ಸಂಸ್ಕಾರದಿಂದ ಸುಭದ್ರ ಸಮಾಜ

ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಸಲಹೆ ಅಡಿಗಲ್ಲು ಸಮಾರಂಭ
ದೇವರಹಿಪ್ಪರಗಿ: ಧರ್ಮ, ಸಂಸ್ಕಾರ, ಸೇವೆ ಮತ್ತು ಸೌಹಾರ್ದದ ಹೊಸ ಯುಗಕ್ಕೆ ನಾಂದಿಯಾಗಿದ್ದು, ಕಲ್ಲಿನಿಂದ ಮಂದಿರ ನಿರ್ಮಿಸಿದರೆ ಸಂಸ್ಕಾರದಿಂದ ಸುಭದ್ರ ಸಮಾಜ ನಿರ್ಮಿಸಬಹುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

 ತಾಲೂಕಿನ ಕೋರವಾರ ಶ್ರೀ ಮಹಾಂತೇಶ್ವರ ಶಿಲಾಮಂಟಪದ ಅಡಿಗಲ್ಲು ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಮಂದಿರ ದೇವಸ್ಥಾನಗಳಿಗೆ ಪವಿತ್ರ ಇತಿಹಾಸವಿದೆ. ಮಂದಿರವೆಂದರೆ ಕೇವಲ ಕಟ್ಟಡವಲ್ಲ. ಸಂಸ್ಕಾರದ ಕೇಂದ್ರವಾಗಿ ಭಕ್ತಿ, ಸಂಸ್ಕೃತಿ, ಪರಂಪರೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಪವಿತ್ರ ತಾಣವಾಗಿದೆ. 

ಇಂದು ಶಿಲಾನ್ಯಾಸ ಮಾಡುತ್ತಿರುವುದು ಕೇವಲ ಶಿಲೆಯ ಮಂದಿರ ಅಡಿಪಾಯವಲ್ಲ. ಧರ್ಮನಿಷ್ಠ ಸಮಾಜ ನಿರ್ಮಾಣದ ಅಡಿಪಾಯವಾಗಿದೆ. ಪೂಜೆ ಆಚರಣೆಗಳ ಜತೆಗೆ ದಯೆ, ಸೇವೆ, ಸತ್ಯ, ಪ್ರಾಮಾಣಿಕತೆ ಮತ್ತು ಪರೋಪಕಾರಗಳಿಗೆ ಆದ್ಯತೆ ದೊರೆಯಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. 

ಮಂದಿರಗಳು ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಂಪರೆ ಮತ್ತು ನೈತಿಕ ಮೌಲ್ಯಗಳನ್ನು ಪರಿಚಯಿಸುವ ಕೇಂದ್ರಗಳಾಗಬೇಕು. ಬಸವಲಿಂಗ ಶಿವಾಚಾರ್ಯರು ತಮ್ಮ ಮೂಲ ಮಠದ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಎಲ್ಲ ಭಕ್ತ ಸಮುದಾಯಕ್ಕೆ ಹರುಷ ತಂದಿದೆ ಎಂದರು. 

ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು ಮಾತನಾಡಿ, ನಮ್ಮ ಧಾರ್ಮಿಕ ಪರಂಪರೆ ಕೇವಲ ಆಚರಣೆಯಲ್ಲಿ ಉಳಿಯದೇ ಅದರ ಹಿಂದಿರುವ ತತ್ವ ಮತ್ತು ಜೀವನ ಮೌಲ್ಯಗಳು ಮುಂದಿನ ಪೀಳಿಗೆಗೆ ತಲುಪಬೇಕು. ಅನ್ನದಾನ ವಿದ್ಯಾದಾನ, ಆರೋಗ್ಯ ಸೇವೆ, ಪರಿಸರ ಸಂರಕ್ಷಣೆ ಮೊದಲಾದ ಸೇವಾ ಕಾರ್ಯಗಳಿಗೆ ಶಿಲಾ ಮಂಟಪ ಪ್ರೇರಣಾ ಕೇಂದ್ರವಾಗಬೇಕೆಂದು ಆಶಿಸಿದರು.

ಮಠಾಧ್ಯಕ್ಷ ಬಸವಲಿಂಗ ಶಿವಾಚಾರ್ಯರು ಮಾತನಾಡಿ, ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ಧರ್ಮ ವೀರಶೈವ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಸಂಸ್ಕೃತಿ ನಮ್ಮದು. ವೈಚಾರಿಕತೆಯ ಹೆಸರಿನಲ್ಲಿ ಸಂಸ್ಕೃತಿ ಸಭ್ಯತೆ ಮರೆಯಬಾರದು. ಶಿಲಾಮಂಟಪಕ್ಕೆ ಇಂದು ಶಿಲಾನ್ಯಾಸ ನೆರವೇರಿದೆ. ಮುಂದೆ ನಿಮ್ಮೆಲ್ಲರ ನೆರವು ಸಹಕಾರದಿಂದ ಮಂಟಪ ನಿರ್ಮಾಣ ಮಾಡಿ ಉದ್ಘಾಟನಾ ಸಮಾರಂಭಕ್ಕೆ ಎಲ್ಲ ಪಂಚಪೀಠದ ಜಗದ್ಗುರುಗಳನ್ನು ಬರಮಾಡಿಕೊಳ್ಳಲಾಗುವುದೆಂದರು.

