ಗ್ರಾಮಗಳ ಅಭಿವೃದ್ಧಿಗೆ ಬದ್ಧ

ಶಾಸಕ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಹೇಳಿಕೆ ಭೂಮಿ ಪೂಜೆ
ಹೂವಿನಹಿಪ್ಪರಗಿ ವಡವಡಗಿ ಗ್ರಾಮದಲ್ಲಿ ಎಸ್‌ಸಿ ಕಾಲನಿಯ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಭೂಮಿ ಪೂಜೆ ನೆರವೇರಿಸಿದರು. ಗುರುವೀರಸಿದ್ಧ ಸ್ವಾಮೀಜಿ, ಮಲ್ಲಯ್ಯ ವಿರಕ್ತಮಠ, ಬಸವರಾಜ ಡೆಂಗಿ, ಸುಭಾಸ ಮುತ್ತಗಿ, ಈರಣ್ಣ ಮಾನಿಂಗಪ್ಪಗೋಳ ಇತರರಿದ್ದರು.
ಹೂವಿನಹಿಪ್ಪರಗಿ ವಡವಡಗಿ ಗ್ರಾಮದಲ್ಲಿ ಎಸ್‌ಸಿ ಕಾಲನಿಯ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಭೂಮಿ ಪೂಜೆ ನೆರವೇರಿಸಿದರು. ಗುರುವೀರಸಿದ್ಧ ಸ್ವಾಮೀಜಿ, ಮಲ್ಲಯ್ಯ ವಿರಕ್ತಮಠ, ಬಸವರಾಜ ಡೆಂಗಿ, ಸುಭಾಸ ಮುತ್ತಗಿ, ಈರಣ್ಣ ಮಾನಿಂಗಪ್ಪಗೋಳ ಇತರರಿದ್ದರು.
Published on: 

ಹೂವಿನಹಿಪ್ಪರಗಿ: ದೇವರಹಿಪ್ಪರಗಿ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಸರ್ಕಾರದಲ್ಲಿ ಅನುದಾನದ ಕೊರತೆ ಇದ್ದರೂ ಸಹಿತ ಮುಖ್ಯಮಂತ್ರಿಗಳ ಜತೆಗೆ ನಿರಂತರ ಸಂಪರ್ಕ ಸಾಧಿಸಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಅನುದಾನ ತಂದು ಅಭಿವೃದ್ಧಿ ಮಾಡುತ್ತೇನೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಹೇಳಿದರು.

ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆಯ ಉಪವಿಭಾಗ ಅನುದಾನದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ಎಸ್.ಸಿ. ಕಾಲನಿಯಿಂದ ಗ್ರಾಮ ಪಂಚಾಯಿತಿ ರಸ್ತೆಯವರೆಗೆ ಸಿಸಿ ರಸ್ತೆ ಹಾಗೂ ಒಳ ಚರಂಡಿ ನಿರ್ಮಾಣ, ನಂದಿ ಮಠದ 10 ಲಕ್ಷ ರೂ. ವೆಚ್ಚದ ಸಮುದಾಯ ಭವನ ಹಾಗೂ ಮುಸ್ಲಿಂ ಸಮುದಾಯಕ್ಕೆ ಸ್ಮಶಾನ ಅಭಿವೃದ್ಧಿಗೆ 5 ಲಕ್ಷ ರೂ. ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ಐದು ಗ್ಯಾರಂಟಿ ಇದ್ದರೂ ಸಹಿತ ಸರ್ಕಾರದ ಎಲ್ಲಾ ಇಲಾಖೆಯ ಸಚಿವರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟು ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಅನುದಾನದ ಗುರಿ ಹೊಂದಲಾಗಿದೆ. ಸುಮಾರು ಮೂರು ವರ್ಷದಿಂದ ಗ್ರಾಮಸ್ಥರು ಸೇರಿ ನಂದಿ ಮಠದ ಶ್ರೀಗಳು ರಸ್ತೆಯನ್ನು ಸಿಸಿ ಮಾಡಿ ಕೊಡಿ ಎಂದು ಹಲವು ಭಾರಿ ಮನವಿ ಮಾಡಿದ್ದರು. ಆ ನಿಟ್ಟಿನಲ್ಲಿ ಸದರಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ ಎಂದರು. ನಂದಿಮಠದ ಶ್ರೀ ಗುರುವೀರಸಿದ್ಧ ಸ್ವಾಮೀಜಿ, ಮಲ್ಲಯ್ಯ ವಿರಕ್ತಮಠ, ಮುಖಂಡರಾದ ಬಸವರಾಜ ಡೆಂಗಿ, ಸುಭಾಸ ಮುತ್ತಗಿ, ಈರಣ್ಣ ಮಾನಿಂಗಪ್ಪಗೋಳ, ಈರಣ್ಣ ಯಲಗೋಡ, ಮಂಜುನಾಥ ಬಶೆಟ್ಟಿ, ಅನೀಲ ಹುಣಶ್ಯಾಳ, ಸಿದ್ದಣ್ಣ ವಾಲಿ, ರಾಮಸಿಂಗ ನಾಯಕ, ಬಾಬು ಯಾಳವಾರ, ಮೋದಿನಸಾ ಬಾಗವಾನ, ಮುತ್ತುರಾಜ ಚಿಮ್ಮಲಗಿ, ಗುತ್ತಿಗೆದಾರ ಸದಾನಂದ ಗಬ್ಬೂರ, ಎಇ ಸೋಮನಾಥ ಕುಳಗೇರಿ, ಪ್ರವೀಣ ಮಾದಲಗಾಂವ, ಗ್ರಾಮ ಪಂಚಾಯಿತಿ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net