ವಿಜಯವಾಣಿ ಮುದ್ರಣಾಲಯ ಕಂಡು ನಿಬ್ಬೆರಗು, ಪ್ರತಿಷ್ಠಿತ ಆರ್‌ಕೆಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಹೇಳಿದ್ದೇನು ಗೊತ್ತಾ?

ವಿಜಯಪುರ ನಗರದ ಎಪಿಎಂಸಿ ಬಳಿ ಇರುವ ವಿಜಯವಾಣಿ ಮುದ್ರಣಾಲಯಕ್ಕೆ ಆರ್‌ಕೆಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಭೇಟಿ ನೀಡಿದರು. ಸಂಸ್ಥೆಯ ಮುಖ್ಯಸ್ಥರಾದ ಮೇಧಾ ಕರ್ಪೂರಮಠ, ಕ್ಯಾಂಪಸ್ ಸುಪ್ರವೈಜರ್ ಅರ್ಜುನ ಹೊಸಮನಿ, ಶೃತಿ ಆಲಮೇಲಕರ, ಅನಿಲ ರಾಠೋಡ ಮತ್ತಿತರರಿದ್ದಾರೆ.
ವಿಜಯಪುರ ನಗರದ ಎಪಿಎಂಸಿ ಬಳಿ ಇರುವ ವಿಜಯವಾಣಿ ಮುದ್ರಣಾಲಯಕ್ಕೆ ಆರ್‌ಕೆಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಭೇಟಿ ನೀಡಿದರು. ಸಂಸ್ಥೆಯ ಮುಖ್ಯಸ್ಥರಾದ ಮೇಧಾ ಕರ್ಪೂರಮಠ, ಕ್ಯಾಂಪಸ್ ಸುಪ್ರವೈಜರ್ ಅರ್ಜುನ ಹೊಸಮನಿ, ಶೃತಿ ಆಲಮೇಲಕರ, ಅನಿಲ ರಾಠೋಡ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯವಾಣಿ ಪತ್ರಿಕಾ ಕಚೇರಿಗೆ ಭೇಟಿ
  • ಮುದ್ರಣಾಲಯ ಕಣ್ತುಂಬಿಕೊಂಡ ವಿದ್ಯಾರ್ಥಿಗಳು
  • ಆರ್‌ಕೆಎಂ ಶಿಕ್ಷಣ ಸಂಸ್ಥೆಯ ಕಳಕಳಿ
  • ಪತ್ರಿಕೋದ್ಯಮ ಕುರಿತು ಮಾಹಿತಿ ಪಡೆದ ಯೂಥ್ಸ್
ವಿಜಯಪುರ: ‘ಮಾಹಿತಿ, ಮನರಂಜನೆ ಹಾಗೂ ಶಿಕ್ಷಣ’ದ ಪ್ರಮುಖ ಧ್ಯೇಯಗಳನ್ನಿಟ್ಟುಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾರಂಗದ ಕುರಿತು ಜ್ಞಾನ ಪಡೆಯುವ ನಿಟ್ಟಿನಲ್ಲಿ ಪ್ರತಿಷ್ಠಿತ ಆರ್‌ಕೆಎಂ ಶಿಕ್ಷಣ ಸಂಸ್ಥೆ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ‘ವಿಜಯವಾಣಿ’ ಪತ್ರಿಕಾ ಕಚೇರಿ ಮತ್ತು ಮುದ್ರಣಾಲಯಕ್ಕೆ ಭೇಟಿ ನೀಡಿದರು.
ಪತ್ರಿಕೆಗಳ ಕಾರ್ಯವೈಖರಿ, ಪತ್ರಿಕೋದ್ಯಮದ ಇತಿಹಾಸ, ಗುರಿ ಮತ್ತು ಉದ್ದೇಶಗಳು, ಮುದ್ರಣ ಯಂತ್ರಗಳ ಕುರಿತ ಜ್ಞಾನ ಪಡೆಯುವುದು ಸೇರಿದಂತೆ ಒಟ್ಟಾರೆ ಪತ್ರಿಕೋದ್ಯಮದ ಸಮಗ್ರ ಮಾಹಿತಿ ಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯ ಭಾಗವಾಗಿ ಹಮ್ಮಿಕೊಂಡ ಈ ಶೈಕ್ಷಣಿಕ ಪ್ರವಾಸ ಅತ್ಯಂತ ಯಶಸ್ವಿಯಾಯಿತು.
ಇಂಡಿ ರಸ್ತೆಯಲ್ಲಿರುವ ಎಪಿಎಂಸಿ ಪಕ್ಕದ ಮುದ್ರಣಾಲಯಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು, ಸಂಪಾದಕೀಯ ವಿಭಾಗ, ಜಾಹೀರಾತು ಮತ್ತು ಪ್ರಸರಣ ವಿಭಾಗ, ಮುದ್ರಣಾಲಯದ ಸಮಗ್ರ ಮಾಹಿತಿ ಪಡೆದರು. ಕನ್ನಡ ಪತ್ರಿಕೋದ್ಯಮ ಇತಿಹಾಸದಲ್ಲಿ ವಿಜಯವಾಣಿ ಪತ್ರಿಕೆ ಬೆಳೆದು ಬಂದ ಬಗೆ ಹಾಗೂ ಸಾಧನೆಯ ಪಥ ಕುರಿತು ಶ್ಲಾಘನೀಯ ವ್ಯಕ್ತಪಡಿಸಿದರಲ್ಲದೇ ಪತ್ರಿಕೋದ್ಯಮ ಕ್ಷೇತ್ರದಲ್ಲಿರುವ ಉದ್ಯೋಗವಕಾಶಗಳ ಕುರಿತು ಮಾಹಿತಿ ಪಡೆದು ಬರುವ ದಿನಗಳಲ್ಲಿ ಆಸಕ್ತಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ, ಪತ್ರಿಕೆಗಳನ್ನು ಕೊಂಡು ಓದುವ ಇಂಗಿತ ವ್ಯಕ್ತಪಡಿಸಿದರು.
