ಕನಿಷ್ಠ ಬರ ಪರಿಹಾರ ಘೋಷಿಸಿದ್ದಕ್ಕೆ ಆಕ್ರೋಶ

ಎಪಿಎಂಸಿಯಲ್ಲಿ ಹಮಾಲಿಯಿಂದ ಬಂದ ಹಣ ಸರ್ಕಾರಕ್ಕೆ ಪೋಸ್ಟ್ ಮೂಲಕ ರವಾನೆ
ನಾಲ್ಕು ದಿನಗಳ ವಿಶೇಷ ಅಧಿವೇಶನದ ಕೊನೇ ದಿನದಂದು ಮುಖ್ಯಮಂತ್ರಿ ಬರಗಾಲದಿಂದ ತೊಂದರೆಗೊಳಗಾಗಿರುವ ರೈತರಿಗೆ 2500 ರೂ., ಅತಿ ಕಡಿಮೆ ಪರಿಹಾರ ಘೋಷಿಸಿರುವುದನ್ನು ಖಂಡಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ರೈತರು ಪಟ್ಟಣದ ಎಪಿಎಂಸಿಯಲ್ಲಿ ಕೂಲಿ ಮಾಡಿ ಬಂದ ಹಣವನ್ನು ಪೋಸ್ಟ್ ಮೂಲಕ ಕಳುಹಿಸಿ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಿದರು.

ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ರೈತರು, ಬಿಜೆಪಿ ರೈತ ಮೋರ್ಚಾ ಸದಸ್ಯರು ಎಪಿಎಂಸಿ ಆವರಣದಲ್ಲಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಭಿಕ್ಷುಕರಿಗೆ ಕೊಡುವಂತೆ 2500 ರೂ., ಪರಿಹಾರ ಘೋಷಿಸಿರುವುದು ರೈತರನ್ನು ಲೇವಡಿ ಮಾಡಿದಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು. ರೈತರು ಹಮಾಲಿ ಕೆಲಸ ಮಾಡಿ ಅದರಿಂದ ಬಂದ ಕೂಲಿ ಹಣವನ್ನು ತಲಾ 10 ರೂಗಳಂತೆ ಸಂಗ್ರಹಿಸಿ ಎಲ್ಲರ ಗಮನ ಸೆಳೆದರು.

ಜಿ.ಪಂ. ಮಾಜಿ ಅಧ್ಯಕ್ಷ ಗಂಗಾಧರರಾವ್ ನಾಡಗೌಡ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಹರೀಶ ನಾಟೀಕಾರ, ಮಲ್ಲಿಕಾರ್ಜುನ ತಂಗಡಗಿ, ಶಿವು ಕನ್ನೊಳ್ಳಿ, ಸಿದ್ಧರಾಜ ಹೊಳಿ, ಗುರುನಾಥ ಬಿರಾದಾರ ಮಾತನಾಡಿ, ಅಧಿವೇಶನ ಸಂದರ್ಭ ಒಬ್ಬ ಶಾಸಕನ ಒಂದು ದಿನದ ಊಟದ ಖರ್ಚು 2500 ರೂ., ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗೆ ಬಡರೈತರ ಕಷ್ಟ ಗೊತ್ತಿಲ್ಲ. ಮುಖ್ಯಮಂತ್ರಿ ಬೆಂಗಳೂರಿಗೆ ಸೀಮಿತವಾದವರಂತೆ ಮಾತನಾಡಿದ್ದೂ ಅಲ್ಲದೆ ಶಾಸಕರ ಎರಡೆರಡು ಸಂಸಾರ ಬೆಂಗಳೂರಿನಲ್ಲಿ ವಾಸವಾಗಿದೆ ಎಂದು ಹೇಳಿ ಅಧಿವೇಶನ ಗಂಭೀರತೆ ಹಾಳುಗೆಡವಿದ್ದಾರೆ. ಬರದಿಂದ ಬಳಲುತ್ತಿರುವ ರೈತರ ನೆರವಿಗೆ ಧಾವಿಸುವ ಕುರಿತು ಚರ್ಚೆ ನಡೆಯದೆ ಕಾಟಾಚಾರಕ್ಕೆ ಅಧಿವೇಶನ ನಡೆಸಿದಂತಾಗಿದೆ ಎಂದು ಆಗ್ರಹಿಸಿದರು.

