

ಇಂಡಿ : ಸುಮಾರು 32 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಹಂಜಗಿ ಕೆರೆಗೆ ತಿಡಗುಂದಿ ಬ್ರಾಂಚ್ ಕಾಲುವೆಯಿಂದ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತ ಸಂಘಟನೆ ನೇತೃತ್ವದಲ್ಲಿ ಇಂಡಿ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ಭೀಮರಾಯ ಪೂಜಾರಿ ಮಾತನಾಡಿ, ಹಂಜಗಿ ಕೆರೆ ಬತ್ತಿರುವುದರಿಂದ ಸುತ್ತಮುತ್ತಲಿನ 32 ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜನರ ಸಂಕಷ್ಟ ಅರಿತು ತಕ್ಷಣ ಕೆರೆಗೆ ನೀರು ಹರಿಸಬೇಕು. ಅಧಿಕಾರಿಗಳು ನಿರ್ಲಕ್ಷೃ ಮಾಡದೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಬೇಡಿಕೆ ಈಡೇರದಿದ್ದರೆ ರೈತ ಸಂಘಟನೆಯಿಂದ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿ, ಕೆರೆಗೆ ನೀರು ಹರಿಸುವಲ್ಲಿ ವಿಳಂಬವಾದರೆ ಉಂಟಾಗುವ ಅನಾಹುತಗಳಿಗೆ ಸಂಬಂಧಿಸಿದ ಇಲಾಖೆಗಳೇ ಹೊಣೆ ಹೊರಬೇಕಾಗುತ್ತದೆ ಎಂದರು. ರೈತ ಮುಖಂಡರಾದ ಶ್ರೀಶೈಲ ಪೈಕಾರ, ಶಂಕ್ರಪ್ಪ ಸಾಲೋಟಗಿ, ಮಲ್ಲಪ್ಪ ಹಿರೇ ಕುರುಬರ, ಶ್ರೀಶೈಲ ಪೂಜಾರಿ, ಶಿವಗಂಗೆ ಕೊಟ್ಟಲಗಿ, ಮುತ್ತು ಪೈಕಾರ, ಶ್ರೀಕಾಂತ ಸಾತ್ಗೂರ್, ಬಸವರಾಜ ಬಿರಾದಾರ, ಮಂಜು ಚಾನ್ ಕೋಟಿಗಿ, ಅಶೋಕ್ ಬಿರಾದಾರ, ಶಿವಯ್ಯ ಹಿರೇಮಠ, ಬಸು ಕೊಟ್ಟಲಗಿ ಇತತರಿದ್ದರು.