ಜೋಡೆತ್ತಿನ ರೈತರಿಂದ ಬೃಹತ್ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ 500ಕ್ಕೂ ಹೆಚ್ಚು ಬಂಡಿಗಳಲ್ಲಿ ಆಗಮಿಸಿ ರಸ್ತೆ ತಡೆ
ತಿಕೋಟಾ ಪಟ್ಟಣದ ಬಸವೇಶ್ವರ ವತ್ತದಲ್ಲಿ ಜೋಡೆತ್ತಿನ ರೈತರು ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಅಮೀನ ಪಠಾಣ, ಹನಮಂತ ಬ್ಯಾಡಗಿ, ದಶರತಸಿಂಗ ರಜಪೂತ ಮತ್ತಿತರರಿದ್ದರು.
ತಿಕೋಟಾ ಪಟ್ಟಣದ ಬಸವೇಶ್ವರ ವತ್ತದಲ್ಲಿ ಜೋಡೆತ್ತಿನ ರೈತರು ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಅಮೀನ ಪಠಾಣ, ಹನಮಂತ ಬ್ಯಾಡಗಿ, ದಶರತಸಿಂಗ ರಜಪೂತ ಮತ್ತಿತರರಿದ್ದರು.
Published on: 

ತಿಕೋಟಾ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗಾಡಿ ಸಮೇತ ಜೋಡೆತ್ತುಗಳನ್ನು ಕಟ್ಟಿಕೊಂಡು ಆದಿಕಾಲದಿಂದಲೂ ಮಳೆ, ಚಳಿ, ಬೇಸಿಗೆ ಕಾಲದಲ್ಲೂ ಕೃಷಿ ಚಟುವಟಿಕೆಯಿಂದ ಭೂಮಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುವ ರೈತರಿಗೆ ಸರ್ಕಾರದಿಂದ ಸೌಲಭ್ಯ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.

ಸಾತಲಿಂಗಯ್ಯ ಎಸ್. ಸಾಲಿಮಠ ಹಾಗೂ ವಿ.ಎಂ. ಪಾಟೀಲ ತಹಸೀಲ್ದಾರ್ ಸುರೇಶ ಚವಲರ ಮುಖಾಂತರ ಜಿಲ್ಲಾಧಿಕಾರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಈಗಾಗಲೇ ತಾಲೂಕಿನಾದ್ಯಂತ ‘ನಂದಿ ಸೇನೆ’ ಎಂಬ ಸಂಘಟನೆಯಿಂದ ಕಳೆದ ಮೂರು ವರ್ಷಗಳಿಂದ ವಿವಿಧ ಬೆಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಲೇ ಇದೆ. ಆದರೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಆಗ್ರಹಿಸಿದರು.

ತಾಲೂಕಿನ ಜೋಡೆತ್ತಿನ ರೈತರು ವಿವಿಧ ಗ್ರಾಮಗಳಿಂದ 500ಕ್ಕೂ ಹೆಚ್ಚು ಬಂಡಿಗಳ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಡಿವೈಎಸ್ಪಿ ಟಿ.ಎಸ್. ಸುಲ್ಪಿ ಹಾಗೂ ತಹಸೀಲ್ದಾರ್ ಸುರೇಶ ಚವಲರ ಜೋಡೆತ್ತಿನ ರೈತರಿಗೆ ಮನವರಿಕೆ ಮಾಡಿದರೂ ಕೆಲಕಾಲ ರೈತರು ಬಿಗಿಪಟ್ಟು ಹಿಡಿದು ಜಿಲ್ಲಾಧಿಕಾರಿಗಳೇ ಮನವಿ ಸ್ವೀಕಾರ ಮಾಡುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಹಟಹಿಡಿದರು.

ರೈತ ಮುಖಂಡರ ಜೊತೆ ಚರ್ಚಿಸಿ ರೈತರ ಕಷ್ಟವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಕಳಿಸಿಕೊಡಲಾಗುವುದು ಮತ್ತು ಅದರ ಪ್ರತಿ ನಿಮಗೆ ತಲುಪಿಸಲಾಗುವುದೆಂದು ಹೇಳಿದಾಗ ಪ್ರತಿಭಟನೆ ಹಿಂಪಡೆದರು.

ರೈತರಾದ ಅಮೀನ ಪಠಾಣ, ಹನಮಂತ ಬ್ಯಾಡಗಿ, ದಶರತಸಿಂಗ ರಜಪೂತ ಮಾತನಾಡಿದರು.

ಸುನೀಲ ಗುಗವಾಡ, ಶಿವಪ್ಪ ಬಗಲಿ, ಹೊನ್ನಪ್ಪ ಸಿದ್ದಪ್ಪ ಪೂಜಾರಿ, ಸಾಬು ಪೂಜಾರಿ, ಗಂಗಪ್ಪ ಕರಜಗಿ, ಸಚಿನ ಮೋಡೆ, ಮೈಬೂಬ ಟಕ್ಕೋಡ ದಾಸ್ಯಾಳ, ಅಶೋಕ ಗದ್ಯಾಳ, ಶ್ರೀಶೈಲ ಉಟಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net