

ವಿಜಯಪುರ: ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಆದೇಶದ ಮೇರೆಗೆ ರಾಷ್ಟ್ರೀಯ ಭಾವೈಕತೆ ಹಾಗೂ ಏಕತೆಗಾಗಿ ಭಾನುವಾರ ಕಾಂಗ್ರೆಸ್ ಕಚೇರಿ ಮುಂದೆ ಧ್ವಜವಂದನೆ ಕಾರ್ಯಕ್ರಮ ನೆರವೇರಿಸಲಾಯಿತು.
ಜಿಲ್ಲಾಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ಅನೇಕ ಧರ್ಮಿಯರನ್ನು ಹೊಂದಿರುವ ದೇಶ. ವೇಷ, ಭಾಷೆ, ಆಚಾರ-ವಿಚಾರ ವಿಭಿನ್ನವಾಗಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವದಿಂದ ಬದುಕುತ್ತಿರುವ ದೇಶ. ಇಂತಹ ಶ್ರೇಷ್ಠ ಭಾರತದಲ್ಲಿ ಎಲ್ಲರೂ ಭಾವೈಕ್ಯತೆಯಿಂದ ಬಾಳಬೇಕು ಎಂದರು.
ಮಾಜಿ ಶಾಸಕ ವಿಠಲ ಕಟಕಧೋಂಡ ಧ್ವಜಾರೋಹಣ ನೆರವೇರಿಸಿದರು. ವೈಜನಾಥ ಕರ್ಪೂರಮಠ, ಜಮೀರ್‌ಅಹ್ಮದ್ ಬಕ್ಷಿ, ಆರತಿ ಶಹಾಪೂರ, ಇಲಿಯಾಸಪಟೇಲ ಬಗಲಿ, ಸಾಹೇಬಗೌಡ ಬಿರಾದಾರ, ಚನ್ನಬಸಪ್ಪ ನಂದರಗಿ, ವಸಂತ ಹೊನಮೊಡೆ, ಎಚ್.ಎಸ್. ದಳವಾಯಿ, ನಿಂಗಪ್ಪ ಸಂಗಾಪುರ, ರವಿಗೌಡ ಪಾಟೀಲ, ವಾಸುದೇವ ಗಡದಾಳಿ, ಅಮೀತ ಚವ್ಹಾಣ, ಲಕ್ಷ್ಮಣ ಇಲಕಲ್ಲ, ವಿ.ಡಿ. ಕಾಳೆ, ಪ್ರದೀಪ ಸೂರ್ಯವಂಶಿ, ಎಂ.ಎಂ. ಬಕ್ಷಿ, ಪ್ರಶಾಂತ ಪೂಜಾರಿ, ಶಮಶುದ್ದೀನ ಸರತೂರ, ಅನಿಲ ಸುರಗಿಹಳ್ಳಿ, ಇಲಿಯಾಸ ಸಿದ್ದಿಕಿ, ವಿರೇಶ ದುಗುಲಗುಂಡಿ, ಶಫೀಕ ಮನಗೂಳಿ, ಗುಡುಸಾಬ ತೊರಗಲ್ಲ ಮತ್ತಿತರರಿದ್ದರು.