ಭಾರತೀಯ ಯೋಗ ಪದ್ಧತಿಗೆ ವಿಶ್ವ ಮನ್ನಣೆ

ವಿಜಯಪುರದ ಎವಿಎಸ್ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಯೋಗ ಮಹೋತ್ಸವ-2026, 55 ದಿನಗಳ ಕೌಂಟ್‌ಡೌನ್ ಕಾರ್ಯಕ್ರಮವನ್ನು ನಿರ್ಮಲಾ ಕೆ.ಜಿ. ಉದ್ಘಾಟಿಸಿದರು. ಚೇತನ ವಿಶ್ವಕಮ್ಮಾರ, ಡಿ.ಎನ್. ಧರಿ, ಸತೀಶ ಪಾಟೀಲ ಮತ್ತಿತರರಿದ್ದಾರೆ.
ವಿಜಯಪುರದ ಎವಿಎಸ್ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಯೋಗ ಮಹೋತ್ಸವ-2026, 55 ದಿನಗಳ ಕೌಂಟ್‌ಡೌನ್ ಕಾರ್ಯಕ್ರಮವನ್ನು ನಿರ್ಮಲಾ ಕೆ.ಜಿ. ಉದ್ಘಾಟಿಸಿದರು. ಚೇತನ ವಿಶ್ವಕಮ್ಮಾರ, ಡಿ.ಎನ್. ಧರಿ, ಸತೀಶ ಪಾಟೀಲ ಮತ್ತಿತರರಿದ್ದಾರೆ.
Published on
ವಿಜಯಪುರ: ಮಾನವನ ಸರ್ವತೋಮುಖ ಅಭಿವೃದ್ಧಿಯ ಮುಖ್ಯ ಗುರಿ ಹೊಂದಿರುವ ಯೋಗ ವಿಶ್ವದಾದ್ಯಂತ ಹೆಚ್ಚು ಮನ್ನಣೆ ಪಡೆದಿದೆ ಎಂದು ಬಿಎಲ್‌ಡಿಇ ಡೀಮ್ಡ್ ವಿವಿ ಸಂಶೋಧನಾ ಕೇಂದ್ರದ ಸಂಯೋಜಕಿ ಡಾ. ನಿರ್ಮಲಾ ಕೆ.ಜಿ. ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ವೈದ್ಯಕೀಯ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಆಯುಷ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಮೊರಾರ್ಜಿ ದೇಸಾಯಿ ರಾಷ್ಟಿçÃಯ ಯೋಗ ಸಂಸ್ಥೆಯ ಸಹಯೋಗದಲ್ಲಿ ಅಂತಾರಾಷ್ಟಿçÃಯ ಯೋಗ ದಿನಾಚರಣೆ- 2026ರ ಅಂಗವಾಗಿ ಯೋಗ ಮಹೋತ್ಸವ-2026, 55 ದಿನಗಳ ಕೌಂಟ್‌ಡೌನ್ ಕಾರ್ಯಕ್ರಮ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ನಮಗೆ ಸಾಕಷ್ಟು ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳಿದ್ದರೂ ಯೋಗವು ನಾನಾ ರೋಗಗಳನ್ನು ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಈ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿಯೊಬ್ಬರೂ ಪ್ರತಿದಿನ ಯೋಗ ಮಾಡುವ ಮೂಲಕ ಆರೋಗ್ಯ ವೃದ್ಧಿಸಿಕೊಂಡು ನಿರೋಗಿಯಾಗಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
e್ಞÁನಯೋಗಾಶ್ರಮದ ಬಸವರಾಜ ಸ್ವಾಮೀಜಿ, ಪ್ರಾಚಾರ್ಯ ಅಶೋಕ ಪಾಟೀಲ, ಆಸ್ಪತ್ರೆಯ ಆಡಳಿತಾಽಕಾರಿ ಸಂಜಯ ಕಡ್ಲಿಮಟ್ಟಿ, ನ್ಯಾಯವಾದಿ ರಂಜಿತಾ ಕೆ.ಆರ್., ಡೀಮ್ಡ್ ವಿವಿಯ ಫಿಜಿಯಾಲಜಿ ವಿಭಾಗದ ಜ್ಯೋತಿ ಖೋದ್ನಾಪುರ, ಕಾರ್ಯಕ್ರಮದ ನೋಡಲ್ ಅಽಕಾರಿ ಸತೀಶ ಪಾಟೀಲ, ಪ್ರಾಧ್ಯಾಪಕ ಡಿ.ಎನ್. ಧರಿ, ಸಹ ಪ್ರಾಧ್ಯಾಪಕಿ ಭುವನೇಶ್ವರಿ ಪಾಟೀಲ, ಯೋಗ ತರಬೇತುದಾರ ಚೇತನ ವಿಶ್ವಕಮ್ಮಾರ ಮತ್ತಿತರರಿದ್ದರು.
ಬೆಳಗಾವಿಯ ಯೋಗ ತರಬೇತುದಾರ ಅಮೋಲ ಜೈನ ಅವರು ಅಗ್ನಿಹೋತ್ರ ಹೋಮದೊಂದಿಗೆ ಯೋಗ ಪ್ರಾರಂಭವಾಯಿತು. ಮಹಾವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಎರಡು ನೃತ್ಯ ಯೋಗ ಪ್ರದರ್ಶನಗಳು ನಡೆದವು. ಕಾಮನ್ ಯೋಗ ಪ್ರೋಟೋಕಾಲ್ ಅಽವೇಶನವನ್ನು ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕಿ ಸುನಿತಾ ಬಿರಾದಾರ ಹಾಗೂ ಬಿಎಲï‌ಡಿಇ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದ ಸ್ವಸ್ಥವೃತ್ತ ಮತ್ತು ಯೋಗ ವಿಭಾಗದ ಯೋಗ ತರಬೇತುದಾರ ಚೇತನ ವಿಶ್ವಕಮ್ಮಾರ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net