ಕುಸ್ತಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ

ವಿಜಯಪುರ ಹೊರ ವಲಯದ ಹಿಟ್ಟಿನಹಳ್ಳಿಯಲ್ಲಿ ದ್ಯಾಮವ್ವ ತಾಯಿ ಹಾಗೂ ಮಾರುತೇಶ್ವರ ಜಾತ್ರೆ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯನ್ನು ಗಣ್ಯರು ಉದ್ಘಾಟಿಸಿದರು. ಹಾಸಿಂಪೀರ ವಾಲಿಕಾರ, ರಾಜುಗೌಡ ಕಳಸಗೊಂಡ, ಜಗನ್ನಾಥ ಚೌಧರಿ ಮತ್ತಿತರರಿದ್ದಾರೆ.
ವಿಜಯಪುರ ಹೊರ ವಲಯದ ಹಿಟ್ಟಿನಹಳ್ಳಿಯಲ್ಲಿ ದ್ಯಾಮವ್ವ ತಾಯಿ ಹಾಗೂ ಮಾರುತೇಶ್ವರ ಜಾತ್ರೆ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯನ್ನು ಗಣ್ಯರು ಉದ್ಘಾಟಿಸಿದರು. ಹಾಸಿಂಪೀರ ವಾಲಿಕಾರ, ರಾಜುಗೌಡ ಕಳಸಗೊಂಡ, ಜಗನ್ನಾಥ ಚೌಧರಿ ಮತ್ತಿತರರಿದ್ದಾರೆ.
Published on
ವಿಜಯಪುರ: ಕುಸ್ತಿ ಪಟುಗಳಿಗೆ ನಿರಂತರ ವ್ಯಾಯಾಮ ಮತ್ತು ಯುಕ್ತಿ ಅತ್ಯವಶ್ಯಕ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರ ಹೊರ ವಲಯದ ಹಿಟ್ಟಿನಹಳ್ಳಿ ಗ್ರಾಮದಲ್ಲಿ ದ್ಯಾಮವ್ವ ತಾಯಿ ಹಾಗೂ ಮಾರುತೇಶ್ವರ ಜಾತ್ರೆ ಉತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕುಸ್ತಿ ಇಂದು ಭಾರತದ ಪ್ರಮುಖ ಆಟಗಳಲ್ಲಿ ಒಂದಾಗಿದೆ. ಕರ್ನಾಟಕ, ಮಹಾರಾಷ್ಟç ಹಾಗೂ ಪಂಜಾಬ ರಾಜ್ಯಗಳಲ್ಲಿ ಹೆಚಾಗಿ ಕುಸ್ತಿ ಪಟುಗಳನ್ನು ಮತ್ತು ಸ್ಪರ್ಧೆಗಳನ್ನು ಕಾಣುತ್ತೇವೆ. ರಾಜ್ಯದಲ್ಲಿ ಸರ್ಕಾರ ಕುಸ್ತಿ ಆಟಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿಟ್ಟಿನಹಳ್ಳಿ ಪಿಕೆಪಿಎಸ್ ಮಾಜಿ ಅಧ್ಯಕ್ಷ ರಾಜುಗೌಡ ಕಳಸಗೊಂಡ ಮಾತನಾಡಿ, ಹಿಟ್ಟಿನಹಳ್ಳಿ ಜಾತ್ರೆಯಲ್ಲಿ ಕುಸ್ತಿ ಪಂದ್ಯ ವಿಶೇಷವಾಗಿದೆ. ಸುಮಾರು ಅರವತ್ತೆÊದು ಜೋಡಿ ಕುಸ್ತಿಗಳು ನಡೆದಿರುವುದು ಸಂತಸದ ಸಂಗತಿ ಎಂದರು. ದೈಹಿಕ ಶಿಕ್ಷಣ ಶಿಕ್ಷಕ ಆರ್.ಬಿ. ಬಿರಾದಾರ ಮಾತನಾಡಿದರು.
ಸಂಘಟಕರಾದ ಜಗನ್ನಾಥ ಚೌಧರಿ, ಭೀಮನಗೌಡ ಬಿರಾದಾರ, ಶರಣು ಸಾಲಿ, ಹುಸೇನ ವಾಲಿಕಾರ, ಸುಭಾಷ ಯಂಭತ್ತನಾಳ, ಸಾಹೇಬಗೌಡ ಬಿರಾದಾರ, ಚಂದ್ರಶೇಖರ ಮಲಘಾಣ, ಅಶೋಕಗೌಡ ಬಗಲಿ, ಶ್ರೀಕಾಂತ ಗೊಂಗಡಿ, ಸುರೇಶ ಇಂಡಿ, ಮಲ್ಲಪ್ಪ ಭಾವಿಕಟ್ಟಿ, ನಿಂಗಪ್ಪ ಸಾರವಾಡ, ರೇವಣಸಿದ್ದಪ್ಪ ಗೋಣಸಗಿ, ಪ್ರಕಾಶ ಚಿಕ್ಕಲಕಿ, ಚಂದ್ರಶೇಖರ ಇಂಡಿ, ವಿಠ್ಠಲ ಸಾರವಾಡ, ಸುಭಾಷ ಚವಾಣ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net