ಸಂಭ್ರಮ ತರುವ ಅಷ್ಟವಿನಾಯಕ ಸ್ಪರ್ಧೆ, ಉತ್ತಮ ಮೂರ್ತಿ, ಅಲಂಕಾರಕ್ಕೆ ಸಿಗಲಿದೆ ಬಹುಮಾನ

Published on

ಹುಬ್ಬಳ್ಳಿ: ಗಣೇಶ ಹಬ್ಬ ಮತ್ತೆ ಬಂದಿದೆ. ಎಲ್ಲೆಡೆ ಸಂಭ್ರಮ ಹರಡುವ ಉತ್ಸವದಲ್ಲಿ ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿಯೂ ಪಾಲ್ಗೊಳ್ಳುತ್ತಿದೆ. ಪ್ರತಿ ವರ್ಷದಂತೆ ಅಷ್ಟವಿನಾಯಕ ಸ್ಪರ್ಧೆ ಆಯೋಜನೆ ಮಾಡುವ ಮೂಲಕ ಶ್ರೀ ಗಣೇಶೋತ್ಸವ ಸಮಿತಿಗಳಿಗೆ ಪ್ರೇರಣೆ ನೀಡಲು ಮುಂದಾಗಿದೆ.

ಅದ್ದೂರಿ ಗಣೇಶೋತ್ಸವಕ್ಕೆ ರಾಜ್ಯದ ಗಮನ ಸೆಳೆದಿರುವ ಹುಬ್ಬಳ್ಳಿ ಸಾರ್ವಜನಿಕ ಗಣೇಶ ಹಬ್ಬಕ್ಕೆ ಈಗಾಗಲೇ ಮಹಾನಗರ ಸಜ್ಜುಗೊಂಡಿದೆ. ಈಗಾಗಲೇ ಜನಪ್ರಿಯವಾಗಿರುವ ವಿಜಯವಾಣಿ ಅಷ್ಟವಿನಾಯಕ ಸ್ಪರ್ಧೆಯನ್ನು ಈ ಬಾರಿ ಇನ್ನಷ್ಟು ವಿಶೇಷತೆಗಳೊಂದಿಗೆ ಆಯೋಜನೆ ಮಾಡಲಾಗುತ್ತಿದೆ.

ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಒಟ್ಟು 26 ಬಹುಮಾನಗಳು ನೀಡಲಾಗುತ್ತಿದೆ.

ಉತ್ತಮ ವಿಗ್ರಹ ಹಾಗೂ ಉತ್ತಮ ಅಲಂಕಾರ (ರೂಪಕ) ವಿಭಾಗದಲ್ಲಿ ತಲಾ 13 ಬಹುಮಾನಗಳನ್ನು ನೀಡಲಾಗುವುದು. ಆಕರ್ಷಕ ಪಾರಿತೋಷಕ ಅಲ್ಲದೇ ನಗದು ಬಹುಮಾನ ಕೂಡ ಇರಲಿದೆ.

ಪ್ರತಿ ವರ್ಷ ಗಣೇಶೋತ್ಸವ ಸಮಿತಿಗಳಿಗೆ ಉತ್ತಮ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅಲಂಕಾರ ಮಾಡಲು ಉತ್ತೇಜನ ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ಸ್ಪರ್ಧೆಗೆ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಬಹುಮಾನ ನೀಡುವ ಸಂಭ್ರಮದ ಕಾರ್ಯಕ್ರಮದಲ್ಲಿ ಪ್ರಾಯೋಜಕರಾಗಿ ವಿಎಕೆ ವೆಂಕಟೇಶ ಕಾಟವೆ ಫೌಂಡೇಷನ್ ಹಾಗೂ ಕಾಟವೆ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಸಂಸ್ಥೆಯವರು ತೊಡಗಿಸಿಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಮಿತಿಯವರು 200 ರೂ. ಶುಲ್ಕ ಪಾವತಿಸಿ ಸಮಿತಿ ಹೆಸರು ನೋಂದಣಿ ಮಾಡಬಹುದು.
ತಡ ಮಾಡದೇ ನೋಂದಣಿ ಮಾಡಿಕೊಂಡು ವಿಜಯವಾಣಿ ಆಯೋಜಿಸಿರುವ ಅಷ್ಟವಿನಾಯಕ ಸ್ಪರ್ಧೆಯಲ್ಲಿ ಭಾಗವಹಿಸಿ.

ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 8884432660, 8884432134,
ಧಾರವಾಡ, 8884431937, 8884431973.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net