ವಿಜಯರತ್ನ ಪುರಸ್ಕೃತ ಡಾ.ವೈ. ಚಿನ್ನಪ್ಪನಿಗೆ ಸನ್ಮಾನ

Untitled-1
ಮಲೇಷ್ಯಾದಲ್ಲಿ ವಿಜಯವಾಣಿ ವಿಜಯ ರತ್ನ ಪ್ರಶಸ್ತಿ ಸ್ವೀಕರಿಸಿದ ಡಾ.ವೈ.ಚಿನ್ನಪ್ಪ ಚಿಕ್ಕಹಾಗಡೆ ಅವರನ್ನು ಹುಟ್ಟೂರಿನಲ್ಲಿ ಗ್ರಾಮಸ್ಥರು ಸನ್ಮಾನಿಸಿದರು. ಮುಖಂಡರಾದ ಕೆ.ಕೃಷ್ಣಪ್ಪ, ಪ್ರವಿಣ್​, ಪರಶುರಾಮ್​, ರವಿಕುಮಾರ್​, ನವೀನ್​ಕುಮಾರ್​, ಚಂದ್ರಪ್ಪ,ಪ್ರಜ್ವಲ್​ ನಿರಂಜನ್​, ನಂದೀಶ್​ ಅರುಣ್​ ಇದ್ದರು.
Published on

ಆನೇಕಲ್​ : ಮಲೇಷ್ಯಾದ ಕೌಲಾಲಂಪುರದಲ್ಲಿ ರಾಜ್ಯದ ನಂ.1 ದಿನ ಪತ್ರಿಕೆ ವಿಜಯವಾಣಿಯಿಂದ "ವಿಜಯರತ್ನ' ಸಾಧಕ ಪ್ರಶಸ್ತಿ ಸ್ವೀಕರಿಸಿದ ಮುತ್ತಾನಲ್ಲೂರು ಡಾ.ವೈ. ಚಿನ್ನಪ್ಪ ಚಿಕ್ಕಹಾಗಡೆ ಅವರನ್ನು ಚಿಕ್ಕಹಾಗಡೆ ಗ್ರಾಮಸ್ಥರು ಸನ್ಮಾನಿಸಿದರು. ಗ್ರಾಮದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ವೈ.ಚಿನ್ನಪ್ಪ ಚಿಕ್ಕಹಾಗಡೆ, ಈ ಹಿಂದೆ ಹಲವಾರು ಪ್ರಶಸ್ತಿಗಳು ಸಮಾಜ ಸೇವೆಗೆ ಬಂದಿವೆ. ಆದರೆ ವಿಜಯವಾಣಿಯು ನನ್ನ ಸಾಧನೆ ಗುರುತಿಸಿ ವಿದೇಶದಲ್ಲಿ ಪ್ರಶಸ್ತಿ ನೀಡುವ ಮೂಲಕ ಸಮಾಜದಲ್ಲಿ ಮತ್ತಷ್ಟು ಸೇವೆ ಮಾಡುವ ಜವಾಬ್ದಾರಿ ಹೊರಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜ ಸೇವೆ ಮಾಡುತ್ತೇನೆ. ಹುಟ್ಟಿದ ಊರಿಗೂ ಕೈಲಾದ ಸಹಾಯ ಹಾಗೂ ನನ್ನವರ ಕಷ್ಟದಲ್ಲಿ ನಿಲ್ಲುತ್ತೇನೆ ಎಂದು ಹೇಳಿದರು. ಚಿನ್ಮಯ ಸೇವಾ ಸಂಸ್ಥೆ ಮೂಲಕ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಸೇರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ, ಶಾಲಾ ಮಕ್ಕಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆ ನೀಡುತ್ತಿದ್ದೇನೆ ಎಂದರು.

ಗ್ರಾಪಂ ಮಾಜಿ ಸದಸ್ಯ ಆನಂದ್​ ಮಾತನಾಡಿ, ಯಾವುದೇ ಪ್ರಶಸ್ತಿ ಪಡೆಯಬೇಕಾದರೆ ತನ್ನದೇ ಆದ ಅರ್ಹತೆ ಇರಬೇಕಾಗುತ್ತದೆ, ಆ ನಿಟ್ಟಿನಲ್ಲಿ ಚಿನ್ನಪ್ಪ ಅವರ ಕಾರ್ಯ ಮೆಚ್ಚುವಂಥದ್ದು. ಅವರು ಹಲವಾರು ಜನಪರ ಕೆಲಸಗಳನ್ನು ಮಾಡುವ ಮೂಲಕ ರಾಜಕಾರಣದಲ್ಲಿ ಇದ್ದರೂ ಸಮಾಜ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಸೇವಾ ಮನೋಭಾವ ಮತ್ತಷ್ಟು ಹೆಚ್ಚಾಗಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net