ವೃಕ್ಷಥಾನ್ ಹೆರಿಟೇಜ್ ರನ್ ನೋಂದಣಿ ಜಾಗೃತಿ ಅಭಿಯಾನ

ಈ ಜಾಗೃತಿ ಅಭಿಯಾನಕ್ಕೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ.
ವಿಜಯಪುರ : ವೃಕ್ಷ ಅಭಿಯಾನ ಪ್ರತಿಷ್ಠಾನದ ಅಂಗವಾಗಿ ಐತಿಹಾಸಿಕ ವಿಜಯಪುರ ನಗರದಲ್ಲಿ ಡಿ. 13ರಂದು ನಡೆಯಲಿರುವ 7ನೇ ಆವೃತ್ತಿಯ ವೃಕ್ಷಥಾನ್ ಹೆರಿಟೇಜ್ ರನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಂಗಳೂರಿನಲ್ಲಿ ವಿಜಯಪುರ ಸೈಕ್ಲಿಂಗ್ ಗ್ರೂಪ್ ಮತ್ತು ವೃಕ್ಷಥಾನ್ ಹೆರಿಟೇಜ್ ರನ್ ಸಮಿತಿ ಸದಸ್ಯರು ಪ್ರಮೋಷನ್ ಹಾಗೂ ನೋಂದಣಿ ಜಾಗೃತಿ ಅಭಿಯಾನ ನಡೆಸಿದರು.

ಬೆಂಗಳೂರು ಜಿಕೆವಿಕೆ ಕ್ಯಾಂಪಸ್, ಕಬ್ಬನ್ ಪಾರ್ಕ್, ಶಾಂಕಿ ಟ್ಯಾಂಕ್ ಏರಿಯಾ ಮತ್ತು ಆಡುಗೋಡಿ ಪೊಲೀಸ್ ಮೈದಾನದಲ್ಲಿ ವಿಸಿಜಿ ತಂಡ ಮತ್ತು ವೃಕ್ಷಥಾನ್ ಸಮಿತಿ ಸದಸ್ಯರು ಶನಿವಾರ ಸ್ಥಳೀಯರನ್ನು ಭೇಟಿ ಮಾಡಿ, ವಿಜಯಪುರ ವೃಕ್ಷಥಾನ್ ಹೆರಿಟೇಜ್ ರನ್ ಕುರಿತು ಮಾಹಿತಿ ನೀಡುವ ಜತೆಗೆ ಓಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಈ ಜಾಗೃತಿ ಅಭಿಯಾನಕ್ಕೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರು ಭಾಗದಿಂದ ಹೆಚ್ಚಿನ ಸಂಖ್ಯೆಯ ಓಟಗಾರರು ಈ ಬಾರಿ ಭಾಗವಹಿಸುತ್ತಾರೆಂಬ ಭರವಸೆ ಇದೆ ಎಂದು ವೃಕ್ಷಥಾನ್ ರನ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯಪುರದಲ್ಲಿ ನಡೆಯಲಿರುವ 7ನೇ ಆವೃತ್ತಿಯ ವೃಕ್ಷಥಾನ್ ಹೆರಿಟೇಜ್ ರನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಂಗಳೂರಿನಲ್ಲಿ ವಿಜಯಪುರದ ಸೈಕ್ಲಿಂಗ್ ಗ್ರೂಪ್ ಮತ್ತು ವೃಕ್ಷಥಾನ್ ಹೆರಿಟೇಜ್ ರನ್ ಸಮಿತಿ ಸದಸ್ಯರು ಜಾಗೃತಿ ಅಭಿಯಾನ ನಡೆಸಿದರು. ಮಹಾಂತೇಶ ಬಿರಾದಾರ ಮತ್ತಿತರರಿದ್ದಾರೆ.
Published on: 

ವಿಜಯಪುರ : ವೃಕ್ಷ ಅಭಿಯಾನ ಪ್ರತಿಷ್ಠಾನದ ಅಂಗವಾಗಿ ಐತಿಹಾಸಿಕ ವಿಜಯಪುರ ನಗರದಲ್ಲಿ ಡಿ. 13ರಂದು ನಡೆಯಲಿರುವ 7ನೇ ಆವೃತ್ತಿಯ ವೃಕ್ಷಥಾನ್ ಹೆರಿಟೇಜ್ ರನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಂಗಳೂರಿನಲ್ಲಿ ವಿಜಯಪುರ ಸೈಕ್ಲಿಂಗ್ ಗ್ರೂಪ್ ಮತ್ತು ವೃಕ್ಷಥಾನ್ ಹೆರಿಟೇಜ್ ರನ್ ಸಮಿತಿ ಸದಸ್ಯರು ಪ್ರಮೋಷನ್ ಹಾಗೂ ನೋಂದಣಿ ಜಾಗೃತಿ ಅಭಿಯಾನ ನಡೆಸಿದರು.

ಬೆಂಗಳೂರು ಜಿಕೆವಿಕೆ ಕ್ಯಾಂಪಸ್, ಕಬ್ಬನ್ ಪಾರ್ಕ್, ಶಾಂಕಿ ಟ್ಯಾಂಕ್ ಏರಿಯಾ ಮತ್ತು ಆಡುಗೋಡಿ ಪೊಲೀಸ್ ಮೈದಾನದಲ್ಲಿ ವಿಸಿಜಿ ತಂಡ ಮತ್ತು ವೃಕ್ಷಥಾನ್ ಸಮಿತಿ ಸದಸ್ಯರು ಶನಿವಾರ ಸ್ಥಳೀಯರನ್ನು ಭೇಟಿ ಮಾಡಿ, ವಿಜಯಪುರ ವೃಕ್ಷಥಾನ್ ಹೆರಿಟೇಜ್ ರನ್ ಕುರಿತು ಮಾಹಿತಿ ನೀಡುವ ಜತೆಗೆ ಓಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಈ ಜಾಗೃತಿ ಅಭಿಯಾನಕ್ಕೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರು ಭಾಗದಿಂದ ಹೆಚ್ಚಿನ ಸಂಖ್ಯೆಯ ಓಟಗಾರರು ಈ ಬಾರಿ ಭಾಗವಹಿಸುತ್ತಾರೆಂಬ ಭರವಸೆ ಇದೆ ಎಂದು ವೃಕ್ಷಥಾನ್ ರನ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net