ಸಂಸ್ಥೆಯ ಮುಖ್ಯಸ್ಥರಾದ ಮೇಧಾ ಕರ್ಪೂರಮಠ ಮಾತನಾಡಿ, ವಿಜಯಸಂಕೇಶ್ವರ ಅವರು ನಂಬಿಕೆಯ ಪ್ರತೀಕ. ಅವರು ಹಿಡಿದ ಹಠ ಸಾಧಿಸುವ ಛಲಗಾರರು. ಯಾವುದೇ ಯೋಜನೆ ಕೈಗೆತ್ತಿಕೊಂಡರೂ ಅದನ್ನು ಯಶಸ್ವಿಗೊಳಿಸುವವರೆಗೂ ಅವರು ವಿಶ್ರಮಿಸುವುದಿಲ್ಲ. ಹೀಗಾಗಿ ಅವರೊಂದು ಪ್ರೇರಣೆ. ಅವರಿಂದ ಸ್ಥಾಪಿತಗೊಂಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕನ್ನಡ ಪತ್ರಿಕೋದ್ಯಮ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿದ ವಿಜಯವಾಣಿ ವಿಶ್ವಾಸಾರ್ಹತೆಗೆ ಹೆಸರಾಗಿದೆ. ನಮ್ಮ ಸಂಸ್ಥೆಯಲ್ಲಿ ವಿಜಯವಾಣಿ ಪತ್ರಿಕೆಯೊಂದನ್ನೇ ಹಾಕಿಸುತ್ತೇವೆಂದರೆ ಇದರಿಂದ ನಮ್ಮ ಸಂಸ್ಥೆಯ ಪತ್ರಿಕೆಯೊಂದಿಗೆ ಹೊಂದಿರುವ ಒಡನಾಟ ಮತ್ತು ಪತ್ರಿಕೆ ಮೇಲಿಟ್ಟಿರುವ ವಿಶ್ವಾಸವನ್ನು ಅರಿಯಬಹುದೆಂದು ಮಾರ್ಮಿಕವಾಗಿ ನುಡಿದರು.
ಕ್ಯಾಂಪಸ್ ಸುಪ್ರವೈಜರ್ ಅರ್ಜುನ ಹೊಸಮನಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಈ ಯುಗದಲ್ಲಿಯೂ ಪತ್ರಿಕೆಗಳು ತಮ್ಮ ಅಸ್ಥಿತ್ವ ಕಾಯ್ದುಕೊಂಡಿವೆ ಎಂದರೆ ಓದುಗರು ಪತ್ರಿಕೆ ಮೇಲಿಟ್ಟಿರುವ ವಿಶ್ವಾಸ, ನಂಬುಗೆಯೇ ಕಾರಣ. ಸ್ವಾತಂತ್ರೃ ಚಳುವಳಿ ಸಂದರ್ಭ ಪತ್ರಿಕೆಗಳ ಪಾತ್ರ ಅತ್ಯಂತ ಮಹತ್ವದ್ದು. ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟಕ್ಕೆ ಅಣಿಗೊಳಿಸುವಲ್ಲಿ ಪತ್ರಿಕೆಗಳು ಸಾಕಷ್ಟು ಶ್ರಮಿಸಿವೆ. ಅದರಲ್ಲೂ ಕನ್ನಡ ಪತ್ರಿಕೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇದೀಗ ವಿಜಯವಾಣಿ ಪತ್ರಿಕೆ ಸಹ ಅತ್ಯಂತ ಕಡಿಮೆ ಅವಧಿಯಲ್ಲಿ ನಾಡಿನ ಜನರ ಮನ ಗೆಲ್ಲುವಲ್ಲಿ ಸಫಲವಾಗಿದೆ ಎಂದರು.
ವಿಜಯವಾಣಿ ಜಿಲ್ಲಾ ಹಿರಿಯ ವರದಿಗಾರ ಪರಶುರಾಮ ಭಾಸಗಿ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿರುವ ವಿಫುಲ ಉದ್ಯೋಗವಕಾಶಗಳು, ವಿಜಯವಾಣಿ ಪತ್ರಿಕೆಯ ಆರಂಭ, ಸಂಸ್ಥಾಪಕರಾದ ಪದ್ಮಶ್ರೀ ವಿಜಯ ಸಂಕೇಶ್ವರ, ಆನಂದ ಸಂಕೇಶ್ವರ ಅವರ ಸಾಧನೆ ಕುರಿತು ವಿವರಿಸಿದರು.
ಕ್ಯಾಂಪಸ್ ಸುಪ್ರವೈಜರ್ ಅರ್ಜುನ ಹೊಸಮನಿ, ಶೃತಿ ಆಲಮೇಲಕರ, ಅನಿಲ ರಾಠೋಡ, ವಿಜಯವಾಣಿ ಪ್ರಸರಣ ವಿಭಾಗದ ಮುಖ್ಯಸ್ಥ ಈರಣ್ಣ ಅವಟಿ, ಸಂತೋಷ ಗೋಡಿಕಟ್ಟಿ, ಮುದ್ರಣ ವಿಭಾಗದ ಮುಖ್ಯಸ್ಥ ಸುರೇಶ ಶಿರೋಳ, ಮಂಜುನಾಥ ಬಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net