ಹರೀಶ ನಾಟೀಕಾರ, ಸೋಮನಗೌಡ ಬಿರಾದಾರ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಪ್ರಧಾನ ಕಾರ್ಯದರ್ಶಿ ಗಿರೀಶಗೌಡ ಪಾಟೀಲ ಹಿರೇಮುರಾಳ, ರೈತ ಮೊರ್ಚಾ ತಾಲೂಕಾಧ್ಯಕ್ಷ ಸಂಗಮೇಶ ಹತ್ತಿ, ಮುಖಂಡರಾದ ಶಂಕರಗೌಡ ಶಿವಣಗಿ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಶ್ರೀಶೈಲ ದೋಡಮನಿ ರೂಢಗಿ, ಲಕ್ಷ್ಮಣ ಬಿಜ್ಜೂರ, ರವೀಂದ್ರ ಬಿರಾದಾರ, ರಮೇಶ ಢವಳಗಿ, ಶೇಖರ ಆಲೂರ, ಸುಭಾಷ ಕಾಳಗಿ, ಬಸವರಾಜ ಗುಳಬಾಳ, ಬಸಮ್ಮ ಬಿರಾದಾರ ಬಿದರಕುಂದಿ, ಎಪಿಎಂಸಿ ಅಡತ್ ಮತ್ತಿತರರಿದ್ದರು.
ಮುದ್ದೇಬಿಹಾಳ ಪಟ್ಟಣದ ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡಿ ಬಂದ ಹಣವನ್ನು ಅಂಚೆ ಮೂಲಕ ಸರ್ಕಾರಕ್ಕೆ ಬಿಜೆಪಿ ರೈತ ಮೋರ್ಚಾ ಮುಖಂಡರು ಕಳುಹಿಸಿದರು. ಗಂಗಾಧರರಾವ್ ನಾಡಗೌಡ, ಸೋಮನಗೌಡ ಬಿರಾದಾರ, ಸಂಗಮೇಶ ಹತ್ತಿ, ಗೌರಮ್ಮ ಹುನಗುಂದ, ಸಂಗಮ್ಮ ದೇವರಳ್ಳಿ, ಬಸಮ್ಮ ಬಿರಾದಾರ ಮತ್ತಿತರರಿದ್ದರು.
Published on: 

ಮುದ್ದೇಬಿಹಾಳ: ನಾಲ್ಕು ದಿನಗಳ ವಿಶೇಷ ಅಧಿವೇಶನದ ಕೊನೇ ದಿನದಂದು ಮುಖ್ಯಮಂತ್ರಿ ಬರಗಾಲದಿಂದ ತೊಂದರೆಗೊಳಗಾಗಿರುವ ರೈತರಿಗೆ 2500 ರೂ., ಅತಿ ಕಡಿಮೆ ಪರಿಹಾರ ಘೋಷಿಸಿರುವುದನ್ನು ಖಂಡಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ರೈತರು ಪಟ್ಟಣದ ಎಪಿಎಂಸಿಯಲ್ಲಿ ಕೂಲಿ ಮಾಡಿ ಬಂದ ಹಣವನ್ನು ಪೋಸ್ಟ್ ಮೂಲಕ ಕಳುಹಿಸಿ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಿದರು.

ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ರೈತರು, ಬಿಜೆಪಿ ರೈತ ಮೋರ್ಚಾ ಸದಸ್ಯರು ಎಪಿಎಂಸಿ ಆವರಣದಲ್ಲಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಭಿಕ್ಷುಕರಿಗೆ ಕೊಡುವಂತೆ 2500 ರೂ., ಪರಿಹಾರ ಘೋಷಿಸಿರುವುದು ರೈತರನ್ನು ಲೇವಡಿ ಮಾಡಿದಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು. ರೈತರು ಹಮಾಲಿ ಕೆಲಸ ಮಾಡಿ ಅದರಿಂದ ಬಂದ ಕೂಲಿ ಹಣವನ್ನು ತಲಾ 10 ರೂಗಳಂತೆ ಸಂಗ್ರಹಿಸಿ ಎಲ್ಲರ ಗಮನ ಸೆಳೆದರು.

ಜಿ.ಪಂ. ಮಾಜಿ ಅಧ್ಯಕ್ಷ ಗಂಗಾಧರರಾವ್ ನಾಡಗೌಡ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಹರೀಶ ನಾಟೀಕಾರ, ಮಲ್ಲಿಕಾರ್ಜುನ ತಂಗಡಗಿ, ಶಿವು ಕನ್ನೊಳ್ಳಿ, ಸಿದ್ಧರಾಜ ಹೊಳಿ, ಗುರುನಾಥ ಬಿರಾದಾರ ಮಾತನಾಡಿ, ಅಧಿವೇಶನ ಸಂದರ್ಭ ಒಬ್ಬ ಶಾಸಕನ ಒಂದು ದಿನದ ಊಟದ ಖರ್ಚು 2500 ರೂ., ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗೆ ಬಡರೈತರ ಕಷ್ಟ ಗೊತ್ತಿಲ್ಲ. ಮುಖ್ಯಮಂತ್ರಿ ಬೆಂಗಳೂರಿಗೆ ಸೀಮಿತವಾದವರಂತೆ ಮಾತನಾಡಿದ್ದೂ ಅಲ್ಲದೆ ಶಾಸಕರ ಎರಡೆರಡು ಸಂಸಾರ ಬೆಂಗಳೂರಿನಲ್ಲಿ ವಾಸವಾಗಿದೆ ಎಂದು ಹೇಳಿ ಅಧಿವೇಶನ ಗಂಭೀರತೆ ಹಾಳುಗೆಡವಿದ್ದಾರೆ. ಬರದಿಂದ ಬಳಲುತ್ತಿರುವ ರೈತರ ನೆರವಿಗೆ ಧಾವಿಸುವ ಕುರಿತು ಚರ್ಚೆ ನಡೆಯದೆ ಕಾಟಾಚಾರಕ್ಕೆ ಅಧಿವೇಶನ ನಡೆಸಿದಂತಾಗಿದೆ ಎಂದು ಆಗ್ರಹಿಸಿದರು.

ಹರೀಶ ನಾಟೀಕಾರ, ಸೋಮನಗೌಡ ಬಿರಾದಾರ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಪ್ರಧಾನ ಕಾರ್ಯದರ್ಶಿ ಗಿರೀಶಗೌಡ ಪಾಟೀಲ ಹಿರೇಮುರಾಳ, ರೈತ ಮೊರ್ಚಾ ತಾಲೂಕಾಧ್ಯಕ್ಷ ಸಂಗಮೇಶ ಹತ್ತಿ, ಮುಖಂಡರಾದ ಶಂಕರಗೌಡ ಶಿವಣಗಿ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಶ್ರೀಶೈಲ ದೋಡಮನಿ ರೂಢಗಿ, ಲಕ್ಷ್ಮಣ ಬಿಜ್ಜೂರ, ರವೀಂದ್ರ ಬಿರಾದಾರ, ರಮೇಶ ಢವಳಗಿ, ಶೇಖರ ಆಲೂರ, ಸುಭಾಷ ಕಾಳಗಿ, ಬಸವರಾಜ ಗುಳಬಾಳ, ಬಸಮ್ಮ ಬಿರಾದಾರ ಬಿದರಕುಂದಿ, ಎಪಿಎಂಸಿ ಅಡತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net