ಮಮದಾಪುರ ಮುರಗೇಂದ್ರ ಸ್ವಾಮೀಜಿ, ದೇವೂರು ಮರುಳಾರಾಧ್ಯ ಬಸವಲಿಂಗ ಶಿವಾಚಾರ್ಯರು, ಅಣಜಿ ಚನ್ನವೀರ ದೇವರು, ಕೆರೂಟಗಿ ಶಿವಬಸವಸ್ವಾಮೀಜಿ, ದೇವರಹಿಪ್ಪರಗಿ, ಗಿರಿಸಾಗರ, ಆಲಮೇಲ, ಮುತ್ತತ್ತಿ, ದೇವೂರು, ಮುಖೇಡ, ಕೆಂಭಾವಿ, ಗುಂಡಕನಾಳ, ಕೊಕಟನೂರು, ಸಿಂದಗಿ, ಯಂಕಂಚಿ, ಬರ್ದಾಪುರ, ದೇವಣಿ, ಮಠಾಧೀಶರು ಉಪಸ್ಥಿತರಿದ್ದರು. ಡಾ. ನಿಂಗನಗೌಡ ಪಾಟೀಲ, ಬಸನಗೌಡ ಪಾಟೀಲ ಯಶವಂತ ಬಡಿಗೇರ ಅವರಿಂದ ಭಕ್ತಿಗೀತೆ, ಜೇರಟಗಿ ಮಡಿವಾಳೇಶ್ವರ ಶಾಸಿಗಳು ನಿರೂಪಿಸಿದರು.
ದೇವರಹಿಪ್ಪರಗಿ ತಾಲೂಕಿನ ಕೋರವಾರ ಶ್ರೀ ಮಹಾಂತೇಶ್ವರ ಶಿಲಾ ಮಂಟಪದ ಅಡಿಗಲ್ಲು ಸಮಾರಂಭದಲ್ಲಿ ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪಾಲ್ಗೊಂಡು ಆಶೀರ್ವಚನ ನೀಡಿದರು. ಮುರಗೇಂದ್ರ ಸ್ವಾಮೀಜಿ, ದೇವೂರು ಮರುಳಾರಾಧ್ಯ ಬಸವಲಿಂಗ ಶಿವಾಚಾರ್ಯರು, ಅಣಜಿ ಚನ್ನವೀರ ದೇವರು, ಕೆರೂಟಗಿ ಶಿವಬಸವಸ್ವಾಮೀಜಿ ಮತ್ತಿತರರಿದ್ದರು.
Published on

ದೇವರಹಿಪ್ಪರಗಿ: ಧರ್ಮ, ಸಂಸ್ಕಾರ, ಸೇವೆ ಮತ್ತು ಸೌಹಾರ್ದದ ಹೊಸ ಯುಗಕ್ಕೆ ನಾಂದಿಯಾಗಿದ್ದು, ಕಲ್ಲಿನಿಂದ ಮಂದಿರ ನಿರ್ಮಿಸಿದರೆ ಸಂಸ್ಕಾರದಿಂದ ಸುಭದ್ರ ಸಮಾಜ ನಿರ್ಮಿಸಬಹುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

 ತಾಲೂಕಿನ ಕೋರವಾರ ಶ್ರೀ ಮಹಾಂತೇಶ್ವರ ಶಿಲಾಮಂಟಪದ ಅಡಿಗಲ್ಲು ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಮಂದಿರ ದೇವಸ್ಥಾನಗಳಿಗೆ ಪವಿತ್ರ ಇತಿಹಾಸವಿದೆ. ಮಂದಿರವೆಂದರೆ ಕೇವಲ ಕಟ್ಟಡವಲ್ಲ. ಸಂಸ್ಕಾರದ ಕೇಂದ್ರವಾಗಿ ಭಕ್ತಿ, ಸಂಸ್ಕೃತಿ, ಪರಂಪರೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಪವಿತ್ರ ತಾಣವಾಗಿದೆ. 

