಂಡಗಳು ಭಾಗಿ

MERAVNIGE 3 F
Published on

ಮೈಸೂರು: ಮಹಾರಾಜ ಕಾಲೇಜಿನಲ್ಲಿ ವಿಜಯವಾಣಿ, ದಿಗ್ವಿಜಯ 24x7 ನ್ಯೂಸ್ ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ.

10ಗಂಟೆಗೆ ಸಂಸ್ಕೃತ ಪಾಠಶಾಲೆ ವೃತ್ತದಿಂದ ಜಾನಪದ ತಂಡಗಳ ಮೆರವಣಿಗೆ ಆರಂಭವಾಗಿದೆ. ಅದ್ಧೂರಿ ಮೆರವಣಿಗೆ ಮಹಾರಾಜ ಕಾಲೇಜು ಮೈದಾನದವರೆಗೆ ನಡೆಯಲಿದೆ.

ನಂತರ ಸಭಾವೇದಿಕೆಯಲ್ಲಿ ರಂಗಕರ್ವಿು ಎಚ್. ಜನಾರ್ದನ್(ಜನ್ನಿ) ಅವರಿಂದ ಜಾನಪದ ಗೀತೆಗಳ ಗಾಯನ ಜರುಗಲಿದೆ. ಕೃಷಿ ಮೇಳದ ಹಿನ್ನೆಲೆಯಲ್ಲಿ ವಿಜಯವಾಣಿ ಹೊರತಂದಿರುವ ವಿಶೇಷ ಸಂಚಿಕೆಯನ್ನು ಸಚಿವ ವಿ. ಸೋಮಣ್ಣ ಲೋಕಾರ್ಪಣೆಗೊಳಿಸುವರು.

ಕೃಷಿ ಸಂಸ್ಕೃತಿ ಕಟ್ಟಿಕೊಡುವ ಮಳಿಗೆಗಳ ಉದ್ಘಾಟನೆಯನ್ನು ಸಚಿವ ನಾರಾಯಣಗೌಡ ನೆರವೇರಿಸುವರು. ಶಾಸಕರು, ಅಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ರೈತರು ಸಾಕ್ಷಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net