ಅಷ್ಟವಿನಾಯಕ ಸ್ಪರ್ಧೆಯಲ್ಲಿ 26 ಬಹುಮಾನ ವಿತರಣೆ, ಉತ್ಸಾಹದಿಂದ ಭಾಗಿಯಾದ ಗಣೇಶೋತ್ಸವ ಸಮಿತಿಗಳು,  ಸ್ಟೇಶನ್ ರೋಡ್, ಭೂಸ್ ಗಲ್ಲಿ ಗಣೇಶ ಪ್ರಥಮ

IMG_20250903_201747_270.jpg
Published on

ಹುಬ್ಬಳ್ಳಿ: ವರ್ಷದಿಂದ ವರ್ಷಕ್ಕೆ ಭಕ್ತರು, ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿರುವ ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿ ಆಯೋಜಿಸುವ ಅಷ್ಟವಿನಾಯಕ ಸ್ಪರ್ಧೆಯಲ್ಲಿ ಈ ವರ್ಷವೂ ಅವಳಿನಗರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳು ಉತ್ಸಾಹದಿಂದ ಪಾಲ್ಗೊಂಡು ಮತ್ತಷ್ಟು ಮೆರಗು ತಂದರು.

ಇಲ್ಲಿಯ ದೇಶಪಾಂಡೆನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಸ್ಪರ್ಧೆಗೆ ನೋಂದಣಿ ಮಾಡಿಕೊಂಡಿದ್ದ ಸಮಿತಿಯವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಜೃಂಭಿಸಿದರು.

ಸ್ಪರ್ಧೆಗೆ ನೋಂದಣಿ ಮಾಡಿಕೊಂಡಿದ್ದ ಸುಮಾರು 80ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಂಟಪಗಳಿಗೆ ನಿರ್ಣಾಯಕರು ತೆರಳಿ ಸಮಗ್ರ ವೀಕ್ಷಣೆ ಮಾಡಿ ಉತ್ತಮ ವಿಗ್ರಹ, ಉತ್ತಮ ಅಲಂಕಾರ ವಿಭಾಗದಲ್ಲಿ ತಲಾ 13 ಬಹುಮಾನ ಸೇರಿ ಒಟ್ಟು 26 ಬಹುಮಾನಗಳಿಗೆ ಸಮಿತಿ ಹೆಸರುಗಳನ್ನು ಆಯ್ಕೆ ಮಾಡಿದ್ದರು.

ನಿರ್ಣಾಯಕರ ತಂಡದಲ್ಲಿದ್ದ ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್. ಮಾಳವಾಡ, ಲೋಹದ ವಿಗ್ರಹ ತಯಾರಕರಾದ ವಿಶ್ವನಾಥ ಹಿತ್ತಾಳಿ ಹಾಗೂ ಛಾಯಾಗ್ರಾಹಕರು ಮತ್ತು ಚಿತ್ರಕಲಾವಿದ ಕುಮಾರ ಕಾಟೇನಹಳ್ಳಿ ಅವರು ಗಣೇಶ ಮಂಟಪಗಳಿಗೆ ಹೋಗಿ ನೋಡುವ ಜತೆಗೆ ಅತ್ಯಂತ ಪಾರದರ್ಶಕವಾಗಿ ಸಮಿತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಿದ್ದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಉಜ್ವಲ್ ಡೆವಲಪರ್ಸ್ ಹಾಗೂ ಬಿಲ್ಡರ್ಸ್ ನಿರ್ದೇಶಕ ದಾದಾಪೀರ ಬಳ್ಳಾರಿ ಅವರು ವಿಜೇತ ಸಮಿತಿಗಳಿಗೆ ಅದ್ದೂರಿ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಿದರು.

ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಎಸ್.ಎಸ್. ಕಮಡೊಳ್ಳಿಶೆಟ್ಟರ್, ಶ್ರೀನಿವಾಸ ಬೋಚಗೇರಿ, ಅಮರೇಶ ಹಿಪ್ಪರಗಿ, ಸರಸ್ವತಿ ಮೆಹರವಾಡೆ, ಸಾಧನಾ ಪೂಜಾರ, ಗಾಯತ್ರಿ ನೆಲ್ಲಿಕೊಪ್ಪ, ಅನಿತಾ ಜಡಿ, ಅಕ್ಕಮ್ಮ ಅಂದೇಲಿಮಠ, ರೇಖಾ ಆಪ್ಟೆ, ಪಾರ್ವತಿ ಹಿರೇಮಠ, ಸಂಗೀತಾ ಜಡಿ, ಪುಷ್ಪಾ ಹಿತ್ತಾಳಿ, ವಿಜಯಲಕ್ಷ್ಮಿ ಏಕಬೋಟೆ, ಮಧುಮತಿ ಪಾಟೀಲ, ಸಂಗೀತಾ ದೇವದಾಸ, ರಾಜಶೇಖರ ಕರಕಣ್ಣವರ, ಎಂ.ಎಂ. ಡಂಬಳ, ಚಿದಾನಂದ ಪೂಜಾರ, ಐ.ಎಫ್. ನಾಯ್ಕರ, ಸಂತೋಷ ಕಾಟವೆ, ಚಂದ್ರಕಾಂತ ನವಲಗುಂದ, ಅನಿಲ ಬೇವಿನಕಟ್ಟಿ, ರೋಹನ ಗೋಂದಕರ, ಸಿ.ಜಿ. ಧಾರವಾಡಶೆಟ್ಟರ್, ಚಂದ್ರಶೇಖರ ಗಾಣಿಗೇರ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಸ್ವಾಗತಿಸಿದರು. ಮುಖ್ಯ ಉಪಸಂಪಾದಕ ಜಿ.ಟಿ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಅಖಿಲಾಂಡೇಶ್ವರಿ ಮಹಿಳಾ ಮಂಡಳ, ಸುರಭಿ ಮಹಿಳಾ ಮಂಡಳ, ಪದ್ಮಜಾ ಮಹಿಳಾ ಮಂಡಳ, ಶಿವಶಕ್ತಿ ಮಹಿಳಾ ಮಂಡಳದ ಸದಸ್ಯರು ವಿವಿಧ ಭಕ್ತೀಗಿತೆ, ಪ್ರಾರ್ಥನೆ ಹಾಡುವ ಮೂಲಕ ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net