ಯತ್ನಾಳ ಸೇರ್ಪಡೆ ಬಿಜೆಪಿಗೆ ಅನಿವಾರ್ಯ

ಗೊಳಸಂಗಿ ಸಮೀಪದ ಮುಕಾರ್ತಿಹಾಳ ಗ್ರಾಮದ ಪರಮಭಕ್ತ ಬಸವರಾಜ ಮಸಬಿನಾಳ ಅವರ ಮನೆಗೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಭಾನುವಾರ ತಡರಾತ್ರಿ ಅನಿರೀಕ್ಷಿತವಾಗಿ ಭೇಟಿ ನೀಡಿದರು.
ಗೊಳಸಂಗಿ ಸಮೀಪದ ಮುಕಾರ್ತಿಹಾಳ ಗ್ರಾಮದ ಪರಮಭಕ್ತ ಬಸವರಾಜ ಮಸಬಿನಾಳ ಅವರ ಮನೆಗೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಭಾನುವಾರ ತಡರಾತ್ರಿ ಅನಿರೀಕ್ಷಿತವಾಗಿ ಭೇಟಿ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಕಾರ್ತಿಹಾಳ
  • ಶ್ರೀಗಳ ಭೇಟಿ
ಗೊಳಸಂಗಿ: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಬೇಕಾದರೆ, ಅದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಕೂಡಲೇ ಪಕ್ಷಕ್ಕೆ ಸೇರಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧೀಶ ಬಸವಜಯ ಮೃತ್ಯಂಜಯ ಮಹಾಸ್ವಾಮಿ ಹೇಳಿದರು.
ಸಮೀಪದ ಮುಕಾರ್ತಿಹಾಳದ ಪರಮಭಕ್ತ ಬಸವರಾಜ ಸಾಯಬಣ್ಣ ಮಸಬಿನಾಳ ಮನೆಗೆ ಭಾನುವಾರ ಖಾಸಗಿ ಕಾರ್ಯ ನಿಮಿತ್ತ ಭೇಟಿ ನೀಡಿ, ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾಡಿನಾದ್ಯಾಂತ ಶಾಸಕರಿಗೆ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಅಸಂಖ್ಯಾತ ಬೆಂಬಲಿಗರಿದ್ದಾರೆ. ಮುಂಬರುವ 2028ರ ಚುನಾವಣೆಯಲ್ಲಿ ಆ ಪಡೆ ಒಂದು ದೈತ್ಯ ಶಕ್ತಿಯಾಗಿ ಯತ್ನಾಳ ಬೆನ್ನಿಗೆ ನಿಲ್ಲಲಿದೆ. ಈ ನಿಟ್ಟಿನಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಮರಳಿ ತನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಅನಿವಾರ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಚಮಸಾಲಿ ಜನಾಂಗಕ್ಕೆ 2ಎ ಮೀಸಲಾತಿ ಹೋರಾಟ ಈಗಾಗಲೇ 8 ಹಂತಗಳನ್ನು ಪೂರೈಸಿದ್ದು, ಡಿ. 21 ರಿಂದ ದೇವರ ಹಿಪ್ಪರಗಿಯಿಂದ ಮೀಸಲಾತಿ ಹೋರಾಟ ಮುಂದುವರಿಯಲಿದೆ. ಇನ್ನೂ ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದ ಕಾರ್ಯ ಮುಂದುವರಿದಿದೆ ಎಂದು ಹೇಳಿದರು.
ಯುವ ಮುಖಂಡ ಬಸವರಾಜ ಮಸಬಿನಾಳ ಮತ್ತು ಕುಟುಂಬಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net