ಇಂದು ಶಿಲಾನ್ಯಾಸ ಮಾಡುತ್ತಿರುವುದು ಕೇವಲ ಶಿಲೆಯ ಮಂದಿರ ಅಡಿಪಾಯವಲ್ಲ. ಧರ್ಮನಿಷ್ಠ ಸಮಾಜ ನಿರ್ಮಾಣದ ಅಡಿಪಾಯವಾಗಿದೆ. ಪೂಜೆ ಆಚರಣೆಗಳ ಜತೆಗೆ ದಯೆ, ಸೇವೆ, ಸತ್ಯ, ಪ್ರಾಮಾಣಿಕತೆ ಮತ್ತು ಪರೋಪಕಾರಗಳಿಗೆ ಆದ್ಯತೆ ದೊರೆಯಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. 

ಮಂದಿರಗಳು ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಂಪರೆ ಮತ್ತು ನೈತಿಕ ಮೌಲ್ಯಗಳನ್ನು ಪರಿಚಯಿಸುವ ಕೇಂದ್ರಗಳಾಗಬೇಕು. ಬಸವಲಿಂಗ ಶಿವಾಚಾರ್ಯರು ತಮ್ಮ ಮೂಲ ಮಠದ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಎಲ್ಲ ಭಕ್ತ ಸಮುದಾಯಕ್ಕೆ ಹರುಷ ತಂದಿದೆ ಎಂದರು. 

ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು ಮಾತನಾಡಿ, ನಮ್ಮ ಧಾರ್ಮಿಕ ಪರಂಪರೆ ಕೇವಲ ಆಚರಣೆಯಲ್ಲಿ ಉಳಿಯದೇ ಅದರ ಹಿಂದಿರುವ ತತ್ವ ಮತ್ತು ಜೀವನ ಮೌಲ್ಯಗಳು ಮುಂದಿನ ಪೀಳಿಗೆಗೆ ತಲುಪಬೇಕು. ಅನ್ನದಾನ ವಿದ್ಯಾದಾನ, ಆರೋಗ್ಯ ಸೇವೆ, ಪರಿಸರ ಸಂರಕ್ಷಣೆ ಮೊದಲಾದ ಸೇವಾ ಕಾರ್ಯಗಳಿಗೆ ಶಿಲಾ ಮಂಟಪ ಪ್ರೇರಣಾ ಕೇಂದ್ರವಾಗಬೇಕೆಂದು ಆಶಿಸಿದರು.

ಮಠಾಧ್ಯಕ್ಷ ಬಸವಲಿಂಗ ಶಿವಾಚಾರ್ಯರು ಮಾತನಾಡಿ, ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ಧರ್ಮ ವೀರಶೈವ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಸಂಸ್ಕೃತಿ ನಮ್ಮದು. ವೈಚಾರಿಕತೆಯ ಹೆಸರಿನಲ್ಲಿ ಸಂಸ್ಕೃತಿ ಸಭ್ಯತೆ ಮರೆಯಬಾರದು. ಶಿಲಾಮಂಟಪಕ್ಕೆ ಇಂದು ಶಿಲಾನ್ಯಾಸ ನೆರವೇರಿದೆ. ಮುಂದೆ ನಿಮ್ಮೆಲ್ಲರ ನೆರವು ಸಹಕಾರದಿಂದ ಮಂಟಪ ನಿರ್ಮಾಣ ಮಾಡಿ ಉದ್ಘಾಟನಾ ಸಮಾರಂಭಕ್ಕೆ ಎಲ್ಲ ಪಂಚಪೀಠದ ಜಗದ್ಗುರುಗಳನ್ನು ಬರಮಾಡಿಕೊಳ್ಳಲಾಗುವುದೆಂದರು.

ಮಮದಾಪುರ ಮುರಗೇಂದ್ರ ಸ್ವಾಮೀಜಿ, ದೇವೂರು ಮರುಳಾರಾಧ್ಯ ಬಸವಲಿಂಗ ಶಿವಾಚಾರ್ಯರು, ಅಣಜಿ ಚನ್ನವೀರ ದೇವರು, ಕೆರೂಟಗಿ ಶಿವಬಸವಸ್ವಾಮೀಜಿ, ದೇವರಹಿಪ್ಪರಗಿ, ಗಿರಿಸಾಗರ, ಆಲಮೇಲ, ಮುತ್ತತ್ತಿ, ದೇವೂರು, ಮುಖೇಡ, ಕೆಂಭಾವಿ, ಗುಂಡಕನಾಳ, ಕೊಕಟನೂರು, ಸಿಂದಗಿ, ಯಂಕಂಚಿ, ಬರ್ದಾಪುರ, ದೇವಣಿ, ಮಠಾಧೀಶರು ಉಪಸ್ಥಿತರಿದ್ದರು. ಡಾ. ನಿಂಗನಗೌಡ ಪಾಟೀಲ, ಬಸನಗೌಡ ಪಾಟೀಲ ಯಶವಂತ ಬಡಿಗೇರ ಅವರಿಂದ ಭಕ್ತಿಗೀತೆ, ಜೇರಟಗಿ ಮಡಿವಾಳೇಶ್ವರ ಶಾಸಿಗಳು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net