ಬಿಜೆಪಿ ಗೆಲುವಿಗೆ ಕಾರ್ಯಕರ್ತರ ವಿಜಯೋತ್ಸವ

 ವಿಜಯಪುರ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸವನ್ನು ಹಿರಿಯ ಸಾಹಿತಿ ಪ್ರೊ. ದೊಡ್ಡಣ್ಣ ಬಜಂತ್ರಿ ಉದ್ಘಾಟಿಸಿದರು. ಪ್ರಾಚಾರ್ಯ ಶಿವಾನಂದ ನುಚ್ಚಿ, ಶರಣಮ್ಮ ಹಾದಿಮನಿ, ರುದ್ರಮ್ಮ ಗಿಡ್ಡಪ್ಪಗೋಳ ಇತರರಿದ್ದಾರೆ.
ವಿಜಯಪುರ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸವನ್ನು ಹಿರಿಯ ಸಾಹಿತಿ ಪ್ರೊ. ದೊಡ್ಡಣ್ಣ ಬಜಂತ್ರಿ ಉದ್ಘಾಟಿಸಿದರು. ಪ್ರಾಚಾರ್ಯ ಶಿವಾನಂದ ನುಚ್ಚಿ, ಶರಣಮ್ಮ ಹಾದಿಮನಿ, ರುದ್ರಮ್ಮ ಗಿಡ್ಡಪ್ಪಗೋಳ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ
  • ಬಿಜೆಪಿ ಪಕ್ಷದ ಪರ ಜಯ ಘೋಷ
ವಿಜಯಪುರ:ಪಶ್ಚಿಮ ಬಂಗಾಳ, ಆಸ್ಸಾಂ, ಪಾಂಡಿಚೇರಿಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವಿನ ನಗೆ ಬೀರಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಸೋಮವಾರ, ಇಲ್ಲಿನ ಗಾಂಧಿವೃತ್ತದ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು 
ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನಿಸುವ ಜತೆಗೆ ಬಿಜೆಪಿ ಪಕ್ಷದ ಪರ ಜಯ ಘೋಷಗಳನ್ನು ಮೊಳಗಿಸಿ ಸಂಭ್ರಮಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಪಶ್ಚಿಮ ಬಂಗಾಳ, ಪುದಚೇರಿ, ಆಸ್ಸಾಂನಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರ ಒಲವು ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷಿ. ಹಲವು ವರುಷಗಳಿಂದ ಅಧಿಕಾರದಲ್ಲಿದ್ದ ತೃಣಮೂಲ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅರಳಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ಅವರ ಕಾರ್ಯವೈಖರಿಯಿಂದ ಬೇಸತ್ತಿದ್ದ ಬಂಗಾಳದ ಜನತೆ ನಿರೀಕ್ಷೆಯಂತೆ ಬಿಜೆಪಿಗೆ ಬೆಂಬಲಿಸಿದ್ದು, ಸದ್ಯ ಅಲ್ಲಿ ಅಭಿವೃದ್ಧಿ ಪರ್ವ ಆರಂಭಾಗಲಿದೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಮಮತಾ ಬ್ಯಾನರ್ಜಿ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪೋಷಿಸಿದರು. ಆದರೆ, ಅಲ್ಲಿನ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ದರ್ಪದಿಂದ ಮೆರೆಯುತ್ತಿದ್ದ ಮಮತಾ ಬ್ಯಾನರ್ಜಿ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಆಗುತ್ತಿರುವ ಅಭಿವೃದ್ಧಿ ಯೋಜನೆಗಳಿಂದಾಗಿಯೇ ಜನತೆ ಬಿಜೆಪಿ ಜತೆಗೆ ನಿಂತಿದ್ದಾರೆ ಎಂದರು.
ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಪಾಲಿಕೆ ಸದಸ್ಯೆ ಸ್ವಪ್ನಾ ಕಣಮುಚನಾಳ ಮಾತನಾಡಿದರು. ಮುಖಂಡರಾದ ಸುರೇಶ ಬಿರಾದಾರ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಉಮೇಶ ಕೊಳಕರ, ಶಿಲ್ಪಾ ಕುದುರಗೊಂಡ, ಸಂದೀಪ ಪಾಟೀಲ, ಭೀಮಾಶಂಕರ ಹದನೂರ, ಕೃಷ್ಣಾ ಗುನಾಳಕರ, ರಾಜು ಮಗಿಮಠ, ಭರತ ಕೋಳಿ, ವಿಜಯ ಜೋಶಿ, ಪಾಪುಸಿಂಗ ರಜಪೂತ, ರಾಜೇಶ ತಾವಸೆ, ಭೀಮಸಿಂಗ ರಾಥೋಡ, ಶರಣಬಸಪ್ಪ ಕುಂಬಾರ, ಸಂತೋಷ ಹಲವಾಯಿ, ಅಪ್ಪು ಕುಂಬಾರ, ರಾಜು ಬಿರಾದಾರ, ಜಗದೀಶ ಮುಚ್ಚಂಡಿ, ಸಂತೋಷ ಯಂಕಪ್ಪಗೂಳ, ಪ್ರಹ್ಲಾದ ಕಾಂಬಳೆ, ವಿವೇಕ ತಾವರಗೇರಿ, ಶಿವರಾಜ ಮಡಿವಾಳ, ಮಂಥನ ಗಾಯಕವಾಡ, ಭಾರತಿ ಭುಯ್ಯರ, ಶಾಂತಾ ಉತ್ಲಾಸಕರ, ಶಾಂತಾ ಯಳಮೇಲಿ, 
ಶ್ರೀದೇವಿ ಅವಧಿ, ಬಸಮ್ಮಾ ಗುಜರಿ, ಪ್ರಿಯಾಂಕಾ ಶೇರಖಾನೆ ಮತ್ತಿತರರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net